ಸೈಬರ್ ಭಯೋತ್ಪಾದನೆ ಅತಿ ದೊಡ್ಡ ಅಪಾಯ: ರಾಜನಾಥ್ ಸಿಂಗ್
ಸೈಬರ್ ಕ್ರೈಂ ನೊಂದಿಗೆ ಸೈಬರ್ ಭಯೋತ್ಪಾದನೆ ಸಹ ಇಂದಿನ ದಿನಮಾನದ ದೊಡ್ಡ ಅಪಾಯ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

Published On :
ನವದೆಹಲಿ: ಸೈಬರ್ ಕ್ರೈಂ ನೊಂದಿಗೆ ಸೈಬರ್ ಭಯೋತ್ಪಾದನೆ ಸಹ ಇಂದಿನ ದಿನಮಾನದ ದೊಡ್ಡ ಅಪಾಯ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
2015 ರ ಬ್ಯಾಚ್ ನ ತರಬೇತಿ ಪಡೆದ ಐಪಿಎಸ್ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿರುವ ಕೇಂದ್ರ ಗೃಹ ರಾಜನಾಥ್ ಸಿಂಗ್, ಇಂದಿನ ದಿನಗಳಲ್ಲಿ ಸೈಬರ್ ಕ್ರೈಮ್ ಪೊಲೀಸ್ ಅಧಿಕಾರಿಗಳಿಗೆ ಎದುರಾಗುತ್ತಿರುವ ಅತಿದೊಡ್ಡ ಸವಾಲಾಗಿ ಪರಿಣಮಿಸಿದೆ. ಸೈಬರ್ ಕ್ರೈಂ ನಷ್ಟೇ ಅಪಾಯಕಾರಿ ಸೈಬರ್ ಭಯೋತ್ಪಾದನೆ ಸಹ ಎಂದು ರಾಜನಾಥ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚುತ್ತಿವೆ. ಸೈಬರ್ ಕ್ರೈಮ್ ನಷ್ಟೇ ಸೈಬರ್ ಭಯೋತ್ಪಾದನೆ ಸಹ ಅಪಾಯಕಾರಿಯಾದದ್ದು, ಸೈಬರ್ ಜಗತ್ತಿನ ಅಪರಾಧಗಳು, ಹಲವು ಸ್ತರಗಳಲ್ಲಿ, ಭಾಷೆಗಳಲ್ಲಿ, ಸಂಸ್ಕೃತಿ, ಹಲವು ಕಾನೂನುಗಳಲ್ಲಿ ಹಬ್ಬಿಕೊಂಡಿರುತ್ತವೆ. ಆದ್ದರಿಂದ ತನಿಖೆ ನಡೆಸಿ ಸೈಬರ್ ಜಗತ್ತಿನ ಅಪರಾಧಿಗಳನ್ನು ತಲುಪುವುದು ಕಷ್ಟಸಾಧ್ಯ ಹಾಗೂ ಸವಾಲಿನ ಕೆಲಸ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ಪ್ರಾರಂಭದ ಹಂತದಿಂದಲೇ ಉದಾರತೆ, ಪ್ರಾಮಾಣಿಕತೆ ಮತ್ತು ಸಹಾನುಭೂತಿ ವಿಶ್ವಾಸಾರ್ಹತೆಗಳನ್ನು ರೂಢಿಸಿಕೊಳ್ಳಬೇಕು, ಜನರ ಸಮಸ್ಯೆಗಳನ್ನು ಬಗೆಹರಿಸುವ ಆಸಕ್ತಿಯಿಂದ ಕೆಲಸ ಮಾಡಬೇಕು, ಕೆಲಸಗಳಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕೆಂದು ಎಂದು ರಾಜನಾಥ್ ಸಿಂಗ್ ಯುವ ಅಧಿಕಾರಿಗಳಿಗೆ ಕರೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


