ದೇಶ

ಛತ್ತೀಸ್ ಗಢ: ಮಾವೊವಾದಿಗಳಿಗೆ ಮಾರಕವಾದ ₹ 500, 1000 ನೋಟುಗಳ ರದ್ದತಿ!

ಗರಿಷ್ಠ ಮುಖಬೆಲೆಯ ₹ 500, 1000 ನೋಟುಗಳ ರದ್ದತಿಯಿಂಡ ಭಯೋತ್ಪಾದಕರ ಆರ್ಥಿಕ ಮೂಲಕ್ಕೆ ಕತ್ತರಿ ಬೀಳಲಿದೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದರು.

ಛತ್ತೀಸ್ ಗಢ: ಮಾವೊವಾದಿಗಳಿಗೆ ಮಾರಕವಾದ ₹ 500, 1000 ನೋಟುಗಳ ರದ್ದತಿ!
ಛತ್ತೀಸ್ ಗಢ: ಮಾವೊವಾದಿಗಳಿಗೆ ಮಾರಕವಾದ ₹ 500, 1000 ನೋಟುಗಳ ರದ್ದತಿ!
Published On :
ರಾಯ್ ಪುರ: ಗರಿಷ್ಠ ಮುಖಬೆಲೆಯ ₹ 500, 1000  ನೋಟುಗಳ ರದ್ದತಿಯಿಂಡ ಭಯೋತ್ಪಾದಕರ ಆರ್ಥಿಕ ಮೂಲಕ್ಕೆ ಕತ್ತರಿ ಬೀಳಲಿದೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದರು. ಇದೇ ಅಂಶ ನಕ್ಸಲ್ ಚಟುವಟಿಕೆಗಳಲ್ಲಿ ಭಾಗಿಯಾಗುವವರಿಗೂ ಅನ್ವಯವಾಗಲಿದ್ದು, ದುಬಾರಿ ಬೆಲೆಯ ನೋಟುಗಳ ಚಲಾವಣೆ ರದ್ದುಗೊಳಿಸಿರುವುದು ಮಾವೊವಾದಿಗಳಿಗೆ ಮಾರಕವಾಗಿ ಪರಿಣಮಿಸಿದೆ. 
ಪ್ರಮುಖವಾಗಿ ನಕ್ಸಲ್ ಪೀಡಿತ ರಾಜ್ಯ ಛತ್ತೀಸ್ ಗಢದಲ್ಲಿ ನೋಟುಗಳ ರದ್ದತಿಯ ಪರಿಣಾಮ ಕಾಣಿಸುತ್ತಿದ್ದು, ತಲೆಮರೆಸಿಕೊಂಡಿರುವ ಮಾವೊವಾದಿಗಳು, ತೀವ್ರವಾದಿಗಳು ತಮ್ಮ ಬಳಿ ಇರುವ ಬೃಹತ್ ಪ್ರಮಾಣದ ಹಣವನ್ನು ಹೊಸ ನೋಟುಗಳಿಗೆ ಬದಲಾವಣೆ ಮಾಡಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 
ಪೊಲೀಸ್ ಅಧಿಕಾರಿಗಳ ಮಾಹಿತಿಯ ಪ್ರಕಾರ ಛತ್ತೀಸ್ ಗಢದ ಬಸ್ತಾರ್ ಪ್ರದೇಶದಲ್ಲಿರುವ ಮಾವೊವಾದಿಗಳು ಸುಮಾರು 7,000 ಕೋಟಿ ರೂಪಾಯಿ ಸಂಗ್ರಹಿಸಿದ್ದಾರೆ ಎಂದು ತಿಳಿದುಬಂದಿದ್ದು, ಪೊಲೀಸ್ ಅಧಿಕಾರಿಗಳು ಬ್ಯಾಂಕ್, ಎಟಿಎಂ, ಅಂಚೆ ಕಚೇರಿ ಗಳಲ್ಲಿ ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದೆ ಎಂದು ಮಾವೊವಾದಿ ನಿಗ್ರಹದಳದ ಡಿಜಿಪಿ ತಿಳಿಸಿದ್ದಾರೆ. 
ಸುಲಿಗೆ ಮೂಲಕ ಮಾವೊವಾದಿಗಳು ಕೋಟಿಗಟ್ಟಲೆ ಹಣ ಸಂಗ್ರಹಿಸಿದ್ದು, ಅದನ್ನು ಅವರ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದರು. ಆದರೆ ಈಗ ಕೇಂದ್ರ ಸರ್ಕಾರ ₹ 500, 1000 ನೋಟುಗಳನ್ನು ರದ್ದುಗೊಳಿಸಿರುವುದು ಮಾವೋವಾದಿಗಳಿಗೆ ಮಾರಕವಾಗಿ ಪರಿಣಮಿಸಿದ್ದು ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.