ಪರಮಾಣು ಶಸ್ತ್ರಾಸ್ತ್ರ ಕುರಿತು ಪರಿಕ್ಕರ್ ಹೇಳಿಕೆ: ಸ್ಪಷ್ಟನೆ ನೀಡುವಂತೆ ಕಾಂಗ್ರೆಸ್ ಆಗ್ರಹ
ಭಾರತ ಪರಮಾಣು ಶಸ್ತ್ರಾಸ್ತ್ರಗಳನ್ನು ಮೊದಲು ಬಳಸುವುದಿಲ್ಲ ಎನ್ನುವುದು ಯಾಕೆ? ಎಂದು ಪ್ರಶ್ನಿಸಿದ್ದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರ ಹೇಳಿಕೆ ಕುರಿತಂತೆ ಕೇಂದ್ರ ಸರ್ಕಾರ ಸ್ಪಷ್ಟನೆ...

Published On :
ಪಣಜಿ: ಭಾರತ ಪರಮಾಣು ಶಸ್ತ್ರಾಸ್ತ್ರಗಳನ್ನು ಮೊದಲು ಬಳಸುವುದಿಲ್ಲ ಎನ್ನುವುದು ಯಾಕೆ? ಎಂದು ಪ್ರಶ್ನಿಸಿದ್ದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರ ಹೇಳಿಕೆ ಕುರಿತಂತೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ.
ಈ ಕುರಿತಂತೆ ಮಾತನಾಡಿರುವ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು, ಪರಮಾಣು ಶಸ್ತ್ರಾಸ್ತ್ರ ಕುರಿತಂತೆ ಮನೋಹರ್ ಪರಿಕ್ಕರ್ ಅವರು ನೀಡಿದ್ದ ಹೇಳಿಕೆಯನ್ನು ನಾವು ಖಂಡಿಸುತ್ತೇವೆ. ಗಾಂಧೀಜಿಯವರ ಅಹಿಂಸಾತ್ಮಕ ತತ್ತ್ವವನ್ನು ಅನುಸರಿಸುವ ಭೂಮಿ ನಮ್ಮದು. ಪರಮಾಣು ಶಸ್ತ್ರಾಸ್ತ್ರ ಕುರಿತಂತೆ ನಿರಸ್ತ್ರೀಕರಣ ನೀತಿಯನ್ನು ನಾವು ನಂಬುತ್ತೇವೆಂದು ಹೇಳಿದ್ದಾರೆ.
ಪರಮಾಣು ಶಸ್ತ್ರಾಸ್ತ್ರ ಭಾರತ ಸರ್ಕಾರ ತನ್ನ ನೀತಿಯನ್ನು ಬದಲಿಸಿದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಪ್ರಧಾನಮಂತ್ರಿ ನರೇದ್ರ ಮೋದಿಯವರು ಹಾಗೂ ಕೇಂದ್ರ ಸರ್ಕಾರ ಕೂಡಲೇ ಸ್ಪಷ್ಟನೆ ನೀಡಬೇಕಿದೆ.
ಪರಮಾಣು ಶಸ್ತ್ರಾಸ್ತ್ರ ಕುರಿತಂತೆ ಮನೋಹರ್ ಪರಿಕ್ಕರ್ ಅವರು ಹೇಳಿಕೆಯನ್ನು ನೀಡಿದ್ದರು, ಈ ವೇಳೆ ಪಾಕಿಸ್ತಾನ ವಿರುದ್ಧ ನಡೆಸಲಾಗಿದ್ದ ಸೀಮಿತ ದಾಳಿ ಬಗ್ಗೆಯೂ ಮಾತನಾಡಿದ್ದರು. ಇಂತಹ ಹೇಳಿಕೆಗಳನ್ನು ಸಂಸ್ಕಾರಯುತ ಆರ್'ಎಸ್ಎಸ್ ನಿಂದ ಮಾತ್ರ ನೀಡಲು ಸಾಧ್ಯ. ಯುಪಿಎ ಅಧಿಕಾರಾವಧಿಯಲ್ಲಿಯೂ ಸೀಮಿತ ದಾಳಿಯನ್ನು ನಡೆಸಲಾಗಿತ್ತು. ಆದರೆ, ಈ ವಿಚಾರವನ್ನು ನಾವು ರಾಜಕೀಯ ಮಾಡಿರಲಿಲ್ಲ. ರಾಜಕೀಯದಿಂದ ಸೇನೆಯನ್ನು ದೂರ ಇಟ್ಟಿದ್ದೆವು. ಸೇನೆ ಮೇಲೆ ನಮಗೆ ಅಪಾರವಾದ ಗೌರವವಿದೆ. ಆದರೆ, ಈಗಿನ ಸರ್ಕಾರ ಸೇನೆ ವಿಚಾರದಲ್ಲಿ ರಾಜಕೀಯ ಮಾಡಿದೆ ಎಂದು ಹೇಳಿದ್ದಾರೆ.
ನಿನ್ನೆಯಷ್ಟೇ ಪರಮಾಣು ಶಸ್ತ್ರಾಸ್ತ್ರ ಕುರಿತತೆ ಹೇಳಿಕೆ ನೀಡಿದ್ದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು, ಪರಮಾಣು ಪರಿಕಲ್ಪನೆಯನ್ನು ಭಾರತ ಮೊದಲು ಬಳಸಿಲ್ಲ ಎಂದು ಜನರು ಹೇಳುತ್ತಾರೆ. ಆದರೆ, ಭಾರತ ರಾಷ್ಟ್ರ ಒಂದು ಜವಾಬ್ದಾರಿಯುತ ಪರಣಾಣು ಶಕ್ತಿ ಬಳಕೆದಾರನಾಗಿದ್ದು, ಪರಮಾಣು ಶಕ್ತಿಯನ್ನು ಭಾರತ ಎಂದಿಗೂ ಬೇಜವಾಬ್ದಾರಿಯುತವಾಗಿ ಬಳಸುವುದಿಲ್ಲ ಎಂದು ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಮನೋಹರ್ ಪರಿಕ್ಕರ್Congressಕಾಂಗ್ರೆಸ್indiaಭಾರತManohar ParrikarPakistanಪಾಕಿಸ್ತಾನnuclear weaponsಪರಮಾಣು ಶಸ್ತ್ರಾಸ್ತ್ರಗಳು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


