ಮುಂಬೈ: ಹೊಸ ನೋಟು ಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದ 73 ರ ವೃದ್ಧ ಸಾವು!
500, 1000 ರೂಗಳ ಹಳೆಯ ನೋಟುಗಳನ್ನು ನೀಡಿ 2000, 500 ರೂ ಹೊಸ ನೋಟನ್ನು ಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದ 73 ವಯಸ್ಸಿನ ವೃದ್ಧರೊಬ್ಬರು ಮೃತಪಟ್ಟಿರುವ ಘಟನೆ ಮುಂಬೈ ನ ಬ್ಯಾಂಕ್ ನಲ್ಲಿ..

Published On :
ಮುಂಬೈ: 500, 1000 ರೂಗಳ ಹಳೆಯ ನೋಟುಗಳನ್ನು ನೀಡಿ 2000, 500 ರೂ ಹೊಸ ನೋಟನ್ನು ಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದ 73 ವಯಸ್ಸಿನ ವೃದ್ಧರೊಬ್ಬರು ಮೃತಪಟ್ಟಿರುವ ಘಟನೆ ಮುಂಬೈ ನ ಬ್ಯಾಂಕ್ ನಲ್ಲಿ ನಡೆದಿದೆ.
ವಿಶ್ವಾಸ್ ವರ್ತಕ್ ಎಂಬುವವರು ಹರಿ ಓಂ ನಗರ್ ನ ಬ್ಯಾಂಕ್ ನಲ್ಲಿ ಘಟನೆ ನಡೆದಿದ್ದು, ಸುಮಾರು ಅರ್ಧ ಗಂಟೆ ಸರತಿ ಸಾಲಿನಲ್ಲಿ ನಿಂತಿದ್ದ ವೃದ್ಧ ಮೃತಪಟ್ಟಿದ್ದಾರೆ. ನೋಟ್ ಗಳನ್ನು ರದ್ದುಗೊಳಿಸಿದ 3 ದಿನಗಳ ಬಳಿಕ ಎಟಿಎಂ ನಿಂದ ಹಣ ತೆಗೆಯುವುದಕ್ಕೂ ನಾಗರಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಬೆಂಗಳೂರು, ಮುಂಬೈ ಗಳಲ್ಲಿ ಹಲವಾರು ಎಟಿಎಂ ಗಳಲ್ಲಿ ಹಣ ಸಿಗದೇ ನಾಗರಿಕರು ನಿರಾಶರಾಗಿದ್ದಾರೆ. ಇನ್ನೂ ಕೆಲವೆಡೆ ಹಣ ತೆಗೆಯಲು ಸಾಧ್ಯವಾಯಿತಾದರೂ ಸಹ ಕಡಿಮೆ ಮುಖಬೆಲೆ ನೋಟುಗಳ ಚಿಲ್ಲರೆ ಪಡೆಯಲು ನಾಗರಿಕರು ಸಮಸ್ಯೆ ಎದುರಿಸುವ ಘಟನೆಗಳೂ ನಡೆದಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


