ನೋಟ್ ಮೇಲೆ ನಿಷೇಧ: ಮೋದಿ ವಿರುದ್ಧ ಕಿಡಿಕಾರಿದ ಶಿವಸೇನೆ
ದುಬಾರಿ ಬೆಲೆಯ ನೋಟಿನ ಮೇಲೆ ಕೇಂದ್ರದ ಆಡಳಿತಾರೂಢ ನರೇಂದ್ರ ಮೋದಿ ಸರ್ಕಾರ ನಿಷೇಧ ಹೇರಿರುವುದಕ್ಕೆ ಶಿವಸೇನೆ ಗುರುವಾರ ಕಿಡಿಕಾರಿದೆ...

ನವದೆಹಲಿ: ದುಬಾರಿ ಬೆಲೆಯ ನೋಟಿನ ಮೇಲೆ ಕೇಂದ್ರದ ಆಡಳಿತಾರೂಢ ನರೇಂದ್ರ ಮೋದಿ ಸರ್ಕಾರ ನಿಷೇಧ ಹೇರಿರುವುದಕ್ಕೆ ಶಿವಸೇನೆ ಗುರುವಾರ ಕಿಡಿಕಾರಿದೆ.
ಈ ಕುರಿತಂತೆ ತನ್ನ ಮುಖವಾಣಿ ಸಾಮ್ನಾದಲ್ಲಿ ಬರೆದುಕೊಂಡಿರುವ ಶಿವಸೇನೆ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ಸೀಮಿತ ದಾಳಿ ನಡೆಸಿದ ನಂತರವೂ ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆ ನಡೆಯುತ್ತಲೇ ಬರುತ್ತಿದೆ. ಇದೀಗ ಕೇಂದ್ರ ಕಪ್ಪುಹಣದ ವಿರುದ್ಧ ಸೀಮಿತ ದಾಳಿ ನಡೆಸಿರುವುದಾಗಿ ಹೇಳಿ ದುಬಾರಿ ಬೆಲೆಯ ನೋಟಿನ ಮೇಲೆ ನಿಷೇಧ ಹೇರಿದೆ. ಕಪ್ಪುಹಣ ಹಾಗೂ ಅಕ್ರಮ ಹಣದ ವಿರುದ್ಧ ಈ ಸೀಮಿತ ದಾಳಿ ಯಾವ ರೀತಿಯಲ್ಲಿ ಕೆಲಸ ಮಾಡಲಿದೆ ಎಂಬುದನ್ನು ಮುಂಬರುವ ದಿನಗಳೇ ಹೇಳಿಲಿದೆ ಎಂದು ಹೇಳಿದೆ.
ಭ್ರಷ್ಟಾಚಾರ ಎಂಬುದು ಮನಃಸ್ಥಿತಿಗೆ ಸಂಬಂಧಪಟ್ಟದ್ದು. ಮನಸ್ಥಿತಿಗಳು ಬದಲಾವಣೆಯಾಗದಿದ್ದರೆ ಯಾವುದೇ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡರೂ ಅದು ಕೆಲಸ ಮಾಡುವುದಿಲ್ಲ. ದೇಶಕ್ಕೆ ಬಂದಿರುವ ಕಪ್ಪುಹಣವೆಂಬ ಪಿಡುಗು ಅದು ಎಂದಿಗೂ ತೊಲಗುವುದಿಲ್ಲ.
ಕಳೆದ ತಿಂಗಳು ಮೋದಿ ಸರ್ಕಾರ ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಗಳ ಮೇಲೆ ಸೀಮಿತ ದಾಳಿಯನ್ನು ನಡೆಸಿತ್ತು. ಈ ಬಾರಿ ಕಪ್ಪುಹಣದ ವಿರುದ್ಧ ಸೀಮಿತ ದಾಳಿಯನ್ನು ನಡೆಸಿದೆ. ಈ ಬಾರಿ ಹಠಾತ್ ಆಗಿ ದಾಳಿ ಮಾಡಿದೆ. ಇದು ಜನರಿಗೆ ಸಾಕಷ್ಟು ಸಮಸ್ಯೆಯನ್ನು ತಂದೊಡ್ಡುವಂತೆ ಮಾಡಿದೆ ಎಂದು ಹೇಳಿಕೊಂಡಿದೆ.
ಅಕ್ರಮ ಹಣದ ವಿರುದ್ಧ ಸಾಕಷ್ಟು ಕ್ರಮಗಳನ್ನು ಈ ಹಿಂದೆ ಕೂಡ ತೆಗೆದುಕೊಳ್ಳಲಾಗಿದ್ದು. ಇದರಿಂದ ಯಾವ ರೀತಿಯ ಪ್ರಯೋಜನವಾಗಿದೆ ಎಂಬುದು ಈಗಲೂ ಉತ್ತರ ಸಿಗದ ಪ್ರಶ್ನೆಯಾಗಿಯೇ ಉಳಿದಿದೆ. ಪ್ರಸ್ತುತ ಪ್ರಶ್ನೆ ಎದ್ದಿರುವುದು ಅಧಿಕಾರಕ್ಕೆ ಬರುವುದಕ್ಕೂ ಮುಂಚೆ ಮೋದಿ ಸರ್ಕಾರ ನೀಡಿದ್ದ ಭರವಸೆಗಳ ಕುರಿತಂತೆ.
ಅಧಿಕಾರಕ್ಕೆ ಬಂದರೆ ವಿದೇಶದಲ್ಲಿರುವ ಕಪ್ಪುಹಣವನ್ನು ಭಾರತಕ್ಕೆ ಮರಳಿ ತರುವುದಾಗಿ ಮೋದಿಯವರು ದೇಶದ ಜನತೆಗೆ ಭರವಸೆಯನ್ನು ನೀಡಿದ್ದರು. ಕಪ್ಪುಹಣವನ್ನು ಭಾರತಕ್ಕೆ ತರುವಲ್ಲಿ ಕೇಂದ್ರ ಸರ್ಕಾರ ಈ ವರೆಗೂ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ ಎಂಬುದು ಜನರ ಪ್ರಶ್ನೆಯಾಗಿದೆ.
ರು.500 ಹಾಗೂ 1,000 ಮುಖಬೆಲೆ ನೋಟುಗಳ ಮೇಲೆ ನಿಷೇಧ ಹೇರುವ ಮೂಲಕ ಮೋದಿಯವರು ಇದಕ್ಕೆ ಉತ್ತರವನ್ನು ನೀಡಿದ್ದಾರೆ. ಈ ರೀತಿಯ ನಿರ್ಧಾರಗಳು ಎಷ್ಟರ ಮಟ್ಟಿಗೆ ಫಲವನ್ನು ನೀಡಲಿದೆ ಎಂಬುದನ್ನು ಮುಂಬರುವ ಸಮಯವೇ ಹೇಳಲಿದೆ.
ಸರ್ಕಾರ ಈ ನಿರ್ಧಾರ ಸಾಕಷ್ಟು ಸುಧೀರ್ಘ ಸಮಯದ ಬಳಿಕವಷ್ಟೇ ಭಾರತದ ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಬೀರಲಿದೆ. ಉಗ್ರರ ನೆಲೆಗಳ ಮೇಲೆ ಸೇನೆ ನಡೆಸಿದ ಸೀಮಿತ ದಾಳಿಯೊಂದು ನಮ್ಮ ದೇಶದ ಭದ್ರತೆಯ ಮೇಲೆ ನಮಗಿರುವ ಹಿಡಿತವನ್ನು ನೆರೆರಾಷ್ಟ್ರಕ್ಕೆ ತೋರಿಸುವುದಾಗಿದೆ ಎಂದು ಹೇಳಿಕೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


