ನೋಟ್ ಬಂದ್: ಕರಾಚಿಯ ಪ್ರಿಟಿಂಗ್ ಪ್ರೆಸ್ ಗಳಿಗೆ ಇನ್ನು ಕೆಲಸವಿಲ್ಲ - ಕಿರಣ್ ರಿಜಿಜು
ರು.500 ಹಾಗೂ 1,000 ನೋಟುಗಳ ಮೇಲೆ ಭಾರತ ನಿಷೇಧ ಹೇರುವುದರಿಂದ, ಪಾಕಿಸ್ತಾನ ಖೋಟಾನೋಟು ತಯಾರಿಕರಿಗೆ ಕೆಲಸವಿಲ್ಲದಂತಾಗಿದೆ...

ನವದೆಹಲಿ: ರು.500 ಹಾಗೂ 1,000 ನೋಟುಗಳ ಮೇಲೆ ಭಾರತ ನಿಷೇಧ ಹೇರುವುದರಿಂದ, ಪಾಕಿಸ್ತಾನ ಖೋಟಾನೋಟು ತಯಾರಿಕರಿಗೆ ಕೆಲಸವಿಲ್ಲದಂತಾಗಿದೆ ಎಂದು ಕೇಂದ್ರ ಗೃಹ ಇಲಾಖೆ ರಾಜ್ಯ ಸಚಿವ ಕಿರಣ್ ರಿಜಿಜು ಅವರು ಬುಧವಾರ ಹೇಳಿದ್ದಾರೆ.
ನೋಟಿನ ವಿರುದ್ಧ ಕೇಂದ್ರ ಸರ್ಕಾರ ಕ್ರಮಕೈಗೊಂಡಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಸರ್ಕಾರದ ಕಠಿಣ ನಿರ್ಧಾರದಿಂದಾಗಿ ಭ್ರಷ್ಟಾಚಾರ ನಡೆಸುತ್ತಿರುವವರು, ಭಯೋತ್ಪಾದನಾ ಚಟುವಟಿಕೆಗಳಿಗೆ ಆರ್ಥಿಕ ಸೌಲಭ್ಯವನ್ನು ಒದಗಿಸುತ್ತಿರುವವರಿಗೆ ಹಾಗೂ ಖೋಟಾನೋಟು ತಯಾರಿಕರಿಗೆ ಕೈಕಟ್ಟಿ ಹಾಕಿದಂತಾಗಿದೆ. ಭಾರತದ ಈ ಕ್ರಮದಿಂದಾಗಿ ಕರಾಚಿಯಲ್ಲಿರುವ ಖೋಟಾನೋಟು ಪ್ರಿಟಿಂಗ್ ಪ್ರೆಸ್ ಗಳಿಗೆ ಕೆಲಸವಿಲ್ಲದಂತಾಗಿದೆ ಎಂದು ಹೇಳಿದ್ದಾರೆ.
ಖೋಟೋ ನೋಟು ತಯಾರಿಕೆ ದೇಶದ ಭದ್ರತೆಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿತ್ತು. ಖೋಟಾನೋಟಿನ ಚಲಾವಣೆಯೇ ದೇಶದಲ್ಲಿ ಹೆಚ್ಚಾಗಿತ್ತು. ಆದರೆ, ಈ ಕುರಿತ ಅಂಕಿಅಂಶವನ್ನು ನೀಡಲು ಸಾಧ್ಯವಿಲ್ಲ. ದೇಶದಲ್ಲಿರುವ ಭ್ರಷ್ಟಾಚಾರವನ್ನು ಬುಡಸಮೇತವಾಗಿ ಕಿತ್ತುಹಾಕಬೇಕಿದೆ ಹಾಗೂ ಕಪ್ಪುಹಣವನ್ನು ಪರಿಶೀಲನೆ ನಡೆಸಬೇಕಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಈ ದಿಟ್ಟ ನಿರ್ಧಾರ ದೇಶದ ಆರ್ಥಿಕತೆ ಹಾಗೂ ಭದ್ರತೆಯ ಶಕ್ತಿಯನ್ನು ಹೆಚ್ಚಿಸಿದಂತಾಗಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


