ನಾಮಪತ್ರದಲ್ಲಿ ಜಯಲಲಿತಾರ ಹೆಬ್ಬೆಟ್ಟನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಮದ್ರಾಸ್ ಹೈಕೋರ್ಟ್
ಈ ತಿಂಗಳ 19ರಂದು ತಮಿಳು ನಾಡಿನಲ್ಲಿ ನಡೆಯಲಿರುವ ಉಪ ಚುನಾವಣೆಗೆ ಎಡಿಎಂಕೆ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಪತ್ರದಲ್ಲಿ...

Published On :
ಚೆನ್ನೈ: ಈ ತಿಂಗಳ 19ರಂದು ತಮಿಳು ನಾಡಿನಲ್ಲಿ ನಡೆಯಲಿರುವ ಉಪ ಚುನಾವಣೆಗೆ ಎಡಿಎಂಕೆ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಪತ್ರದಲ್ಲಿ ಹಾಕಿರುವ ಹೆಬ್ಬೆಟ್ಟು ಗುರುತು ಮುಖ್ಯಮಂತ್ರಿ ಜಯಲಲಿತಾ ಅವರದ್ದು ಅಲ್ಲ ಎಂದು ಹೇಳಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ತಳ್ಳಿ ಹಾಕಿದೆ. ನಾಮಪತ್ರದಲ್ಲಿರುವ ಹೆಬ್ಬೆರಳ ಗುರುತಿನ ನಿಖರತೆಯನ್ನು ಚುನಾವಣಾ ಆಯೋಗ ಪರಿಶೀಲನೆ ಮಾಡಬೇಕು ಎಂದು ನ್ಯಾಯಾಲಯ ಹೇಳಿದೆ.
ಚುನಾವಣಾ ಗುರುತನ್ನು ಈಗಾಗಲೇ ಹಂಚಿಕೆ ಮಾಡಲಾಗಿರುವುದರಿಂದ ನ್ಯಾಯಾಲಯ ಈ ವಿಷಯದಲ್ಲಿ ಮಧ್ಯ ಪ್ರವೇಶಿಸುವುದಿಲ್ಲ, ಏನಾದರೂ ಲೋಪದೋಷಗಳು ಕಂಡುಬಂದರೆ ಚುನಾವಣಾ ಆಯೋಗ ಕ್ರಮ ತೆಗೆದುಕೊಳ್ಳಲಿ ಎಂದು ಸಾಮಾಜಿಕ ಕಾರ್ಯಕರ್ತ ಟ್ರಾಫಿಕ್ ಕೆ. ರಾಮಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ತಳ್ಳಿ ಹಾಕಿತು.
ಅರವಕುರಿಚಿ, ತಂಜಾವೂರು ಮತ್ತು ತಿರುಪ್ಪರಂಕುಂಡ್ರಮ್ ವಿಧಾನಸಭಾ ಕ್ಷೇತ್ರಗಳಲ್ಲಿ ಎಡಿಎಂಕೆ ಅಭ್ಯರ್ಥಿಗಳು ಮುಖ್ಯಮಂತ್ರಿ ಜಯಲಲಿತಾ ಅವರ ಎಡಗೈ ಹೆಬ್ಬೆರಳ ಗುರುತನ್ನು ಒಳಗೊಂಡ ಫಾರ್ಮ್ ಎ ಮತ್ತು ಬಿಯನ್ನು ಸಲ್ಲಿಸಿದ್ದಾರೆ. ಅವರು ಕಳೆದ ಸೆಪ್ಟೆಂಬರ್ 22ರಿಂದ ಆಸ್ಪತ್ರೆಯಲ್ಲಿ ಅನಾರೋಗ್ಯ ನಿಮಿತ್ತ ದಾಖಲಾಗಿರುವುದರಿಂದ ಅವರ ಬಲಗೈ ಊತವಿರುವುದರಿಂದ ಸಹಿಯ ಬದಲಿಗೆ ಹೆಬ್ಬೆರಳ ಗುರುತನ್ನು ಹಾಕಿಸಿಕೊಳ್ಳಲಾಗಿದೆ ಎಂದು ಸರ್ಕಾರಿ ವೈದ್ಯರು ಪ್ರಮಾಣೀಕರಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಜಯಲಲಿತಾjayalalithaMadras High Courtಮದ್ರಾಸ್ ಹೈಕೋರ್ಟ್ಉಪ ಚುನಾವಣೆthumb impressionBy pollಹೆಬ್ಬೆಟ್ಟು ಗುರುತು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


