ದೇಶ

ಭಾರತೀಯ ಉದ್ಯಮಿಗಳಿಗೆ ಸುಲಭ ವೀಸಾ ಯೋಜನೆ: ಬ್ರಿಟನ್

ಯುರೋಪಿಯನ್ ಒಕ್ಕೂಟದಿಂದ ಹೊರಬಂದ ನಂತರ ಭಾರತವನ್ನು ಪ್ರಮುಖ ವ್ಯಾಪಾರ ಪಾಲುದಾರನನ್ನಾಗಿ ಪರಿಗಣಿಸಿರುವ ಬ್ರಿಟನ್, ಭಾರತೀಯ ಉದ್ಯಮಿಗಳಿಗೆ ಸುಲಭ ವೀಸಾ ಘೋಷಣೆ ಮಾಡಿದೆ.

ಭಾರತೀಯ ಉದ್ಯಮಿಗಳಿಗೆ ಸುಲಭ ವೀಸಾ ಯೋಜನೆ: ಬ್ರಿಟನ್
ಬ್ರಿಟನ್ ಪ್ರಧಾನಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ
Published On :
ನವದೆಹಲಿ: ಯುರೋಪಿಯನ್ ಒಕ್ಕೂಟದಿಂದ ಹೊರಬಂದ ನಂತರ ಭಾರತವನ್ನು ಪ್ರಮುಖ ವ್ಯಾಪಾರ ಪಾಲುದಾರನನ್ನಾಗಿ ಪರಿಗಣಿಸಿರುವ ಬ್ರಿಟನ್, ಭಾರತೀಯ ಉದ್ಯಮಿಗಳಿಗೆ ಸುಲಭ ವೀಸಾ ಘೋಷಣೆ ಮಾಡಿದೆ. 
ಭಾರತ ಪ್ರವಾಸ ಕೈಗೊಂಡಿರುವ ಬ್ರಿಟನ್ ಪ್ರಧಾನಿ ಥೆರೆಸಾ ಮೇ, ಭಾರತೀಯ ಉದ್ಯಮಿಗಳಿಗೆ ಸುಲಭ ವೀಸಾ ಯೋಜನೆ ಘೋಷಿಸಿದ್ದು, ಇದೇ ಮೊದಲ ಬಾರಿಗೆ ಯಾವುದೇ ದೇಶಕ್ಕೆ ನಾವು ರಿಜಿಸ್ಟರ್ಡ್ ಟ್ರಾವಲರ್ ಯೋಜನೆಯಡಿಯಲ್ಲಿ ಬ್ರಿಟಾನ್ ಗೆ ಪ್ರವೇಶಿಸಲು ಸುಲಭ ವೀಸಾಗಳನ್ನು ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ. 
ಬ್ರಿಟನ್ ಗೆ ನಿರಂತರವಾಗಿ ಭೇಟಿ ನೀಡಿ ಎರಡೂ ರಾಷ್ಟ್ರಗಳ ಅಭಿವೃದ್ಧಿಗೆ ನೆರವಾಗುವ ಉದ್ಯಮಿಗಳು ರಿಜಿಸ್ಟರ್ಡ್ ಟ್ರಾವಲರ್ ಯೋಜನೆಯಡಿಯಲ್ಲಿ ಸುಲಭ ವೀಸಾ ಪಡೆಯುವ ಮೂಲಕ ಸುಲಭವಾಗಿ ಬ್ರಿಟನ್ ಪ್ರವೇಶಿಸಬಹುದಾಗಿದೆ ಎಂದು ಇಂಡಿಯಾ-ಯುಕೆ ಟೆಕ್ ಶೃಂಗಸಭೆಯಲ್ಲಿ ಥೆರೆಸಾ ಮೇ ತಿಳಿಸಿದ್ದಾರೆ. 
ಸುಲಭ ವೀಸಾ ಪಡೆಯುವ ಮೂಲಕ ಬ್ರಿಟನ್ ಗೆ ಸುಲಭವಾಗಿ ಪ್ರವೇಶ ಪಡೆಯುವುದರೊಂದಿಗೆ ಬ್ರಿಟನ್ ಏರ್ ಪೋರ್ಟ್ ಗಳಲ್ಲಿ ತ್ವರಿತ ಅಂಗೀಕಾರ ಸಿಗಲಿದ್ದು, ಯುರೋಪ್ ಎಕನಾಮಿಕ್ ಏರಿಯಾಗೂ ಸಹ ಸುಲಭವಾಗಿ ಪ್ರವೇಶ ಪಡೆಯಬಹುದಾಗಿದೆ ಎಂದು ಬ್ರಿಟನ್ ಪ್ರಧಾನಿ ಮೇ ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.