ದೆಹಲಿಯಷ್ಟೇ ಅಲ್ಲ, ಭಾರತದ 94 ನಗರಗಳಲ್ಲಿ ಇದೆ ಕಳಪೆ ಗುಣಮಟ್ಟದ ಗಾಳಿ!
2011 ರಿಂದ ಈ ವರೆಗೆ 94 ಭಾರತೀಯ ನಗರಗಳು ರಾಷ್ಟ್ರೀಯ ವಾಯು ಗುಣಮಟ್ಟದ ದರ್ಜೆಯನ್ನು ತಲುಪಲು ಸಾಧ್ಯವಾಗಿಲ್ಲ

Published On :
ನವದೆಹಲಿ: ದೆಹಲಿಯಲ್ಲಿ ದಟ್ಟ ಹೊಗೆ ಆವರಿಸಿದ್ದು, ಕಳೆದ 17 ವರ್ಷಗಳಲ್ಲೇ ಅತಿ ಹೆಚ್ಚು ವಾಯು ಮಾಲಿನ್ಯ ಪೀಡಿತ ಪ್ರದೇಶವಾಗಿದೆ ಎಂಬ ವರದಿ ಪ್ರಕಟವಾದ ಬೆನ್ನಲ್ಲೇ, ವಾಯುಮಾಲಿನ್ಯಕ್ಕೆ ಸಂಬಂಧಿಸಿದಂತೆ ಮತ್ತೊಂದು ಅಘಾತಕಾರಿ ಅಂಶ ಹೊರಬಿದ್ದಿದೆ.
ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿರುವ ವರದಿಯ ಪ್ರಕಾರ, 2011 ರಿಂದ ಈ ವರೆಗೆ 94 ಭಾರತೀಯ ನಗರಗಳು ರಾಷ್ಟ್ರೀಯ ವಾಯು ಗುಣಮಟ್ಟದ ದರ್ಜೆಯನ್ನು ತಲುಪಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ. ರಾಷ್ಟ್ರೀಯ ರಾಷ್ಟ್ರೀಯ ವಾಯು ಗುಣಮಟ್ಟದ ದರ್ಜೆಯನ್ನು ತಲುಪದ ನಗರಗಳ ಪಟ್ಟಿಯಲ್ಲಿ ಹಲವು ನಗರಗಳು 1990 ರಿಂದಲೂ ಹಾಗೆಯೇ ಉಳಿದುಕೊಂಡಿವೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ(ಸಿಪಿಸಿಬಿ) ಅಧಿಕಾರಿಗಳು ತಿಳಿಸಿದ್ದಾರೆ.
ಗುಣಮಟ್ಟ ದರ್ಜೆಯನ್ನು ತಲುಪದ ನಗರಗಳ ಪಟ್ಟಿಯಿಂದ ನಗರಗಳನ್ನು ಹೊರತರುವುದಕ್ಕೆ ಕೇಂದ್ರ ಸರ್ಕಾರವಾಗಲಿ ಅಥವಾ ರಾಜ್ಯ ಸರ್ಕಾರಗಳಾಗಲಿ ಪರಿಣಾಮಕಾರಿಯಾದ ಯೋಜನೆಗಳನ್ನು ಈ ವರೆಗೂ ಜಾರಿಗೆ ತಂದಿಲ್ಲ. ಇದು ದೇಶದ ಆಂತರಿಕ ಸಂಸ್ಥೆಗಳು ನೀಡಿರುವ ವರದಿಯಾದರೆ, ವಿಶ್ವಸಂಸ್ಥೆ ಪ್ರಕಟ ಮಾಡಿರುವ ವಿಶ್ವದ ಅತಿ ಹೆಚ್ಚು ವಾಯು ಮಾಲಿನ್ಯ ಹೊಂದಿರುವ 20 ನಗರಗಳ ಪಟ್ಟಿಯಲ್ಲಿ 10 ನಗರಗಳು ಭಾರತದ್ದೇ ಆಗಿವೆ ಎಂಬುದು ಮತ್ತೊಂದು ಅಘಾತಕಾರಿ ಅಂಶವಾಗಿದೆ, ಕಳೆದ ಕೆಲವು ವರ್ಷಗಳಿಂದ ದೆಹಲಿ, ಖಾನ್ ಪುರ, ಲಖನೌ, ವಾರಾಣಸಿ ನಗರಗಳ ವಾಯುಮಾಲಿನ್ಯ ಅಪಾಯಕಾರಿ ಮಟ್ಟವನ್ನು ತಲುಪಿವೆ. ಇಷ್ಟಾದರೂ ಈ ವರೆಗೂ ಮಾಲಿನ್ಯ ನಿಯಂತ್ರಣ ಮಂಡಳಿಯಾಗಲಿ ನಗರಗಳ ಸ್ಥಳೀಯ ಆಡಳಿತಗಳು ಜಾಗೃತಗೊಂಡಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ದೆಹಲಿDelhiPollution control boardAIRpollutionವಾಯುಮಾಲಿನ್ಯಮಾಲಿನ್ಯ ನಿಯಂತ್ರಣ ಮಂಡಳಿIndian citiesಭಾರತದ ನಗರಗಳು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


