ಮೊದಲೇ ಸೋಲನ್ನು ಒಪ್ಪಿಕೊಂಡಂತಿದೆ ಸಮಾಜವಾದಿ ಪಕ್ಷ: ಮಾಯಾವತಿ
ಸಮಾಜವಾದಿ ಪಕ್ಷದ ಮಹಾಮೈತ್ರಿಯನ್ನು ನೋಡಿದರೆ, ಸಮಾಜವಾದಿ ಪಕ್ಷ ಮೊದಲೇ ಸೋಲನ್ನು ಒಪ್ಪಿಕೊಂಡಂತೆ ಕಾಣುತ್ತದೆ ಎಂದು ಬಿಎಸ್'ಪಿ ಮುಖ್ಯಸ್ಥೆ ಮಾಯಾವತಿಯವರು ಶನಿವಾರ ಹೇಳಿದ್ದಾರೆ...

ಲಖನೌ: ಸಮಾಜವಾದಿ ಪಕ್ಷದ ಮಹಾಮೈತ್ರಿಯನ್ನು ನೋಡಿದರೆ, ಸಮಾಜವಾದಿ ಪಕ್ಷ ಮೊದಲೇ ಸೋಲನ್ನು ಒಪ್ಪಿಕೊಂಡಂತೆ ಕಾಣುತ್ತದೆ ಎಂದು ಬಿಎಸ್'ಪಿ ಮುಖ್ಯಸ್ಥೆ ಮಾಯಾವತಿಯವರು ಶನಿವಾರ ಹೇಳಿದ್ದಾರೆ.
ಮುಂಬರುವ ಚುನಾವಣೆಗಾಗಿ ಸಮಾಜವಾದಿ ಪಕ್ಷ ಸಾಕಷ್ಟು ಪರಿಶ್ರಮವನ್ನು ಪಡುತ್ತಿದ್ದು, ಅವರ ಪರಿಶ್ರಮವನ್ನು ನೋಡಿದರೆ ಸಮಾಜವಾದಿ ಪಕ್ಷ ಮೊದಲೇ ಸೋಲನ್ನು ಒಪ್ಪಿಕೊಂಡಂತಿದೆ ಎಂದು ಹೇಳಿದ್ದಾರೆ.
ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ತಮ್ಮ ಸುತ್ತಲೂ ಅಪರಾಧಿಗಳನ್ನೇ ಇಟ್ಟುಕೊಂಡಿದ್ದಾರೆ ಮತ್ತು ಅವರ ಪಕ್ಷದಲ್ಲಿಯೇ ಅವರ ಮಾತಿಗೆ ಬೆಲೆಯಿಲ್ಲ. ಪಕ್ಷದ ಸದಸ್ಯರ ಸ್ವಾರ್ಥತೆಯ ಸ್ವಭಾವದಿಂದಾಗಿ ಸಮಾಜವಾದಿ ಪಕ್ಷದ ಒಡೆಯುತ್ತಿದೆ, ಉತ್ತರಪ್ರದೇಶದಲ್ಲಿ ಜಂಗಲ್ ರಾಜ್ ಸರ್ಕಾರವನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಬಿಜೆಪಿ ವಿರುದ್ಧ ಕಿಡಿಕಾರಿರುವ ಅವರು, ಚುನಾವಣೆ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ. ಉತ್ತರಪ್ರದೇಶದಲ್ಲಿ ಸಮುದಾಯಗಳನ್ನು ಒಡೆಯಲು ಬಿಜೆಪಿ ಗುರಿಯನ್ನು ಹೊಂದಿದ್ದು, ಇದಕ್ಕೆ ಮುಜಾಫರ್ ನಗರ ಹಾಗೂ ದಾದ್ರಿ ಪ್ರಕರಣಗಳೇ ಪ್ರಮುಖ ಉದಾಹರಣೆಗಳಾಗಿವೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


