ದೇಶ

ನಿವೃತ್ತ ಚಾಲಕನಿಗೆ ಕಾರು ಡ್ರೈವರ್ ಆಗಿ ಅಚ್ಚರಿ ನೀಡಿದ ಜಿಲ್ಲಾಧಿಕಾರಿ

35 ವರ್ಷಗಳ ಕೆಲಸದಿಂದ ನಿವೃತ್ತರಾಗುತ್ತಿದ್ದ ಕಾರು ಚಾಲಕನನ್ನು ಕಾರಿನಲ್ಲಿ ಕೂರಿಸಿಕೊಂಡು ಸ್ವತಃ ಜಿಲ್ಲಾಧಿಕಾರಿಯೇ ಬೀಳ್ಕೊಟ್ಟ ಅಪರೂಪದ ಪ್ರಕರಣ ...

ನಿವೃತ್ತ ಚಾಲಕನಿಗೆ  ಕಾರು ಡ್ರೈವರ್ ಆಗಿ ಅಚ್ಚರಿ ನೀಡಿದ ಜಿಲ್ಲಾಧಿಕಾರಿ
ಡ್ರೈವರ್ ಕೂರಿಸಿಕೊಂಡು ಕಾರು ಚಲಾಯಿಸುತ್ತಿರುವ ಜಿಲ್ಲಾಧಿಕಾರಿ
Published On :

ಮುಂಬೈ: 35 ವರ್ಷಗಳ ಕೆಲಸದಿಂದ ನಿವೃತ್ತರಾಗುತ್ತಿದ್ದ ಕಾರು ಚಾಲಕನನ್ನು ಕಾರಿನಲ್ಲಿ ಕೂರಿಸಿಕೊಂಡು ಸ್ವತಃ ಜಿಲ್ಲಾಧಿಕಾರಿಯೇ ಬೀಳ್ಕೊಟ್ಟ ಅಪರೂಪದ ಪ್ರಕರಣ ಮಹಾರಾಷ್ಟ್ರದಲ್ಲಿ ನಡೆದಿದೆ.

ಮಹಾರಾಷ್ಟ್ರದ ಅಕೋಲ ಜಿಲ್ಲಾಧಿಕಾರಿಯ ಕಾರು ಚಾಲಕರಾಗಿದ್ದ ದಿಗಂಬರ್‌ ಥಾಕ್‌ ಅವರಿಗೆ ಗುರುವಾರ ವಿಶೇಷ ದಿನವಾಗಿತ್ತು.
ಥಾಕ್‌ ಅವರು ಕಳೆದ 35 ವರ್ಷಗಳಿಂದ ಮಹಾರಾಷ್ಟ್ರ ಸರ್ಕಾರದಲ್ಲಿ 18 ಜಿಲ್ಲಾಧಿಕಾರಿಗಳಿಗೆ ಕಾರು ಚಾಲಕರಾಗಿ ಕಾರ್ಯನಿರ್ವಹಿಸಿದ್ದಾರೆ.

ನಿವೃತ್ತರಾಗುತ್ತಿರುವ ಥಾಕ್ ಅವರಿಗೆ ಬೀಳ್ಕೊಡುಗೆ ನೀಡಲು ಕಚೇರಿಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾದು ನಿಂತಿದ್ದರು.

ಹೂವಿನಿಂದ ಅಲಂಕೃತವಾಗಿದ್ದ ಕಾರಿನಲ್ಲಿ ಅಕೋಲದ ಜಿಲ್ಲಾಧಿಕಾರಿ ಜಿ. ಶ್ರೀಕಾಂತ್‌, ಅವರು ಥಾಕ್‌ರನ್ನು ಕಾರಿನಲ್ಲಿ ಕೂರಿಸಿ ಸ್ವತಃ ಚಲಾಯಿಸಿಕೊಂಡು ಕಚೇರಿಗೆ ಕರೆತಂದು ಥಾಕ್ ಅವರಿಗೆ ಸರ್ ಫ್ರೈಸ್ ನೀಡ್ದಾದಾರೆ.

ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಥಾಕ್‌ ಅವರನ್ನು ಬೀಳ್ಕೊಡಲಾಯಿತು. ಜತೆಗೆ ಪ್ರಶಂಸನಾ ಪತ್ರ ಹಾಗೂ ಬೆಳ್ಳಿಯ ಕಾರಿನ ಪ್ರತಿಮೆ ನೀಡಲಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.