ಪ್ರೀತಿ ನಿರಾಕರಿಸಿದ ಯುವತಿಗೆ ಬಾಟಲಿಯಿಂದ ಇರಿದ ಯುವಕ
ಪ್ರೀತಿಯ ನಿವೇದನೆಯನ್ನು ಒಪ್ಪಿಕೊಳ್ಳದ ಕಾರಣಕ್ಕೆ ಕುಪಿತಗೊಂಡ ಯುವಕನೊಬ್ಬ ಯುವತಿಯನ್ನು ಒಡೆದ ಬಾಟಲಿಯಿಂದ ಇರಿದಿರುವ ಘಟನೆಯೊಂದು ಕೊಯಮತ್ತೂರಿನ ಭಾರತಯಾರ್ ವಿಶ್ವವಿದ್ಯಾಲಯದ...

ಕೊಯಮತ್ತೂರು: ಪ್ರೀತಿಯ ನಿವೇದನೆಯನ್ನು ಒಪ್ಪಿಕೊಳ್ಳದ ಕಾರಣಕ್ಕೆ ಕುಪಿತಗೊಂಡ ಯುವಕನೊಬ್ಬ ಯುವತಿಯನ್ನು ಒಡೆದ ಬಾಟಲಿಯಿಂದ ಇರಿದಿರುವ ಘಟನೆಯೊಂದು ಕೊಯಮತ್ತೂರಿನ ಭಾರತಯಾರ್ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದಿದೆ.
21 ವರ್ಷದ ಕನಕಲಕ್ಷ್ಮಿ ಎಂಬ ಯುವತಿಗೆ ವೆಂಬುರಾಜ್ ಎಂಬ ಯುವಕ ಪ್ರೀತಿಸುವಂತೆ ನಿವೇದನೆಯನ್ನು ಮಾಡಿಕೊಂಡಿದ್ದಾನೆ. ಈ ವೇಳೆ ಯುವತಿ ನಿರಾಕರಿಸಿದ್ದಾಳೆ. ಅಲ್ಲದೆ, ದಾರಿ ಬಿಡುವಂತೆ ಹೇಳಿದ್ದಾಳೆ. ಇದರಂತೆ ಇಬ್ಬರ ನಡುವೆ ಮಾತಿಕ ಚಕಮಕಿ ನಡೆದಿದೆ.
ಎಷ್ಟು ಹೇಳಿದರೂ ಪ್ರೀತಿಯನ್ನು ಒಪ್ಪಿಕೊಳ್ಳದ ಯುವತಿಯ ನಡೆಗೆ ತೀವ್ರವಾಗಿ ಕೋಪಗೊಂಡಿರುವ ಯುವಕ ಕೈಯಲ್ಲಿದ ಬಾಟಲಿಯನ್ನು ಒಡೆದು ಯುವತಿಯ ಕುತ್ತಿಗೆಯನ್ನು ಇರಿದಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಯುವತಿಯನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪ್ರಸ್ತುತ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾಳೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆರೋಪಿ ವೆಂಬುರಾಜ್ ನನ್ನು ಪೊಲೀಸರು ಇದೀಗ ಬಂಧನಕ್ಕೊಳಪಡಿಸಿದ್ದು, ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


