ಮೌನವಾಗಿದ್ದು ಭಾರತ ಸಾಕಷ್ಟು ಅನುಭವಿಸಿದೆ, ಪಾಕಿಸ್ತಾನ ಗಂಭೀರ ಪರಿಣಾಮ ಎದುರಿಸಲಿದೆ: ಅರುಣ್ ಜೇಟ್ಲಿ
ಪಾಕಿಸ್ತಾನ ಭಾರತದ ಮೇಲೆ ದಾಳಿ ಮಾಡಲು ಬಂದರೆ ಅದರ ಪರಿಣಾಮ ಗಂಭೀರವಾಗಿರುತ್ತದೆ ಎಂದು...

Published On :
ನವದೆಹಲಿ: ಪಾಕಿಸ್ತಾನ ಭಾರತದ ಮೇಲೆ ದಾಳಿ ಮಾಡಲು ಬಂದರೆ ಅದರ ಪರಿಣಾಮ ಗಂಭೀರವಾಗಿರುತ್ತದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಗಡಿಯಾಚೆಗಿನ ಆತಂಕದ ಜೊತೆ ವ್ಯವಹರಿಸುವಲ್ಲಿ ಭಾರತದ ಮನೋಧರ್ಮ ಬದಲಾಗಲಿದ್ದು ಪಾಕಿಸ್ತಾನದ ಭಯೋತ್ಪಾದನೆ ಕೃತ್ಯಗಳಿಗೆ ಭಾರತ ಮೌನವಾಗಿದ್ದುಕೊಂಡು ಸಾಕಷ್ಟು ಅನುಭವಿಸಿದೆ ಎಂದು ಪ್ರತಿಪಾದಿಸಿದ್ದಾರೆ.
2003ರಲ್ಲಿ ಮಾಡಿಕೊಂಡ ಕದನ ವಿರಾಮ ಒಪ್ಪಂದವನ್ನು ಪದೇ ಪದೇ ಉಲ್ಲಂಘಿಸುತ್ತಿರುವುದಕ್ಕೆ ಪಾಕಿಸ್ತಾನ ವಿರುದ್ಧ ವಾಗ್ದಾಳಿ ನಡೆಸಿದ ಅವರು, "ವಾಸ್ತವ ಉಲ್ಲಂಘನೆ ಕಾನೂನುರೀತ್ಯಾ ಉಲ್ಲಂಘನೆಯಾಗಿ ಮಾರ್ಪಟ್ಟಿದೆ ಎಂದು ಹೇಳಿದರು.
ಸೆಪ್ಟೆಂಬರ್ 29ಕ್ಕೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರಗಾಮಿಗಳ ಲಾಂಚ್ ಪ್ಯಾಡ್ ಮೇಲೆ ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ ನಂತರ ಗಡಿ ಭಾಗದಲ್ಲಿ ಪಾಕಿಸ್ತಾನ ಸೇನೆ ಮಿಲಿಟರಿ ದಾಳಿಯಲ್ಲಿ ತೊಡಗಿದ್ದು ನಿನ್ನೆ ಪಾಕಿಸ್ತಾನ ನಡೆಸಿದ ಭಾರೀ ಗುಂಡಿನ ದಾಳಿಯಲ್ಲಿ ಎಂಟು ಮಂದಿ ನಾಗರಿಕರು ಹತರಾಗಿದ್ದಾರೆ.
ಗಡಿ ಭಾಗದಲ್ಲಿ ಇತ್ತೀಚಿನ ಕದನ, ಉದ್ವಿಗ್ನ ಸ್ಥಿತಿ ನಂತರ ಭಾರತ-ಪಾಕಿಸ್ತಾನ ಸಂಬಂಧದ ಬಗ್ಗೆ ವಾಹಿನಿಯೊಂದಕ್ಕೆ ಪ್ರತಿಕ್ರಿಯಿಸಿದ ಜೇಟ್ಲಿ, ಪಾಕಿಸ್ತಾನ 2003ರ ಕದನ ವಿರಾಮವನ್ನು ಉಲ್ಲಂಘಿಸಿದೆ. ಅಷ್ಟಕ್ಕೂ ಭಯೋತ್ಪಾದನೆ ಎಂದರೆ ನೀವು ಜನರಿಗೆ ತರಬೇತಿ ನೀಡುತ್ತೀರಿ, ನೀವು ಒಳಗೆ ಅವರನ್ನು ಕಳ್ಳರನ್ನಾಗಿ ಕಳುಹಿಸುತ್ತೀರಿ, ಇಂದು ವಾಸ್ತವ ಉಲ್ಲಂಘನೆ ಕಾನೂನುರೀತ್ಯಾ ಉಲ್ಲಂಘನೆಯಾಗಿ ಮಾರ್ಪಟ್ಟಿದೆ ಎಂದು ಹೇಳಿದರು.
ಭಾರತ ಮೌನವಾಗಿದ್ದು ಸಾಕಷ್ಟು ಅನುಭವಿಸಿದೆ. ನಾವು ಕೆಲವೊಂದು ರಾಜತಾಂತ್ರಿಕ ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಈಗ ಸಮಯ ಬದಲಾಗಿದೆ ಎಂದು ನನಗನಿಸುತ್ತದೆ ಮತ್ತು ಭಾರತ ಸರ್ಕಾರ ಹೆಚ್ಚು ಪೂರ್ವಭಾವಿ ಮಾರ್ಗವನ್ನು ಹೊಂದಿದೆ ಎಂದು ಹೇಳಿದರು.
ಗಡಿ ಭಾಗದಲ್ಲಿ ಭಯೋತ್ಪಾದನೆಗೆ ಪ್ರಚೋದನೆ ನೀಡಿ ಜನರನ್ನು ಸಾಯಿಸಿದರೆ ಪಾಕಿಸ್ತಾನ ಅದಕ್ಕೆ ತಕ್ಕ ಶಾಸ್ತಿ ಪಡೆಯಬೇಕಾಗುತ್ತದೆ. ಕೇಂದ್ರ ಸರ್ಕಾರದ ಯೋಜನೆಗಳು ತುಂಬಾ ಸ್ಪಷ್ಟವಾಗಿದೆ. ಉರಿ ಮತ್ತು ಪಠಾಣ್ ಕೋಟ್ ನಲ್ಲಿ ನಮ್ಮ ಭಾರತೀಯ ಸೈನಿಕರು ಮೃತಪಟ್ಟು ನಾವು ಸಾಕಷ್ಟು ಬೆಲೆ ತೆತ್ತಿದ್ದೇವೆ. ಪಾಕಿಸ್ತಾನ ತನ್ನ ಮಿತಿಯನ್ನು ಮೀರಿ ದಾಟಿ ಹೋದರೆ ಮುಂದೊಂದು ದಿನ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಅರುಣ್ ಜೇಟ್ಲಿ ಎಚ್ಚರಿಕೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Arun Jaitleyಅರುಣ್ ಜೇಟ್ಲಿindiaಭಾರತPakistanಪಾಕಿಸ್ತಾನCeasefire ViolationTerrorismಭಯೋತ್ಪಾದನೆಗಡಿಕದನ ವಿರಾಮ ಉಲ್ಲಂಘನೆCross border
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


