ದೇಶ

ಬ್ಯಾಂಕಾಕ್-ಚೆನ್ನೈ ಸ್ಪೈಸ್ ಜೆಟ್ ವಿಮಾನದ ಟಾಯ್ಲೆಟ್ ನಲ್ಲಿ 3.6ಕೆಜಿ ಚಿನ್ನ ಪತ್ತೆ

ಬ್ಯಾಂಕಾಕ್‌-ಚೆನ್ನೈ ಸ್ಪೈಸ್‌ಜೆಟ್‌ ವಿಮಾನದ ಶೌಚಾಲಯದಲ್ಲಿ ಅಂದಾಜು 1.06 ಕೋಟಿ ರೂ. ಮೌಲ್ಯದ 3.6 ಕೆ.ಜಿ ಚಿನ್ನವನ್ನು ಡಿಆರ್‌ಐ ತಂಡ ಪತ್ತೆ ಮಾಡಿದೆ...

ಬ್ಯಾಂಕಾಕ್-ಚೆನ್ನೈ ಸ್ಪೈಸ್ ಜೆಟ್ ವಿಮಾನದ ಟಾಯ್ಲೆಟ್ ನಲ್ಲಿ 3.6ಕೆಜಿ ಚಿನ್ನ ಪತ್ತೆ
ಸಾಂದರ್ಭಿಕ ಚಿತ್ರ
Published On :

ಚೆನ್ನೈ: ಬ್ಯಾಂಕಾಕ್‌-ಚೆನ್ನೈ ಸ್ಪೈಸ್‌ಜೆಟ್‌ ವಿಮಾನದ ಶೌಚಾಲಯದಲ್ಲಿ ಅಂದಾಜು 1.06 ಕೋಟಿ ರೂ. ಮೌಲ್ಯದ 3.6 ಕೆ.ಜಿ ಚಿನ್ನವನ್ನು ಡಿಆರ್‌ಐ ತಂಡ ಪತ್ತೆ ಮಾಡಿದೆ.

ಅಂತಾರಾಷ್ಟ್ರೀಯ ಏರ್‌ಲೈನ್ಸ್‌ ಮೂಲಕ ಭಾರತಕ್ಕೆ ಚಿನ್ನ ಕಳ್ಳಸಾಗಣೆ ಮಾಡಲಾಗುತ್ತಿದೆ ಎಂಬ ಖಚಿತ ಸುಳಿವಿನ ಮೇರೆಗೆ ಗುಪ್ತಚರ ಅಧಿಕಾರಿಗಳು ತಪಾಸಣೆ ನಡೆಸಿ ಚಿನ್ನ ಪತ್ತೆ ಮಾಡಿದ್ದಾರೆ.ವಿಮಾನದಲ್ಲಿ ನಿಯತಕಾಲಿಕಗಳನ್ನು ಇಡುವ ಪಾಕೆಟ್‌, ಸೀಟ್‌ ಅಥವಾ ಲೈಫ್ ಜಾಕೆಟ್‌ಗಳನ್ನು ಇಡುವ ಪಾಕೆಟ್‌ಗಳಲ್ಲಿ ಚಿನ್ನ ಅಡಗಿಸಿಟ್ಟಿರುವ ಸಾಧ್ಯತೆ ಇದೆ ಎಂದು ಆದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು.

ವಿಮಾನದ ಶೌಚಾಲಯದಲ್ಲಿ ಪತ್ತೆಯಾಗಿರುವ ವಿದೇಶಿ ಮುದ್ರೆಯ ಚಿನ್ನದ ಗಟ್ಟಿಗಳನ್ನು ಕಸ್ಟಮ್ಸ್‌ ಕಾಯಿದೆ 1962ರ ಅಡಿ ವಶಪಡಿಸಿಕೊಳ್ಳಲಾಗಿದ್ದು, ಚಿನ್ನ ತಮ್ಮದೆಂದು ಈವರೆಗೆ ಯಾರೊಬ್ಬರೂ ಹೇಳಿಕೊಂಡಿಲ್ಲ. ಚಿನ್ನ ಕಳ್ಳಸಾಗಣೆ ಜಾಲದ ಪತ್ತೆಗೆ ತನಿಖೆ ನಡೆದಿದೆ.

ಅಂತಾರಾಷ್ಟ್ರೀಯ ವಿಮಾನದ ಪ್ರಯಾಣಿಕರು ಬಿಗಿ ತಪಾಸಣೆಗೆ ಒಳಪಡುವುದದರಿಂದ ಚಿನ್ನವನ್ನು ಸಾಗಿಸುವುದು ಅವರಿಗೆ ಸುಲಭವಲ್ಲ. ಹಾಗಾಗಿ ಚಿನ್ನವನ್ನು ನಿಗದಿತ ಸ್ಥಳದಲ್ಲಿ ಇರಿಸುವ ಕಳ್ಳಸಾಗಣೆ ಜಾಲದ ಸದಸ್ಯರು ಇತರ ಲಗೇಜ್‌ನೊಂದಿಗೆ ನಿರ್ದಿಷ್ಟ ಸ್ಥಳದಲ್ಲಿ ಇಳಿಯುತ್ತಾರೆ. ಅದೇ ಸ್ಥಳದಿಂದ ದೇಶೀಯವಾಗಿ ಮತ್ತೊಂದು ಕಡೆಗೆ ಪ್ರಯಾಣ ಬೆಳೆಸುವ ಜಾಲದ ಮತ್ತೊಬ್ಬ ಸದಸ್ಯ ಬೇರೆ ಏರ್‌ಪೋರ್ಟ್‌ನಲ್ಲಿ ಇಳಿದು ಚಿನ್ನ ಸಾಗಿಸುತ್ತಾನೆ.

ಚೆನ್ನೈನಲ್ಲಿ ಸ್ವಲ್ಪ ಸಮಯ ನಿಲ್ಲುವ ಸ್ಪೈಸ್‌ ಜೆಟ್‌ ವಿಮಾನ 96 ನಂತರ ಅಲ್ಲಿಂದ ದಿಲ್ಲಿಗೆ ಹೊರಡುವುದು. ಚೆನ್ನೈನಿಂದ ದಿಲ್ಲಿಗೆ ಪ್ರಯಾಣ ಬೆಳೆಸಿ, ಅಲ್ಲಿಂದ ಚಿನ್ನ ಕೊಂಡೊಯ್ಯುವುದು ಕಳ್ಳಸಾಗಣೆ ಜಾಲದ ಸದಸ್ಯರ ಉದ್ದೇಶ ಆಗಿರುವ ಸಾಧ್ಯತೆ ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.