ಸ್ಪೀಕರ್ ಸುಮಿತ್ರಾ ಮಹಾಜನ್ ಪ್ರಯಾಣಕ್ಕೆ ಹೊಸ ಜಾಗ್ವಾರ್ ಕಾರು
ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಇನ್ನು ಮುಂದೆ ಶ್ವೇತ ವರ್ಣದ ಜಾಗ್ವಾರ್ ಎಕ್ಸ್ಈ ನೂತನ ಕಾರಿನಲ್ಲಿ ಸಂಚರಿಸಲಿದ್ದಾರೆ...

ನವದೆಹಲಿ: ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಇನ್ನು ಮುಂದೆ ಶ್ವೇತ ವರ್ಣದ ಜಾಗ್ವಾರ್ ಎಕ್ಸ್ಈ ನೂತನ ಕಾರಿನಲ್ಲಿ ಸಂಚರಿಸಲಿದ್ದಾರೆ. 48.25 ಲಕ್ಷ ರೂಪಾಯಿ ಮೌಲ್ಯದ ಈ ಕಾರು ಸ್ಪೀಕರ್ ಗೃಹ ಕಚೇರಿ ಮುಂದೆ ನಿಂತಿದೆ.
ಎಎಂಪಿ ಮೋಟಾರ್ಸ್ ಪ್ರೈ. ಲಿಮಿಟೆಡ್ ಗೆ ಸಚಿವಾಲಯ ನಿಗದಿತ ಮೊತ್ತವನ್ನು ಮೂರು ದಿನಗಳ ಹಿಂದೆಯೇ ಬಿಡುಗಡೆ ಮಾಡಿ ನೂತನ ವಾಹನ ಖರೀದಿಸಿದೆ. ಈ ಬಗ್ಗೆ ಮಾಹಿತಿ ನೀಡಿದ ಲೋಕಸಭಾ ಸಚಿವಾಲಯದ ಮುಖ್ಯ ಕಾರ್ಯದರ್ಶಿ ಡಿ.ಕೆ.ಭಲ್ಲಾ, ಸ್ವೀಕರ್ ಸಂಚರಿಸಲು ನೂತನ ಕಾರು ಖರೀದಿಗೆ ಎರಡು ಆಯ್ಕೆಗಳಿದ್ದವು. ಬಿಎಂಡಬ್ಲ್ಯೂ-ಜಾಗ್ವಾರ್. ಇವೆರಡರ ಪೈಕಿ ಯಾವುದನ್ನು ಖರೀದಿಸಬೇಕು ಎಂಬ ಚರ್ಚೆ ಬಂದಾಗ ಭದ್ರತಾ ಪಡೆ ತಜ್ಞರು ನೀಡಿದ ಸಲಹೆ ಪ್ರಕಾರ ಬೆಲೆ ಕೊಂಚ ಕಡಿಮೆಯಾದರೂ ಬಿಎಂಡಬ್ಲ್ಯೂಗಿಂತ ಜಾಗ್ವಾರ್ ಖರೀದಿಗೆ ಸಮ್ಮತಿಸಲಾಯಿತು ಎಂದು ವಿವರಿಸಿದ್ದಾರೆ.
ಶಿಷ್ಟಾಚಾರದ ಪ್ರಕಾರ ಲೋಕಸಭಾ ಸ್ಪೀಕರ್ ಹುದ್ದೆ ಅಲಂಕರಿಸುವವರು ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗೆ ಸಮಾನರು. ರಾಷ್ಟ್ರಾಧ್ಯಕ್ಷರು, ನಂತರ ಪ್ರಧಾನಿಯಿಂದ ಆರಂಭಗೊಂಡು 5 ನೇ ಪ್ರತಿಷ್ಠಿತ ಸ್ಥಾನ ದಲ್ಲಿರುವವರು. ಹಾಗಾಗಿ ಅವರು ಸಾಧಾರಣ ವಾಹನಗಳಲ್ಲಿ ಸಂಚರಿಸಲು ಶಿಷ್ಟಾಚಾರ ಒಪ್ಪದು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


