ದೇಶ

ಪತಿ ಕೊಂದು ಆಭರಣ, ಹಣದೊಂದಿಗೆ ಪರಾರಿಯಾದ ಪತ್ನಿ

ಪತಿಯನ್ನು ಕೊಂದ ಪತ್ನಿಯೊಬ್ಬಳು ಮನೆಯಲ್ಲಿದ್ದ ಆಭರಣ ಹಾಗೂ ಹಣದೊಂದಿಗೆ ಪರಾರಿಯಾಗಿರುವ ಘಟನೆಯೊಂದು ರಾಜಧಾನಿ ದೆಹಲಿಯಲ್ಲಿ ಮಂಗಳವಾರ ನಡೆದಿದೆ...

ಪತಿ ಕೊಂದು ಆಭರಣ, ಹಣದೊಂದಿಗೆ ಪರಾರಿಯಾದ ಪತ್ನಿ
ಸಾಂದರ್ಭಿಕ ಚಿತ್ರ
Published On :

ಆಗ್ರಾ: ಪತಿಯನ್ನು ಕೊಂದ ಪತ್ನಿಯೊಬ್ಬಳು ಮನೆಯಲ್ಲಿದ್ದ ಆಭರಣ ಹಾಗೂ ಹಣದೊಂದಿಗೆ ಪರಾರಿಯಾಗಿರುವ ಘಟನೆಯೊಂದು ರಾಜಧಾನಿ ದೆಹಲಿಯಲ್ಲಿ ಮಂಗಳವಾರ ನಡೆದಿದೆ.

ನಿರ್ಮಲ್ ಸಿಂಗ್ (45) ಹತ್ಯೆಯಾದ ವ್ಯಕ್ತಿ. ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ನಿರ್ಮಲ್ ಸಿಂಗ್ ಅವರು ಮೊದಲ ಪತ್ನಿಗೆ ವಿಚ್ಛೇದನ ನೀಡಿದ ನಾಲ್ಕು ವರ್ಷದ ಹಿಂದಷ್ಟೇ ತಾರಾ ಎಂಬ ಮಹಿಳೆಯನ್ನು ವಿವಾಹವಾಗಿದ್ದರು. ನಿರ್ಮಲ್ ಸಿಂಗ್ ಸಿಂಗ್ ವಿಕಲಚೇತನನಾಗಿರುವ ಭರತ್ ಸಿಂಗ್ ಎಂಬ 14ವರ್ಷದ ಮಗನಿದ್ದಾನೆ.

ಸೋಮವಾರ ರಾತ್ರಿ ಹೆಚ್ಚಾಗಿ ನಿದ್ರೆ ಮಾತ್ರೆ ಸೇರಿದ ಹಾಲನ್ನು ಪುತ್ರ ಭರತ್ ಸಿಂಗ್ ಹಾಗೂ ನಿರ್ಮಲ್ ಸಿಂಗ್ ಇಬ್ಬರಿಗೂ ನೀಡಿದ್ದಾಳೆ. ನಂತರ ನಿರ್ಮಲ್ ಸಿಂಗ್ ನ ಕತ್ತನ್ನು ಸೀಳಿದ ಪತ್ನಿ ತಾರ ಭರತ್ ಸಿಂಗ್ ಪ್ರಜ್ಞೆ ತಪ್ಪಿರುವುದನ್ನು ನೋಡಿ ಸತ್ತು ಹೋಗಿದ್ದಾನೆಂದು ತಿಳಿದು ಮನೆಯಲ್ಲಿದ್ದ ಆಭರಣ ಹಾಗೂ ಹಣವನ್ನು ದೋಚಿ ಪರಾರಿಯಾಗಿದ್ದಾಳೆ.

ಇದರಂತೆ ಮಂಗಳವಾರ ಬೆಳಿಗ್ಗೆ ಎಚ್ಚರಗೊಂಡಿರುವ ಭರತ್ ತಂದೆ ಸತ್ತು ಬಿದ್ದಿರುವುದನ್ನು ನೋಡಿ ಕೂಗಿಕೊಂಡಿದ್ದಾನೆ. ಈ ವೇಳೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.