ರಾಷ್ಟ್ರಧ್ವಜ, ಗೀತೆಗೆ ಅಗೌರವ ತೋರಿದ ಪತ್ರಕರ್ತರನ್ನು ಹೊರಗಟ್ಟಿದ ಸೈನಿಕರು!
ರಾಷ್ಟ್ರಗೀತೆಗೆ ಮತ್ತು ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ ಕಾರಣದಿಂದಾಗಿ ಸೇನಾ ಕಾರ್ಯಕ್ರಮ ವರದಿಗೆ ಆಗಮಿಸಿದ್ದ ಇಬ್ಬರು ಪತ್ರಕರ್ತರನ್ನು ಸೇನಾಧಿಕಾರಿಗಳು ಹೊರಗಟ್ಟಿದ ಘಟನೆ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ನಡೆದಿದೆ..

ಶ್ರೀನಗರ: ರಾಷ್ಟ್ರಗೀತೆಗೆ ಮತ್ತು ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ ಕಾರಣದಿಂದಾಗಿ ಸೇನಾ ಕಾರ್ಯಕ್ರಮ ವರದಿಗೆ ಆಗಮಿಸಿದ್ದ ಇಬ್ಬರು ಪತ್ರಕರ್ತರನ್ನು ಸೇನಾಧಿಕಾರಿಗಳು ಹೊರಗಟ್ಟಿದ ಘಟನೆ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ನಡೆದಿದೆ.
ಜಮ್ಮು ಮತ್ತು ಕಾಶ್ಮೀರದ ಲೈಟ್ ಇನ್ ಫ್ಯಾಂಟ್ರಿ ರೆಜಿಮೆಂಟ್ ಕೇಂದ್ರದಲ್ಲಿ ಭಾರತೀಯ ಸೇನೆ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ರಾಷ್ಟಗೀತೆ ಹಾಡುವ ವೇಳೆ ಸ್ಥಳೀಯ ಇಬ್ಬರು ಪತ್ರಕರ್ತರಿಬ್ಬರು ಕುಳಿತುಕೊಂಡೇ ಇದ್ದ ಕಾರಣ ಕೂಡಲೇ ಇಬ್ಬರೂ ಪತ್ರಕರ್ತರನ್ನು ಕಾರ್ಯಕ್ರಮದಿಂದ ಹೊರಗಟ್ಟಲಾಗಿದೆ. ಸೇನೆ ಹೊರಗಟ್ಟಿದ ಪತ್ರಕರ್ತರನ್ನು ಕಾಶ್ಮೀರ್ ರೀಡರ್ ಪತ್ರಿಕೆಯ ಜುನೈದ್ ಬಜಾಜ್ ಮತ್ತು ರೈಸಿಂಗ್ ಕಾಶ್ಮೀರ್ ಪತ್ರಿಕೆಯ ವರದಿಗಾರ ಎಂದು ತಿಳಿದುಬಂದಿದೆ.
ಕಾರ್ಯಕ್ರಮದಲ್ಲಿ ಜಮ್ಮು ಮತ್ತು ಕಾಶ್ನೀರದ ಕಂದಾಯ, ಪರಿಹಾರ ಮತ್ತು ಪುನರ್ವಸತಿ ಸಚಿವ ಮತ್ತು ಪಿಡಿಪಿ ಮುಖ್ಯಸ್ಥ ಸೈಯದ್ ಬಷಾರತ್ ಅಹ್ಮದ್ ಅವರು ಧ್ವಜಾರೋಹಣ ಮಾಡುವ ವೇಳೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಲ್ಲರೂ ಎದ್ದು ನಿಂತು ಗೌರವ ನೀಡಿದರೆ ಈ ಇಬ್ಬರು ಪತ್ರಕರ್ತರು ಮಾತ್ರ ಕುಳಿತುಕೊಂಡೇ ತಮ್ಮ ಕೆಲಸದಲ್ಲಿ ತಲ್ಲೀನರಾಗಿದ್ದರು. ಇದನ್ನು ಗಮನಿಸಿದ ಸೇನಾಧಿಕಾರಿಗಳು ಧ್ವಜಾರೋಹಣದ ಬಳಿಕ ಅವರ ಬಳಿ ಆಗಮಿಸಿ ಈ ಬಗ್ಗೆ ಪ್ರಶ್ನಿಸಿದ್ದಾರೆ. ಅಲ್ಲದೆ ನಿಮ್ಮಂತಹವರು ನಮಗೆ ಬೇಕಿಲ್ಲ ನೀವು ಹೊರಡಬಹುದು ಎಂದು ಹೇಳಿ ಅವರನ್ನು ಕಾರ್ಯಕ್ರಮದಿಂದ ಹೊರಗಟ್ಟಿದ್ದಾರೆ.
ಈ ಬಗ್ಗೆ ಜಮ್ಮು ಮತ್ತು ಕಾಶ್ಮೀರದ ವಾರ್ತಾ ಇಲಾಖೆ ಫೋಟೋಗಳನ್ನು ಕೂಡ ಮಾಧ್ಯಮಗಳಿಗೆ ಬಿಡುಗಡೆ ಮಾಡಿದೆ.
ಇನ್ನು ಸೇನಾಧಿಕಾರಿಗಳ ನಿರ್ಣಯದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಕಾಶ್ಮೀರ್ ರೀಡರ್ ಪತ್ರಿಕೆಯ ವರದಿಗಾರ ಜುನೈದ್ ಬಜಾಜ್, ಕಾರ್ಯಕ್ರಮ ವರದಿಗಾಗಿ ನಮ್ಮನ್ನು ಕರೆಸಿಕೊಳ್ಳಲಾಗಿತ್ತೇ ವಿನಃ ರಾಷ್ಚ್ರಗೀತೆಗೆ ಗೌರವ ಸಲ್ಲಿಸಲು ಅಲ್ಲ. ಅವರು ರಾಷ್ಟ್ರಗೀತೆ ಹಾಡುವಾಗ ನಾನು ನನ್ನವರದಿ ಕುರಿತ ಅಂಶಗಳನ್ನು ಪಟ್ಟಿ ಮಾಡುತ್ತಿದ್ದೆ. ರಾಷ್ಟ್ರಗೀತೆ ಮುಕ್ತಾಯದ ಬಳಿಕ ನನ್ನ ಬಳಿಗೆ ಬಂದ ಕರ್ನಲ್ ನನ್ನನ್ನು ಕೂಡಲೇ ಹೊರಗೆ ಹೋಗುವಂತೆ ಹೇಳಿದರು ಎಂದು ಹೇಳಿದ್ದಾರೆ.
ಒಟ್ಟಾರೆ ಪತ್ರರ್ತರ ಈ ಬೇಜವಾಬ್ಜಾರಿ ನಡೆ ವಿರುದ್ಧ ಇದೀಗ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದು, ಸೇನಾಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


