ದೇಶ

ಸಮಾಜವಾದಿ, ಆಮ್ ಆದ್ಮಿ ಪಕ್ಷ ಅತಿ ಹೆಚ್ಚು ದೇಣಿಗೆ ಗಳಿಸಿದ ಪ್ರಾದೇಶಿಕ ಪಕ್ಷಗಳು: ಸಮಿಕ್ಷಾ ವರದಿ

2004 ರಿಂದ 2015 ವರೆಗೆ ನಡೆದಿರುವ ವಿಧಾನಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳ ದೇಣಿಗೆ ಸಂಗ್ರಹ ಹಾಗೂ ಖರ್ಚು-ವೆಚ್ಚಗಳ ಬಗ್ಗೆ ಸಮಿಕ್ಷಾ ವರದಿ...

ಸಮಾಜವಾದಿ, ಆಮ್ ಆದ್ಮಿ ಪಕ್ಷ ಅತಿ ಹೆಚ್ಚು ದೇಣಿಗೆ ಗಳಿಸಿದ ಪ್ರಾದೇಶಿಕ ಪಕ್ಷಗಳು: ಸಮಿಕ್ಷಾ ವರದಿ
ಸಮಾಜವಾದಿ, ಆಮ್ ಆದ್ಮಿ ಪಕ್ಷ
Published On :

ನವದೆಹಲಿ: 2004  ರಿಂದ 2015 ವರೆಗೆ ನಡೆದಿರುವ ವಿಧಾನಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ವಿವಿಧ ರಾಜಕೀಯ ಪಕ್ಷಗಳ ದೇಣಿಗೆ ಸಂಗ್ರಹ ಹಾಗೂ ಖರ್ಚು-ವೆಚ್ಚಗಳ ಬಗ್ಗೆ ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ ಎಂಬ ಎನ್ ಜಿಒ ಸಮೀಕ್ಷೆ ನಡೆಸಿ ವರದಿ ಪ್ರಕಟಿಸಿದೆ.
ಸಮೀಕ್ಷಾ ವರದಿಯ ಪ್ರಕಾರ ಲೋಕಸಭಾ ಚುನಾವಣೆ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ದೇಣಿಗೆ ಪಡೆದ ಪ್ರಾದೇಶಿಕ ಪಕ್ಷಗಳ ಪೈಕಿ ಮೊದಲ ಸ್ಥಾನದಲ್ಲಿ ಸಮಾಜವಾದಿ ಪಕ್ಷ ಇದ್ದರೆ, ಅರವಿಂದ್ ಕೇಜ್ರಿವಾಲ್  ನೇತೃತ್ವದ ಆಮ್ ಆದ್ಮಿ ಪಕ್ಷ ಎರಡನೇ ಸ್ಥಾನದಲ್ಲಿದೆ.
ಉತ್ತರ ಪ್ರದೇಶದಲ್ಲಿ ಪ್ರಬಲವಾಗಿರುವ ಸಮಾಜವಾದಿ ಪಕ್ಷ 2004, 2009 , 2014 ರ ಲೋಕಸಭಾ ಚುನಾವಣೆಯ ವೇಳೆಯಲ್ಲಿ ಒಟ್ಟು 118 ಕೋಟಿ ದೇಣಿಗೆ ಸಂಗ್ರಹ ಮಾಡಿ 90 .9 ಕೋಟಿಯಷ್ಟು ಹಣವನ್ನು ಖರ್ಚು ಮಾಡಿದೆ. ಇನ್ನು ಎರಡನೇ ಸ್ಥಾನದಲ್ಲಿರುವ ಆಮ್ ಆದ್ಮಿ ಪಕ್ಷ 2014 ರಲ್ಲಿ ಮೊದಲ ಬಾರಿಗೆ ಲೋಕಸಭಾ ಚುನಾವಣೆ ಎದುರಿಸಿತ್ತಾದರೂ 51.83 ಕೋಟಿಯಷ್ಟು ದೇಣಿಗೆ ಸಂಗ್ರಹಿಸಿ 17.9 ಕೋಟಿಯಷ್ಟು ಹಣವನ್ನು ಖರ್ಚು ಮಾಡಿದೆ. ತಮಿಳುನಾಡಿನ ಎಐಎಡಿಎಂಕೆ, ಒಡಿಶಾದ ಬಿಜು ಜನತಾದಳ(ಬಿಜೆಡಿ) ಹಾಗೂ ಪಂಜಾಬ್ ನ ಶಿರೋಮಣಿ ಅಖಾಲಿ ದಳ ಅತಿ ಹೆಚ್ಚು ದೇಣಿಗೆ ಸಂಗ್ರಹಿಸಿರುವ ಪ್ರಾದೇಶಿಕ ಪಕ್ಷಗಳ ಸಾಲಿನಲ್ಲಿವೆ.
ಎಐಎಡಿಎಂಕೆ 37 .66 ಕೋಟಿಯಷ್ಟು ದೇಣಿಗೆ ಸಂಗ್ರಹಿಸಿ, 39 .31 ಕೋಟಿಯಷ್ಟು ಹಣ ಖರ್ಚು ಮಾಡುವ ಮೂಲಕ ಅತಿ ಹೆಚ್ಚು ಖರ್ಚು ಮಾಡಿದ ಪಕ್ಷಗಳ ಪೈಕಿ ಮೊದಲ ಸ್ಥಾನದಲ್ಲಿದೆ. ಬಿಜೆಡಿ 35.76 ಕೋಟಿ ಹಣ ಸಂಗ್ರಹಿಸಿ 16 .03 ಕೋಟಿ ಖರ್ಚು ಮಾಡಿದೆ. ಪಂಜಾಬ್ ನ ಅಖಾಲಿದಳ 28 .67 ಕೋಟಿ ಹಣ ದೇಣಿಗೆ ಸಂಗ್ರಹಿಸಿದ್ದು  23 .89 ಕೋಟಿಯಷ್ಟು ಹಣ ಖರ್ಚು ಮಾಡಿದೆ.  
ವಿಧಾನಸಭಾ ಚುನಾವಣೆಯಲ್ಲಿ 186 .8 ಕೋಟಿ ದೇಣಿಗೆ ಸಂಗ್ರಹ ಮಾಡುವ ಮೂಲಕ ಸಮಾಜವಾದಿ ಪಕ್ಷ ಅತಿ ಹೆಚ್ಚು ದೇಣಿಗೆ ಸಂಗ್ರಹಿಸಿರುವ ಪಕ್ಷವಾಗಿದ್ದು 38 .54 ಕೋಟಿ ದೇಣಿಗೆ ಸಂಗ್ರಹಿಸುವ ಮೂಲಕ ಆಮ್ ಆದ್ಮಿ ಪಕ್ಷ ಎರಡನೇ ಪಕ್ಷವಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ 96 .54 ಕೋಟಿಯಷ್ಟು ಹಣ ಖರ್ಚು ಮಾಡಿದ್ದರೆ 29 .605 ಕೋಟಿ ಖರ್ಚು ಮಾಡಿರುವ ಶಿವಸೇನೆ ಅತಿ ಹೆಚ್ಚು ವೆಚ್ಚ ಮಾಡಿರುವ ಎರಡನೇ ಪಕ್ಷವಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ ಪ್ರಾದೇಶಿಕ ಪಕ್ಷಗಳು ಹಾಗೂ ರಾಷ್ಟ್ರೀಯ ಪಕ್ಷಗಳು ಸಂಗ್ರಹಿಸಿರುವ ಒಟ್ಟು ಮೊತ್ತ 5,323.41 ಕೋಟಿಯಾಗಿದ್ದು ಒಟ್ಟು ಖರ್ಚಾಗಿರುವ ಮೊತ್ತ 5,193.86 ಕೋಟಿ ಎಂದು ಸಮೀಕ್ಷಾ ವರದಿ ಮೂಲಕ ತಿಳಿದುಬಂದಿದೆ. 
ವಿಧಾನಸಭಾ ಚುನಾವಣೆಯ ವೇಳೆ 1,468.49 ಕೋಟಿ ದೇಣಿಗೆ ಸಂಗ್ರಹ ಮಾಡಿರುವ ಕಾಂಗ್ರೆಸ್ ಪಕ್ಷ ಮೊದಲ ಸ್ಥಾನದಲ್ಲಿದ್ದರೆ,  1,209.84 ಕೋಟಿ ಸಂಗ್ರಹ ಮಾಡಿರುವ ಬಿಜೆಪಿ ಎರಡನೇ ಸ್ಥಾನದಲ್ಲಿದೆ. ಆದರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅತಿ ಹೆಚ್ಚು ದೇಣಿಗೆ ಸಂಗ್ರಹಿಸಿರುವ ಪಕ್ಷವಾಗಿದ್ದು, ಕಾಂಗ್ರೆಸ್ ಎರಡನೇ ಸ್ಥಾನಕ್ಕೆ ಕುಸಿದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.