ಕಾನೂನು ಬಾಹಿರ ಕಾರ್ಯಗಳಲ್ಲಿ ನನ್ನ ಮಗ ಭಾಗಿಯಾಗಿದ್ದರೂ, ನಾನು ಶಿಕ್ಷಿಸುತ್ತೇನೆ: ಕೇಜ್ರಿವಾಲ್
ಕಾನೂನುಬಾಹಿರ ಕಾರ್ಯಗಳಲ್ಲಿ ಭಾಗಿಯಾಗಿದ್ದು ಯಾರೇ ಆಗಲಿ, ಅದು ತನ್ನ ಮಗ ಆಗಿದ್ದರೂ ಕೂಡಾ ನಾನು ಅವನನ್ನು ಶಿಕ್ಷೆಗೊಳಪಡಿಸುತ್ತೇನೆ ಎಂದು ದೆಹಲಿ...

Published On :
ಪಣಜಿ: ಕಾನೂನುಬಾಹಿರ ಕಾರ್ಯಗಳಲ್ಲಿ ಭಾಗಿಯಾಗಿದ್ದು ಯಾರೇ ಆಗಲಿ, ಅದು ತನ್ನ ಮಗ ಆಗಿದ್ದರೂ ಕೂಡಾ ನಾನು ಅವನನ್ನು ಶಿಕ್ಷೆಗೊಳಪಡಿಸುತ್ತೇನೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಅದ್ಯಾರೇ ತಪ್ಪು ಮಾಡಲಿ, ಅವರ ತಪ್ಪುಗಳಿಗೆ ತಕ್ಕ ಶಿಕ್ಷೆಯನ್ನು ನೀಡಲಾಗುವುದು ಎಂದು ಪಣಜಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಹೇಳಿದ್ದಾರೆ.
2017ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕೇಜ್ರಿವಾಲ್ ಆಮ್ ಆದ್ಮಿ ಪಕ್ಷದ ಚುನಾವಣಾ ಪ್ರಚಾರ ಕಾರ್ಯಕ್ರಮ ಆರಂಭಿಸುವ ಸಲುವಾಗಿ ಪಣಜಿಗೆ ಆಗಮಿಸಿದ್ದರು.
ಅದೇ ವೇಳೆ ಲಂಚ ಪ್ರಕರಣದಲ್ಲಿ ತನ್ನದೇ ಸಚಿವ ಸಂಪುಟದಿಂದ ಆಹಾರ ಸಚಿವರನ್ನು ವಜಾ ಮಾಡಿರುವ ಬಗ್ಗೆಯೂ ಕೇಜ್ರಿವಾಲ್ ಮಾತನಾಡಿದ್ದಾರೆ.
ತಮ್ಮ 40 ನಿಮಿಷದ ಭಾಷಣದಲ್ಲಿ ಕೇಜ್ರಿವಾಲ್, ವಿಜಯ್ ಮಲ್ಯ ಅವರ ಸಾಲದ ಬಗ್ಗೆಯೂ ಉಲ್ಲೇಖಿಸಿದ್ದಾರೆ.
ದೆಹಲಿಯಲ್ಲಿ ನಾವು 36 ಲಕ್ಷ ಕುಟುಂಬಗಳಿಗೆ ರು. 1,400 ವಿದ್ಯುತ್ ಸಬ್ಸಿಡಿಯನ್ನು ನೀಡಿದ್ದರೂ, ಕಾಂಗ್ರೆಸ್ ನಮ್ಮನ್ನು ಟೀಕಿಸುತ್ತಾ ಬಂದಿದೆ. ನಾವು ಸಾಮಾನ್ಯರಿಗೆ ಸಹಾಯ ಮಾಡುವುದಕ್ಕಾಗಿ ಸಬ್ಸಿಡಿ ನೀಡಿದ್ದೆವು. ಆದರೆ ಕಾಂಗ್ರೆಸ್ ವಿಜಯ್ ಮಲ್ಯ ಅವರಿಗೆ ರು. 9000 ಸಬ್ಸಿಡಿ ನೀಡಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.
ಏತನ್ಮಧ್ಯೆ, ಬಿಜೆಪಿ ವಿರುದ್ಧವೂ ಟೀಕಾ ಪ್ರಹಾರ ಮಾಡಿದ ಅವರು, ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೇರುತ್ತಿದ್ದಂತೆ ವಿಜಯ್ ಮಲ್ಯರಿಗೆ ಪರಾರಿಯಾಗಲು ಕೇಂದ್ರ ಸರ್ಕಾರ ಸಹಾಯ ಮಾಡಿತು ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


