ರನ್‌ವೇ ಎಂದು ತಿಳಿದು ರಸ್ತೆಯಲ್ಲಿ ವಿಮಾನ ಇಳಿಸಲು ಹೋದ ಪೈಲೆಟ್!
ರನ್ ವೇ ಎಂದು ತಪ್ಪಾಗಿ ಗ್ರಹಿಸಿದ ಪೈಲೆಟ್ ಇಂಡಿಗೋ ವಿಮಾನವನ್ನು ರಸ್ತೆಯಲ್ಲಿಳಿಸಲು ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ಪೈಲಟ್ ನ್ನು ಕೆಲಸದಿಂದ...

Published On :
ಜೈಪುರ್: ರನ್ ವೇ ಎಂದು ತಪ್ಪಾಗಿ ಗ್ರಹಿಸಿದ ಪೈಲೆಟ್ ಇಂಡಿಗೋ ವಿಮಾನವನ್ನು ರಸ್ತೆಯಲ್ಲಿಳಿಸಲು ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ಪೈಲಟ್ ನ್ನು ಕೆಲಸದಿಂದ ವಜಾ ಗೊಳಿಸಲಾಗಿದೆ.
ಫೆ. 27 ರಂದು ಇಂಡಿಗೋ ವಿಮಾನ 6ಇ -237 ಅಹ್ಮದಾಬಾದ್‌ನಿಂದ ಹೊರಟು ಜೈಪುರ್ ವಿಮಾನ ನಿಲ್ದಾಣದಲ್ಲಿ ಇಳಿಯುವ ಮುನ್ನ ಪೈಲೆಟ್ ಗೊಂದಲಗೊಳಗಾಗಿ ರಸ್ತೆಯಲ್ಲಿಳಿಸಲು ಹೋಗಿದ್ದನು.
ವಿಮಾನ ಕೆಳಗಿಳಿಯುತ್ತಿದ್ದಂತೆ ಕಾಕ್‌ಪಿಟ್‌ನಿಂದ ಸಂದೇಶಗಳು ಸ್ಥಗಿತಗೊಂಡಿದ್ದು, ವಿಮಾನ ರಸ್ತೆಗಿಳಿಯುತ್ತಿದ್ದಂತೆ ಗೊಂದಲ ಪರಿಹರಿಸಿಕೊಂಡ ಪೈಲಟ್ ವಿಮಾನವನ್ನು ಸುರಕ್ಷಿತವಾಗಿ ರನ್‌ವೇಯಲ್ಲಿಳಿಸಿದ್ದಾನೆ.
ಈ ಘಟನೆಗೆ ಸಂಬಂಧಿಸಿದಂತೆ ಡಿಜಿಸಿಎ, ಪೈಲೆಟ್‌ನ ಪರವಾನಗಿಯನ್ನು ರದ್ದುಗೊಳಿಸಿದೆ ಎಂದು ಬಲ್ಲಮೂಲಗಳು ಹೇಳಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


