ಪದ್ಮ ಪುರಸ್ಕಾರ ಶಿಫಾರಸ್ಸು ಪಟ್ಟಿಯಲ್ಲಿ ನಟಿ ಕಂಗನಾ ಹೆಸರಿತ್ತು!
2016 ನೇ ಸಾಲಿನ ಪದ್ಮ ಪುರಸ್ಕಾರಗಳಿಗಾಗಿ ಶಿಫಾರಸ್ಸು ಮಾಡಲಾಗಿದ್ದ ಪಟ್ಟಿಯಲ್ಲಿ ಬಾಲಿವುಡ್ ನಟಿ ಕಂಗನಾ ರನೌತ್ ಹೆಸರಿತ್ತು ಎಂಬುದು ಬಹಿರಂಗವಾಗಿದೆ.

ನವದೆಹಲಿ: 2016 ನೇ ಸಾಲಿನ ಪದ್ಮ ಪುರಸ್ಕಾರಗಳಿಗಾಗಿ ಶಿಫಾರಸ್ಸು ಮಾಡಲಾಗಿದ್ದ ಪಟ್ಟಿಯಲ್ಲಿ ಬಾಲಿವುಡ್ ನಟಿ ಕಂಗನಾ ರನೌತ್, ಗೌತಮ್ ಗಂಭೀರ್, ಜಹೀರ್ ಖಾನ್, ಹಿನ್ನೆಲೆ ಗಾಯಕ ಸುಮನ್ ಕಲ್ಯಾಣ್ ಪುರ್, ಗಜಲ್ ವಿದ್ವಾಂಸರಾದ ತಲತ್ ಅಜೀಜ್ ಮತ್ತು ಚಂದನ್ ದಾಸ್ ಅವರ ಹೆಸರುಗಳೂ ಇದ್ದವು ಎಂಬುದು ಬಹಿರಂಗವಾಗಿದೆ.
ಶೋಧನಾ ಸಮಿತಿ ಹೆಸರು ಶಿಫಾರಸ್ಸು ಮಾಡಿತ್ತಾದರೂ ಅಂತಿಮ ಪಟ್ಟಿಯಿಂದ ಈ ಹೆಸರುಗಳನ್ನು ಕೈಬಿಡಲಾಗಿತ್ತು. ಬಾಲಿವುಡ್ ನಟಿ ಕಂಗನಾ ರನೌತ್, ಕ್ವೀನ್ ಹಾಗೂ ತನು ವೆಡ್ಸ್ ಮನು ಚಿತ್ರದಲ್ಲಿ ಅತ್ಯುತ್ತಮ ನಟನೆಗಾಗಿ 2015 ಹಾಗೂ 2016 ನೇ ಸಾಲಿನಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ಅಷ್ಟೇ ಅಲ್ಲದೇ ಫ್ಯಾಷನ್ ಚಿತ್ರದಲ್ಲಿ ಪೋಷಕ ಪಾತ್ರಕ್ಕೂ ಅತ್ಯುತ್ತಮ ನಟನೆ ಪ್ರಶಸ್ತಿ ಪಡೆದಿದ್ದರು.
ಪದ್ಮ ಪುರಸ್ಕಾರಗಳಿಗಾಗಿ ಶೋಧನಾ ಸಮಿತಿ ಶಿಫಾರಸ್ಸು ಮಾಡಲಾಗುವ ಹೆಸರುಗಳನ್ನು ಪ್ರಧಾನಿ ಕಾರ್ಯಾಲಯಕ್ಕೆ ಕಳಿಸಿಕೊಡಲಾಗುತ್ತದೆ. ನಂತರ ಪ್ರಧಾನಿ ಕಾರ್ಯಾಲಯ ಕೆಲವು ಬದಲಾವಣೆಗಳೊಂದಿಗೆ ಹೆಸರುಗಳನ್ನು ಅಂತಿಮಗೊಳಿಸುತ್ತದೆ.
ನಟಿ ಕಂಗನಾ, ಕ್ರಿಕೆಟಿಗರಾದ ಗೌತಮ್ ಗಂಭೀರ್, ಜಹೀರ್ ಖಾನ್, ಹಿನ್ನೆಲೆ ಗಾಯಕ ಸುಮನ್ ಕಲ್ಯಾಣ್ ಪುರ್ ಅವರೊಂದಿಗೆ ಕುಸ್ತಿ ಪಟು ಸುಶೀಲ್ ಕುಮಾರ್, ಡಿಆರ್ ಡಿಒ ವಿಜ್ಞಾನಿ ಕೆಡಿ ನಾಯಕ್, ಭೂ ವಿಜ್ಞಾನ ಇಲಾಖೆಯ ಮಾಜಿ ಕಾರ್ಯದರ್ಶಿ ಹಾಗೂ ವಿಜ್ಞಾನಿ ಶೈಲೇಶ್ ನಾಯಕ್, ಐಸಿಆರ್ ನ ಮಾಜಿ ಮುಖ್ಯಸ್ಥ ಎಸ್ ಅಯ್ಯಪ್ಪನ್, ಅಣು ವಿಜ್ಞಾನಿ ರತನ್ ಕುಮಾರ್ ಸಿನ್ಹಾ, ತೆಲುಗು ಚಿತ್ರ ನಿರ್ದೇಶಕ ರಾಘವೇಂದ್ರ ರಾವ್ ಅವರ ಹೆಸರನ್ನೂ ಪದ್ಮ ಪುರಸ್ಕಾರಗಳಿಗೆ ಶಿಫಾರಸು ಮಾಡಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


