ಮಹಿಳೆಯರ ವಿರುದ್ಧ 'ಆನ್‌ಲೈನ್ ಟ್ರೋಲ್' ಕೂಡಾ ಅಪರಾಧ: ಮನೇಕಾ ಗಾಂಧಿ
ಅಂತರ್ಜಾಲದಲ್ಲಿ ಮಹಿಳೆಯರನ್ನು ಟ್ರೋಲ್ (ಅಪಹಾಸ್ಯ ) ಮಾಡುವುದು ಕೂಡಾ ಮಹಿಳೆಯರ ವಿರುದ್ಧದ ದೌರ್ಜನ್ಯ ಪ್ರಕರಣಗಳ ವ್ಯಾಪ್ತಿಯಲ್ಲಿ ಬರುತ್ತದೆ ಎಂದು...

Published On :
ನವದೆಹಲಿ: ಅಂತರ್ಜಾಲದಲ್ಲಿ ಮಹಿಳೆಯರನ್ನು ಟ್ರೋಲ್ (ಅಪಹಾಸ್ಯ ) ಮಾಡುವುದು ಕೂಡಾ ಮಹಿಳೆಯರ ವಿರುದ್ಧದ ದೌರ್ಜನ್ಯ ಪ್ರಕರಣಗಳ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಕೇಂದ್ರ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮನೇಕಾ ಗಾಂಧಿ ಹೇಳಿದ್ದಾರೆ.
ನೆಟಿಜನ್‌ಗಳಿಗೆ ಆನ್‌ಲೈನ್‌ನಲ್ಲಿ ಯಾವ ರೀತಿ ವರ್ತಿಸಬೇಕು ಎಂಬುದರ ಬಗ್ಗೆ ಮಾರ್ಗದರ್ಶನ ನೀಡಬೇಕೆಂದು ಒತ್ತಾಯಿಸಿ ತಾನು ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದೇನೆ ಎಂದು ಹೇಳಿರುವ ಮನೇಕಾ, ಆನ್‌ಲೈನ್ ನಲ್ಲಿ ಟ್ರೋಲ್‌ಗೊಳಗಾಗುವ ವಿಷಯಗಳು ಮತ್ತು ಅವಮಾನಿಸಲ್ಪಡುವ ಸಂಗತಿಗಳು ಕೂಡಾ ಈ ಹೊಸ ನಿಯಮದ ವ್ಯಾಪ್ತಿಗೊಳಪಡಲಿದೆ ಎಂದಿದ್ದಾರೆಯ.
ಮಹಿಳೆಯರಿಗಾಗಿರುವ ರಾಷ್ಟ್ರೀಯ ನೀತಿಯ ಕರಡು ಪ್ರತಿಯನ್ನು ಮಂಗಳವಾರ ಬಿಡುಗಡೆ ಮಾಡಲಾಗಿತ್ತು. ಮಹಿಳೆಯರ ವಿರುದ್ಧದ ದೌರ್ಜನ್ಯಗಳನ್ನು ಅವರು ಹೇಗೆ ಎದುರಿಸಬೇಕೆಂಬುದನ್ನು ಈ ಕರಡು ಪ್ರತಿಯಲ್ಲಿ ವಿವರಿಸಲಾಗಿದೆ. ಸೈಬರ್ ಅಪರಾಧಗಳನ್ನು ತಡೆಯುವ ಬಗ್ಗೆ ಮತ್ತು ಬಾಡಿಗೆಗೆ ಗರ್ಭ ನೀಡುವ ಅಮ್ಮಂದಿರನ್ನು ಸಂರಕ್ಷಿಸಲು ಮತ್ತು ಕುಟುಂಬ ಯೋಜನೆಯ ಬಗ್ಗೆಯೂ ಈ ನೀತಿಯಲ್ಲಿ ವಿವರಿಸಿ ಹೇಳಲಾಗಿದೆ. ಮಾನಭಂಗ, ಕಳ್ಳ ಸಾಗಾಣಿಕೆ, ವರ ದಕ್ಷಿಣೆ, ಮಹಿಳೆಯರ ಉದ್ಯೋಗದ ಸಮಸ್ಯೆ ಮೊದಲಾದ ಸಮಸ್ಯೆಗಳಿಗೆ ಪರಿಹಾರ ಸೂಚಿಯನ್ನು ಇಲ್ಲಿ ನೀಡಲಾಗಿದೆ.
ಮುಂದಿನ 25-20 ವರ್ಷಗಳಲ್ಲಿ ಮಹಿಳೆಯರ ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸುವುದಕ್ಕಾಗಿ ಈ ನಿಯಮವನ್ನು ರೂಪಿಸಲಾಗಿದೆ. 2001ರಲ್ಲಿ ಈ ಬಗ್ಗೆ ಮೊದಲ ಬಾರಿಗೆ ನಿಯಮ ರೂಪಿಸಲಾಗಿತ್ತು. ಆರೋಗ್ಯ, ಪೋಷಕಾಹಾರ, ಆಹಾರ ಸುರಕ್ಷೆ, ವಿದ್ಯಾಭ್ಯಾಸ, ಆರ್ಥಿಕತೆ, ರಾಜಕೀಯದಲ್ಲಿ ಮೀಸಲಾತಿ, ಮಹಿಳೆಯರ ವಿರುದ್ಧದ ದೌರ್ಜನ್ಯ ಮೊದಲಾದ ಸಮಸ್ಯೆಗಳ ಪರಿಹಾರದ ಬಗ್ಗೆ ಇಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಮನೇಕಾ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


