ನಾಗಾಲ್ಯಾಂಡ್ ನ ಏಕೈಕ ಸಂಸದ ಪಕ್ಷದಿಂದ ಉಚ್ಛಾಟನೆ
ನಾಗಾಲ್ಯಾಂಡ್ ನ ಏಕೈಕ ಸಂಸದ ನೈಫಿಯು ರಿಯೊ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಕಾರಣದಿಂದ ನಾಗಾ ಪೀಪಲ್ಸ್ ಫ್ರಂಟ್ (ಎನ್ ಪಿಎಫ್) ಪಕ್ಷ ಉಚ್ಛಾಟನೆ ಮಾಡಿದೆ.

ಕೊಹಿಮಾ: ನಾಗಾಲ್ಯಾಂಡ್ ನ ಏಕೈಕ ಸಂಸದ ನೈಫಿಯು ರಿಯೊ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಕಾರಣದಿಂದ ನಾಗಾ ಪೀಪಲ್ಸ್ ಫ್ರಂಟ್ (ಎನ್ ಪಿಎಫ್) ಪಕ್ಷ ಉಚ್ಛಾಟನೆ ಮಾಡಿದೆ.
ನೈಫಿಯು ರಿಯೊ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದ್ದು, ಪ್ರಾಥಮಿಕ ಸದಸ್ಯತ್ವವನ್ನು ಅಮಾನತುಗೊಳಿಸಲಾಗಿದೆ ಎಂದು ಎನ್ ಪಿಎಫ್ ತಿಳಿಸಿದೆ. ಈ ಹಿಂದೆಯೂ ನಾಗಾಲ್ಯಾಂಡ್ ನ ಮುಖ್ಯಮಂತ್ರಿಯಾಗಿದ್ದ ನೈಫಿಯು ರಿಯೊ, ಈಗ ಮುಖ್ಯಮಂತ್ರಿಯಾಗುವ ಉದ್ದೇಶದಿಂದ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದರು. ಈ ಕಾರಣದಿಂದ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ ಎಂದು ನಾಗಾ ಪೀಪಲ್ಸ್ ಫ್ರಂಟ್ ಹೇಳಿದೆ.
2003 ರಿಂದ ಸತತ ಮೂರು ಬಾರಿ ನೈಫಿಯು ರಿಯೊ ನಾಗಾಲ್ಯಾಂಡ್ ನ ಮುಖ್ಯಮಂತ್ರಿಯಾಗಿದ್ದರು. 2014 ರಲ್ಲಿ ನಾಗಾಲ್ಯಾಂಡ್ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


