ಪ್ರಧಾನಿ ಮೋದಿ ಅಧಿಕೃತ ನಿವಾಸಕ್ಕೆ ಭೇಟಿ ನೀಡಿದ ತಾಯಿ ಹೀರಾಬೆನ್
ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಎರಡು ವರ್ಷಗಳ ಬಳಿಕ ಅವರ ತಾಯಿ ಹೀರಾಬೆನ್ ಇದೇ ಮೊದಲ ಬಾರಿಗೆ...

Published On :
ನವದೆಹಲಿ: ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಎರಡು ವರ್ಷಗಳ ಬಳಿಕ ಅವರ ತಾಯಿ ಹೀರಾಬೆನ್ ಇದೇ ಮೊದಲ ಬಾರಿಗೆ ಮೋದಿ ಅವರ ಅಧಿಕೃತ ನಿವಾಸ ದೆಹಲಿಯಲ್ಲಿರುವ 7 ಪಿಸಿಆರ್ ಗೆ ಭೇಟಿ ನೀಡಿದ್ದಾರೆ.
ಮೊಟ್ಟ ಮೊದಲ ಬಾರಿಗೆ ಅಧಿಕೃತ ನಿವಾಸಕ್ಕೆ ಭೇಟಿ ನೀಡಿದ ತಾಯಿಯೊಂದಿಗೆ ಕಾಲ ಕಳೆದ ಮೋದಿ, ನಿವಾಸವನ್ನು ಪರಿಚಯಿಸಿದರು. ತಾಯಿಯನ್ನು ವ್ಹೀಲ್ ಚೇರ್ ನಲ್ಲಿ ಕೂರಿಸಿ, ಅವರೇ ತಳ್ಳಿಕೊಂಡು ತಾಯಿಗೆ ತಮ್ಮ ನಿವಾಸದ ಮುಂಭಾಗದಲ್ಲಿರುವ ಹೂದೋಟವನ್ನು ಪರಿಚಯಿಸಿದರು.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ, ಅಮ್ಮ ಗುಜರಾತ್ ಗೆ ಮರಳಿದ್ದಾರೆ. ಬಹಳ ದಿನಗಳ ಬಳಿಕ ತಾಯಿಯ ಜೊತೆ ಕಾಲ ಕಳೆಯುವ ಅವಕಾಶ ಒದಗಿ ಬಂದಿತ್ತು ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


