ಕುಮಾರ್ ವಿಶ್ವಾಸ್ ಹಾಡಿಗೆ ಕೇಜ್ರಿವಾಲ್ ಲೈಕ್!
ಆಮ್ ಆದ್ಮಿ ಪಕ್ಷದ ಮುಖಂಡ ಕುಮಾರ್ ವಿಶ್ವಾಸ್ ಅವರು ಮಾದಕ ವಸ್ತು ಸಮಸ್ಯೆ ಬಗ್ಗೆ ಗೀತೆಯೊಂದನ್ನು...

Published On :
ನವದೆಹಲಿ: ಆಮ್ ಆದ್ಮಿ ಪಕ್ಷದ ಮುಖಂಡ ಕುಮಾರ್ ವಿಶ್ವಾಸ್ ಅವರು ಮಾದಕ ವಸ್ತು ಸಮಸ್ಯೆ ಬಗ್ಗೆ ಗೀತೆಯೊಂದನ್ನು ಬರೆದು, ಸಂಕಲನ ಮಾಡಿ ಸ್ವತಃ ಹಾಡಿದ್ದು, ಇದು ಯುಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ.
ಕುಮಾರ್ ವಿಶ್ವಾಸ್ ಅವರ ಈ ಗೀತೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಲೈಕ್ ಮಾಡಿದ್ದು, ತಮ್ಮ ಟ್ವಿಟರ್ ನಲ್ಲಿ ಮಸ್ಟ್ ವಾಚ್ ಎಂದು ಶೇರ್ ಮಾಡಿದ್ದಾರೆ. ಈ ಗೀತೆಯ ಟೈಟಲ್ 'ಎಕ್ ನಶಾ: ನಶೆ ಕೆ ಕಿಲಾಫ್'. ಮೇ 8ರಂದು ಬಿಡುಗಡೆಯಾದ ಈ ಗೀತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆಡಳಿತ ಪಕ್ಷ ಅಕಾಲಿ ದಳವನ್ನು ಗುರಿಯಾಗಿಸಿಕೊಂಡು ಈ ಗೀತೆಯನ್ನು ಹಾಡಲಾಗಿದ್ದು, ಬಾದಲ್ ಗಳು ನಮ್ಮ ರಸ್ತೆಗಳನ್ನು, ಕಾಲುವೆಗಳನ್ನು ಹಾಳು ಮಾಡಿದರು. ನದಿಗಳಿಂದ ಎಲ್ಲ ಮರಳನ್ನು ಬಗೆದುತೆಗೆದರು ಎಂದು ಕುಮಾರ್ ವಿಶ್ವಾಸ್ ಪಂಜಾಬಿಯಲ್ಲಿ ಹಾಡುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


