ಪಂಜಾಬ್‌ನಲ್ಲಿ ಮದ್ಯಸೇವನೆ ಮಾಡಿದರೆ ಗೋ ಸೇವಾ ತೆರಿಗೆ ಪಾವತಿ ಮಾಡಬೇಕು!
ಪಂಜಾಬ್‌ನಲ್ಲಿ ಮಾರಲ್ಪಡುವ ದೇಸೀ ನಿರ್ಮಿತ ವಿದೇಶೀ ಮದ್ಯಕ್ಕೆ ರು. 10 ಮತ್ತು ಪ್ರಾದೇಶಿಕ ಸ್ಥಳಗಳಲ್ಲಿ ತಯಾರಿಸಲ್ಪಡುವ ಮದ್ಯ ಹಾಗೂ ಬಿಯರ್‌ಗೆ ರು. 5...

Published On :
ಚಂಡೀಗಢ: ಪಂಜಾಬ್‌ನಲ್ಲಿ ಮದ್ಯಸೇವನೆಗೆ ಮಾಡಿದರೆ ಅವರಿಂದ ಗೋ ಸೇವಾ ತೆರಿಗೆಯನ್ನು ವಸೂಲಿ ಮಾಡುವ ಬಗ್ಗೆ ಪಂಜಾಬ್ ಸರ್ಕಾರ ಚಿಂತನೆ ನಡೆಸಿದೆ.
ಪಂಜಾಬ್‌ನಲ್ಲಿ ಮಾರಲ್ಪಡುವ ದೇಸೀ ನಿರ್ಮಿತ ವಿದೇಶೀ ಮದ್ಯಕ್ಕೆ ರು. 10 ಮತ್ತು ಪ್ರಾದೇಶಿಕ ಸ್ಥಳಗಳಲ್ಲಿ ತಯಾರಿಸಲ್ಪಡುವ ಮದ್ಯ ಹಾಗೂ ಬಿಯರ್‌ಗೆ ರು. 5 ಗೋ ಸೋವಾ (ಗೋವು ಸೇವಾ) ತೆರಿಗೆ ವಸೂಲಿ ಮಾಡಿಕೊಳ್ಳಲು ಸರ್ಕಾರ ಚಿಂತಿಸಿದೆ. ಒಂದು ಕೇಸ್ ಭಾರತ ನಿರ್ಮಿತ ವಿದೇಶಿ ಮದ್ಯಕ್ಕೆ ರು. 120 ಹಾಗೂ ದೇಸೀ ಮದ್ಯದ ಒಂದು ಕೇಸ್‌ಗೆ ರು. 60 ರಂತೆ ತೆರಿಗೆ ದರ ವಿಧಿಸಲಾಗುವುದು.
ಈ ಆರ್ಥಿಕ ವರ್ಷದಲ್ಲಿ ಗೋ ಸೇವಾ ತೆರಿಗೆ ವಿಧಿಸುವುದರ ಬಗ್ಗೆ ರಾಜ್ಯದ ಮದ್ಯ ನೀತಿಯಲ್ಲಿ ತೀರ್ಮಾನ ತೆಗೆದುಕೊಂಡಿರಲಿಲ್ಲ. ಆದರೆ ಪೌರಾಡಳಿತ ಸಚಿವ ಅನಿಲ್ ಜೋಷಿಯವರ ಆಗ್ರಹದಂತೆ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಮದ್ಯ ನೀತಿಯಲ್ಲಿ ತಿದ್ದುಪಡಿ ಮಾಡಿದ್ದಾರೆ.
ಗೋ ಸೇವಾ ತೆರಿಗೆಗೆ ಸಂಬಂಧಿಸಿದಂತೆ ಔಪಚಾರಿಕ ವಿಜ್ಞಾಪನೆ ಮೇ 25ರಂದು ಪ್ರಕಟವಾಗಲಿದೆ. ಪಂಜಾಬ್‌ನಲ್ಲಿರುವ 22 ಜಿಲ್ಲೆಗಳಲಿ ಜೂನ್ ತಿಂಗಳಿಂದ ಗೋ ಸೇವಾ ತೆರಿಗೆ ಜಾರಿ ಮಾಡಲಾಗುವುದು ಎಂದು ಅನಿಲ್ ಜೋಷಿ ಹೇಳಿದ್ದಾರೆ.
ಗೋ ಸೇವಾ ತೆರಿಗೆ ಜಾರಿಗೆ ಬಂದರೆ ಈ ಮೂಲಕ ಪ್ರತೀ ವರ್ಷ ರು. 60 ಕೋಟಿ ಹಣ ಸರ್ಕಾರ ಬೊಕ್ಕಸಕ್ಕೆ ಬಂದು ಬೀಳಲಿದೆ ಎಂಬುದು ಸರ್ಕಾರದ ಲೆಕ್ಕಾಚಾರ. ಪಂಜಾಬ್ ನಲ್ಲಿ 472 ದೊಡ್ಡಿಗಳಿದ್ದು 2.69 ಲಕ್ಷ ಹಸುಗಳಿವೆ. ಸುಮಾರು ಒಂದು ಲಕ್ಷಕ್ಕಿಂತಲೂ ಹೆಚ್ಚು ಅಬ್ಬೇಪಾರಿ ಹಸುಗಳು ರಸ್ತೆಯಲ್ಲೇ ವಾಸ್ತವ್ಯ ಹೂಡುತ್ತಿವೆ ಎಂದು ಪಂಜಾಬ್ ಸರ್ಕಾರ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


