ಅಧಿಕೃತ ಪಾಸ್ ಪೋರ್ಟ್ ಮೂಲಕ ಯುಕೆಗೆ ತೆರಳಿರುವ ಮಲ್ಯ; ಗಡಿಪಾರು ಸಾಧ್ಯವಿಲ್ಲ: ಅರುಣ್ ಜೇಟ್ಲಿ
ಬ್ಯಾಂಕ್ ಗಳಿಗೆ ಸಾಲ ವಾಪಸ್ ನೀಡಲಾಗದೇ ಸುಸ್ತೀದಾರರಾಗಿರುವ ವಿಜಯ್ ಮಲ್ಯ ಅವರನ್ನು ಗಡಿ ಪಾರು ಮಾಡಲು ಬ್ರಿಟನ್ ಸರ್ಕಾರ ನಿರಾಕರಿಸಿರುವುದರ ಬಗ್ಗೆ ರಾಜ್ಯಸಭೆಯಲ್ಲಿ ಚರ್ಚೆ ನಡೆದಿದೆ.

ನವದೆಹಲಿ: ಬ್ಯಾಂಕ್ ಗಳಿಗೆ ಸಾಲ ವಾಪಸ್ ನೀಡಲಾಗದೇ ಸುಸ್ತೀದಾರರಾಗಿರುವ ವಿಜಯ್ ಮಲ್ಯ ಅವರನ್ನು ಗಡಿ ಪಾರು ಮಾಡಲು ಬ್ರಿಟನ್ ಸರ್ಕಾರ ನಿರಾಕರಿಸಿರುವುದರ ಬಗ್ಗೆ ರಾಜ್ಯಸಭೆಯಲ್ಲಿ ಚರ್ಚೆ ನಡೆದಿದೆ.
ಮಲ್ಯ ಅವರನ್ನು ವಾಪಸ್ ಕರೆತರುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿತ್ತು. ಆದರೆ ಈಗ ಬ್ರಿಟನ್ ಸರ್ಕಾರ ಮಲ್ಯ ಅವರನ್ನು ಗಡಿಪಾರು ಮಾಡಲು ಸಾಧ್ಯವೇ ಇಲ್ಲ ಎನ್ನುತ್ತಿದೆ. ಮಲ್ಯ ದೇಶದಿಂದ ಹಣಪಡೆದು ಬ್ರಿಟನ್ ಗೆ ತೆರಳುವಾಗ ಸರ್ಕಾರ ನಿದ್ದೆ ಮಾಡುತ್ತಿತ್ತಾ? ಎಂಬ ಜೆಡಿಯು ನಾಯಕ ಶರದ್ ಯಾದವ್ ಪ್ರಶ್ನೆಗೆ ಉತ್ತರಿಸಿದ ಅರುಣ್ ಜೇಟ್ಲಿ, ತನಿಖಾ ಸಂಸ್ಥೆಗಳು ಗಡಿಪಾರು ಮಾಡಲು ಬ್ರಿಟನ್ ಸರ್ಕಾರವನ್ನು ಕೇಳಿದ್ದವು. ಆದರೆ ಬ್ರಿಟನ್ ಸರ್ಕಾರ ಇದಕ್ಕೆ ನಿರಾಕರಿಸಿದೆ ಎಂದು ಹೆಳಿದ್ದಾರೆ.
ವಿಜಯ್ ಮಲ್ಯ ಅವರ ರಾಜತಾಂತ್ರಿಕ ಪಾಸ್ ಪೋಸ್ ಪೋರ್ಟ್ ನ್ನು ರದ್ದುಗೊಳಿಸಲಾಗಿದೆಯಾದರೂ, ಅಧಿಕೃತ ಪಾಸ್ ಪೋರ್ಟ್ ಹೊಂದಿ ಯುಕೆಗೆ ತಲುಪಿದ್ದಾರೆ ಆದ್ದರಿಂದ ಗಡಿಪಾರು ಮಾಡುವುದು ಸಾಧ್ಯವಿಲ್ಲ ಎಂದು ಅರುಣ್ ಜೇಟ್ಲಿ ಸ್ಪಷ್ಟನೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


