ಜಿಶಾ ರೇಪ್ ದಿನವೇ ಅಸ್ಸಾಂನಲ್ಲಿ ಯುವತಿಯ ಅತ್ಯಾಚಾರ ಕೊಲೆ
ಕೇರಳದಲ್ಲಿ 27 ವರ್ಷದ ಎಲ್ಎಲ್ ಬಿ ವಿದ್ಯಾರ್ಥಿನಿ ಜಿಶಾ ಕೊಲೆ ಪ್ರಕರಣ ದಿನವೇ ಅಸ್ಸಾಂನಲ್ಲೂ ಯುವತಿಯೊರ್ವಳ ಮೇಲೆ ಅತ್ಯಾಚಾರ ವೆಸಗಿ ಭೀಕರವಾಗಿ ಕೊಲೆ...

ಅಸ್ಸಾಂ: ಕೇರಳದಲ್ಲಿ 27 ವರ್ಷದ ಎಲ್ಎಲ್ ಬಿ ವಿದ್ಯಾರ್ಥಿನಿ ಜಿಶಾ ಕೊಲೆ ಪ್ರಕರಣ ದಿನವೇ ಅಸ್ಸಾಂನಲ್ಲೂ ಯುವತಿಯೊರ್ವಳ ಮೇಲೆ ಅತ್ಯಾಚಾರ ವೆಸಗಿ ಭೀಕರವಾಗಿ ಕೊಲೆ ಮಾಡಲಾಗಿದೆ.
ಏಪ್ರಿಲ್ 28 ರಂದು ಬ್ಯುಟಿ ಪಾರ್ಲರ್ ಗೆ ತೆರಳಿದ್ದ ಟಿನ್ಲುಕಿಯಾ ಜಿಲ್ಲೆಯ ಮಾರ್ಗೆರೀಟಾ ಪಟ್ಟಣದ 20ರ ಹರೆಯದ ಚಂಪಾ ಚೆಟ್ರಿ ನಾಪತ್ತೆಯಾಗಿದ್ದು, ಮೇ 3ರಂದು ದಿಹಿಂಗ್ ನದಿಯಲ್ಲಿ ಚಂಪಾರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಇನ್ನು ಚಂಪಾ ಚೆಟ್ರಿ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗಳು ಆಕೆಯನ್ನು ಕೊಲೆಗೈದು ದೇಹವನ್ನು ಸುಡಲು ಪ್ರಯತ್ನಿಸಿ ಕೊನೆಗೆ ನದಿಯಲ್ಲಿ ಬಿಸಾಡಿ ಪರಾರಿಯಾಗಿದ್ದರು. ಈ ಪ್ರಕರಣ ಸಂಬಂಧ ಬಿಸ್ವಾಜಿತ್ ಚೆಟ್ರಿ ಮತ್ತು ಮೊಯಿನುಲ್ ಅಲಿ ಎಂಬುವರನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 366, 376 ಮತ್ತು 342/34ರ ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


