2 ದಿನದಲ್ಲಿ ಡ್ಯಾನ್ಸ್ ಬಾರ್ ಗಳಿಗೆ ಲೈಸನ್ಸ್ ನೀಡಿ: ಮಹಾ ಸರ್ಕಾರಕ್ಕೆ ಸುಪ್ರೀಂ ಸೂಚನೆ
ಎರಡು ದಿನದಲ್ಲಿ ಎಂಟು ಬಾರ್ ಡ್ಯಾನ್ಸ್ ಗಳಿಗೆ ಪರವಾನಗಿ ನೀಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಮಂಗಳವಾರ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.

Published On :
ನವದೆಹಲಿ: ಎರಡು ದಿನದಲ್ಲಿ ಎಂಟು ಬಾರ್ ಡ್ಯಾನ್ಸ್ ಗಳಿಗೆ ಪರವಾನಗಿ ನೀಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಮಂಗಳವಾರ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಪರವಾನಗಿ ನೀಡಲು ನಿರಾಕರಿಸುತ್ತಿರುವ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಡ್ಯಾನ್ಸ್ ಬಾರ್ ಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಡ್ಯಾನ್ಸ್ ಬಾರ್ ಗಳನ್ನು ನಿರ್ಭಂದಿಸಲು ಯತ್ನಿಸುತ್ತಿರುವ ಮಹಾರಾಷ್ಟ್ರ ತರಾಟೆಗೆ ತೆಗೆದುಕೊಂಡಿತು. ಅಲ್ಲದೆ ಎರಡು ದಿನದಲ್ಲಿ ಲೈಸನ್ಸ್ ನೀಡುವಂತೆ ಸೂಚಿಸಿ, ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದೆ.
ಏಪ್ರಿಲ 25ರಂದು ನಡೆದ ವಿಚಾರಣೆ ವೇಳೆ ಕೆಲವು ಅತಾರ್ಕಿಕ ನಿಯಮಗಳನ್ನು ವಿಧಿಸಿ ಡ್ಯಾನ್ಸ್ ಬಾರ್ ಗಳಿಗೆ ಪರವಾನಗಿ ನೀಡಲು ನಿರಾಕರಿಸುತ್ತಿರುವ ರಾಜ್ಯ ಸರ್ಕಾರ ತೀವ್ರ ತರಾಟೆಗೆ ತೆಗೆದುಕೊಂಡ ಕೋರ್ಟ್, ಮಹಿಳೆಯರು ರಸ್ತೆಯಲ್ಲಿ ಭಿಕ್ಷೆ ಬೇಡುವುದಕ್ಕಿಂತ ಬಾರ್ ನಲ್ಲಿ ಡ್ಯಾನ್ಸ್ ಮಾಡಿ ಜೀವನ ನಿರ್ವಹಣೆಗೆ ಹಣ ಸಂಪಾದಿಸುವುದೇ ಉತ್ತಮ ಎಂದು ಅಭಿಪ್ರಾಯಪಟ್ಟಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


