ದೇಶ

ರಾಜಸ್ತಾನದ ಪಠ್ಯಪುಸ್ತಕದಲ್ಲಿ ಮಕ್ಕಳಿಗೆ ಹಸುವಿನ 'ಪತ್ರ'

ಹಿಂದುತ್ವ ಅಜೆಂಡಾವನ್ನು ಮುಂದಿಡುವ ರಾಜಸ್ತಾನದ ವಸುಂಧರಾ ರಾಜೆ ಸರ್ಕಾರ, ಇದೀಗ ತಾಯಿ ಮಕ್ಕಳಿಗೆ ಪತ್ರ ಬರೆಯುವಂತೆ ಹಸುವೊಂದು...

ರಾಜಸ್ತಾನದ ಪಠ್ಯಪುಸ್ತಕದಲ್ಲಿ ಮಕ್ಕಳಿಗೆ ಹಸುವಿನ 'ಪತ್ರ'
ಸಾಂದರ್ಭಿಕ ಚಿತ್ರ
Published On :

ಜೈಪುರ್/ ಜೈಸಲ್ಮಾರ್: ಹಿಂದುತ್ವ ಅಜೆಂಡಾವನ್ನು ಮುಂದಿಡುವ ರಾಜಸ್ತಾನದ ವಸುಂಧರಾ ರಾಜೆ ಸರ್ಕಾರ, ಇದೀಗ ತಾಯಿ ಮಕ್ಕಳಿಗೆ ಪತ್ರ ಬರೆಯುವಂತೆ ಹಸುವೊಂದು ತಾಯಿಯ ರೂಪದಲ್ಲಿ ಮಕ್ಕಳಿಗೆ ಪತ್ರ ಬರೆಯುವ ಪಾಠವನ್ನು ಸರ್ಕಾರಿ ಶಾಲಾ ಪರಿಷ್ಕೃತ ಪಠ್ಯಪುಸ್ತಕದಲ್ಲಿ ಸೇರಿಸಿದೆ.

ದೇಶದಲ್ಲಿಯೇ ಪಶುವಿಗೆ ಪ್ರತ್ಯೇಕ ಸಚಿವಾಲಯ ಹೊಂದಿರುವ ರಾಜ್ಯವಾದ ರಾಜಸ್ತಾನದಲ್ಲಿ 5ನೇ ತರಗತಿಯ ಹಿಂದಿ ಪಠ್ಯಪುಸ್ತಕದ ಗೋಪಾಲನ್ ಎಂಬ ಪಾಠದಲ್ಲಿ ದೊಡ್ಡದಾದ ಹಸುವಿನ ಚಿತ್ರ ಹಾಕಿ ಅದರೊಳಗೆ ವಿವಿಧ ಹಿಂದೂ ದೇವರ ಚಿತ್ರಗಳನ್ನು ಮುದ್ರಿಸಿದೆ.
 
ಮಾನವರು ಹಸುವನ್ನು ತಾಯಿ ಸಮಾನವಾಗಿ ನೋಡಬೇಕು ಎಂಬ ನೀತಿಯಿದೆ. ಪಾಠದಲ್ಲಿ ಹಸು ಮಕ್ಕಳನ್ನು ನನ್ನ ಮಕ್ಕಳೇ ಎಂದು ಸಂಬೋಧಿಸಿ ನಾನು ಪ್ರತಿಯೊಬ್ಬರಿಗೆ ಶಕ್ತಿ, ಬುದ್ಧಿ, ದೀರ್ಘಾಯಸ್ಸು, ಆರೋಗ್ಯ, ಸಂತೋಷ ಮತ್ತು ಸಮೃದ್ಧಿಯನ್ನು ನೀಡುತ್ತೇನೆ. ಯಾರು ನನ್ನನ್ನು ಪರಿಗಣಿಸುತ್ತಾರೆಯೋ ಅವರು ನನ್ನನ್ನು ತಾಯಿಯೆಂದು ಹೇಳುತ್ತಾರೆ ಮತ್ತು ನಾನು ಅವರನ್ನು ಸಂತತಿಯಂತೆ ನೋಡಿಕೊಳ್ಳುತ್ತೇನೆ ಎಂದು ಹಸು ವಿವರಿಸುವ ಸಾಲುಗಳಿವೆ.

ಹಸುವಿನಿಂದ ಸಮಾಜಕ್ಕೇನು ಉಪಯೋಗ ಎಂಬುದನ್ನು ಕೂಡ ಪಾಠದಲ್ಲಿ ವಿವರಿಸಲಾಗಿದೆ. ನಾನು ಹಾಲು, ಮೊಸರು, ಬೆಣ್ಣೆ, ತುಪ್ಪದಂತಹ ಅಮೃತವನ್ನು ಉತ್ಪಾದಿಸುತ್ತೇನೆ. ನನ್ನ ಸಗಣಿ ಮತ್ತು ಮೂತ್ರವನ್ನು ಗೊಬ್ಬರಕ್ಕೆ, ಔಷಧಕ್ಕೆ ಬಳಸುತ್ತಾರೆ. ನನ್ನ ಸಂತತಿಯಾದ ಎತ್ತುಗಳನ್ನು ಕೂಡ ಕೃಷಿ ಚಟುವಟಿಕೆಗಳಿಗೆ ಬಳಸಲಾಗುತ್ತದೆ. ಪರಿಸರ ರಕ್ಷಣೆಯಲ್ಲಿಯೂ ನನ್ನ ಪಾತ್ರವಿದೆ ಎಂಬ ಸಾಲುಗಳು ಪಾಠದಲ್ಲಿದೆ.

ಪಶು ಖಾತೆ ಸಚಿವ ಒಟಾರಮ್ ದೇವಸಿ ಮಾಧ್ಯಮದೊಂದಿಗೆ ಮಾತನಾಡಿ, ಪಶುಗಳ ಲಾಭವನ್ನು ಮಕ್ಕಳಿಗೆ ತಲುಪಿಸಲು ಇದೊಂದು ಪರಿಣಾಮಕಾರಿ ಹೆಜ್ಜೆ ಈ  ಪಾಠವನ್ನು ಮಕ್ಕಳಲ್ಲಿ ಪಶುಗಳ ಬಗ್ಗೆ ಜಾಗೃತಿ ಮೂಡಿಸಲು ಮುದ್ರಿಸಲಾಗಿದೆಯೇ ಹೊರತು ಪರೀಕ್ಷೆಗೆ ಇದನ್ನು ಪರಿಗಣಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.