ದೇಶ

ಉತ್ತರಾಖಂಡ್: ಸುಪ್ರೀಂನಲ್ಲೂ ಅನರ್ಹ ಶಾಸಕರಿಗೆ ಹಿನ್ನಡೆ, ರಾವತ್ ವಿಶ್ವಾಸಮತ ಗೆಲ್ಲುವ ಸಾಧ್ಯತೆ

ಉತ್ತರಾಖಂಡ್ ರಾಜಕೀಯ ಬಿಕ್ಕಟ್ಟು ಹೊಸ ತಿರುವು ಪಡೆದುಕೊಂಡಿದ್ದು, ಅನರ್ಹಗೊಂಡಿರುವ ಕಾಂಗ್ರೆಸ್ಸಿನ 9 ಬಂಡಾಯ ಶಾಸಕರಿಗೆ ಸೋಮವಾರ ಸುಪ್ರೀಂ...

ಉತ್ತರಾಖಂಡ್: ಸುಪ್ರೀಂನಲ್ಲೂ ಅನರ್ಹ ಶಾಸಕರಿಗೆ ಹಿನ್ನಡೆ, ರಾವತ್ ವಿಶ್ವಾಸಮತ ಗೆಲ್ಲುವ ಸಾಧ್ಯತೆ
ಹರಿಶ್ ರಾವತ್
Published On :
ನವದೆಹಲಿ: ಉತ್ತರಾಖಂಡ್ ರಾಜಕೀಯ ಬಿಕ್ಕಟ್ಟು ಹೊಸ ತಿರುವು ಪಡೆದುಕೊಂಡಿದ್ದು, ಅನರ್ಹಗೊಂಡಿರುವ ಕಾಂಗ್ರೆಸ್ಸಿನ 9 ಬಂಡಾಯ ಶಾಸಕರಿಗೆ ಸೋಮವಾರ ಸುಪ್ರೀಂ ಕೋರ್ಟ್ ನಲ್ಲೂ ಹಿನ್ನಡೆಯಾಗಿದ್ದು, ಕೋರ್ಟ್ ಅನರ್ಹತೆ ವಿಚಾರಣೆಯನ್ನು ಜೂನ್ 12ಕ್ಕೆ ಮುಂದೂಡಿದೆ.
ಕಾಂಗ್ರೆಸ್ ಶಾಸಕರ ಅನರ್ಹತೆಯನ್ನು ನಿನ್ನೆ ಉತ್ತರಾಖಂಡ್ ಹೈಕೋರ್ಟ್ ಎತ್ತಿ ಹಿಡಿದಿತ್ತು. ಆದರೆ ಹೈಕೋರ್ಟ್ ಆದೇಶ ಪ್ರಶ್ನಿಸಿ ಬಂಡಾಯ ಶಾಸಕರು ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. 
ಇಂದು ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್, ಈ ಸಂಬಂಧ ಉತ್ತರಾಖಂಡ್ ಸ್ವೀಕರ್ ಜಿ.ಎಸ್. ಕುಂಜವಾಲ್ ಹಾಗೂ ಮುಖ್ಯಮಂತ್ರಿ ಹರೀಶ್ ರಾವತ್ ಅವರಿ ನೋಟಿಸ್ ನೀಡಿ, ವಿಚಾರಣೆಯನ್ನು ಜೂನ್ 12ಕ್ಕೆ ಮುಂದೂಡಿದೆ. ಅಲ್ಲದೆ ನಾಳೆ ನಡೆಯುವ ವಿಶ್ವಾಸಮತಯಾಚನೆ ವೇಳೆ ಸದನದಿಂದ ಹೊರಗುಳಿಯುವಂತೆ ಸೂಚಿಸಿದೆ. ಇದರಿಂದಾಗಿ ಹರೀಶ್‌ ರಾವತ್‌ ನಿಟ್ಟುಸಿರು ಬಿಡುವಂತಾಗಿದ್ದರೆ, ಬಿಜೆಪಿಗೆ ಭಾರೀ ಹಿನ್ನಡೆಯಾಗಿದೆ.
ಒಂದು ದಿನದ ಮಟ್ಟಿಗೆ ರಾಷ್ಟ್ರಪತಿ ಆಳ್ವಿಕೆ ಹಿಂಪಡೆದು, ಹರೀಶ್‌ ರಾವತ್‌ ಅವರು ವಿಶ್ವಾಸಮತ ಸಾಬೀತುಪಡಿಸಲು ಅವಕಾಶ ಕೊಡಬೇಕು ಎಂದು ಸುಪ್ರೀಂಕೋರ್ಟ್‌ ಶುಕ್ರವಾರ ಹೇಳಿತ್ತು. ಅಲ್ಲದೆ ಅನರ್ಹಗೊಂಡಿರುವ ಶಾಸಕರು, ಮತದಾನದ ಸಂದರ್ಭದಲ್ಲೂ ಅನರ್ಹರಾಗಿಯೇ ಇದ್ದರೆ ಅವರಿಗೆ ಮತ ಹಾಕುವ ಅವಕಾಶವಿರುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು. 
70 ಸದಸ್ಯ ಬಲದ ಉತ್ತರಾಖಂಡ್ ವಿಧಾನ ಸಭೆಯ ಸಂಖ್ಯಾಬಲ ಈಗ 61ಕ್ಕೆ ಕುಸಿದಿದ್ದು, ಹರೀಶ್ ರಾವತ್ ಅವರು 31 ಶಾಸಕರ ಬೆಂಬಲ ಪಡೆದರೆ ಬಹುಮತ ಹೊಂದಿದಂತಾಗುತ್ತದೆ. ವಿಪಕ್ಷ ಬಿಜೆಪಿ 28 ಶಾಸಕರನ್ನು ಹೊಂದಿದೆ.
ಬಿಎಸ್‌ಪಿ 2 ,ಉತ್ತಾರಖಂಡ ಕ್ರಾಂತಿ ದಳ 1,ಪಕ್ಷೇತರ 3 ಮಂದಿ ಶಾಸಕರಿದ್ದು. ಈ ಪೈಕಿ 4 ಮಂದಿಯ ಬೆಂಬಲ ಪಡೆದರೆ ರಾವತ್‌ ಬಹುವತ ಪಡೆಯುವುದು ಸುಲಭವಾಗುತ್ತದೆ. ಆದರೆ ಪ್ರಮುಖ ಪ್ರಶ್ನೆಯಾಗಿರುವುದು ಸ್ವಪಕ್ಷೀಯ 27 ಶಾಸಕರ ಬೆಂಬಲ ಪಡೆಯುವುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.