ಆನೆಗಳ ಒಡೆಯರಿಗೆ ಮಾಲೀಕತ್ವ ಪ್ರಮಾಣಪತ್ರ ನೀಡಬೇಡಿ: ಸುಪ್ರೀಂ
ಆನೆಗಳ ಮಾಲೀಕರಿಗೆ ಕೇರಳ ಸರ್ಕಾರ ನೀಡುವ ಮಾಲೀಕತ್ವದ ಪ್ರಮಾಣಪತ್ರಕ್ಕೆ ಸುಪ್ರೀಂ ಕೋರ್ಟ್...

Published On :
ನವದೆಹಲಿ: ಆನೆಗಳ ಮಾಲೀಕರಿಗೆ ಕೇರಳ ಸರ್ಕಾರ ನೀಡುವ ಮಾಲೀಕತ್ವದ ಪ್ರಮಾಣಪತ್ರಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.
ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ಎಸ್ ಕೆ ಸಿಂಗ್ ಅವರನ್ನೊಳಗೊಂಡ ನ್ಯಾಯಾಪೀಠ, ಆನೆಗಳ ಮಾಲೀಕರಿಗೆ ಒಡೆತನದ ಸರ್ಟಿಫಿಕೇಟ್ ನೀಡಬೇಡಿ ಎಂದು ಕೇರಳ ಸರ್ಕಾರಕ್ಕೆ ಸೂಚಿಸಿದೆ.
ಇನ್ನು ಈಗಾಗಲೇ ಆನೆಯ ಮಾಲೀಕತ್ವ ಸರ್ಟಿಫಿಕೇಟ್ ಪಡೆದಿರುವವರು ಯಾವುದೇ ಕಾರಣಕ್ಕೂ ಹೊರ ರಾಜ್ಯಗಳಿಗೆ ಆನೆಗಳನ್ನು ಸ್ಥಳಾಂತರಿಸುವಂತಿಲ್ಲ ಎಂದು ಪೀಠ ತಿಳಿಸಿದೆ.
ಧಾರ್ಮಿಕ ಮೆರವಣಿಗೆಗೆ ಬಳಸಲು ಆನೆಗಳನ್ನು ಸಾಕಲಾಗುತ್ತಿದ್ದು, ಆನೆಗಳನ್ನು ಹಿಂಸಿಸಲಾಗುತ್ತಿದೆ. ಹಾಗಾಗಿ ಇದಕ್ಕೆ ತಡೆ ನೀಡಬೇಕು ಎಂದು ವನ್ಯಜೀವಿ ರಕ್ಷಣಾ ಮತ್ತು ಪುನರ್ವಸತಿ ಕೇಂದ್ರ ಸೇರಿದಂತೆ ಆರು ಸಂಸ್ಥೆಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಪೀಠ ಈ ಆದೇಶ ಹೊರಡಿಸಿದೆ.
ಧಾರ್ಮಿಕ ಮೆರವಣಿಗೆಗಳಿಗೆ ಆನೆಗಳನ್ನು ಬಳಸಿಕೊಳ್ಳಲಾಗುತ್ತಿದ್ದು, ಹೊರ ರಾಜ್ಯಗಳಿಗೆಲ್ಲಾ ಕಳಿಸಿ, ಹಿಂಸಿಸಲಾಗುತ್ತಿದೆ. ಅಲ್ಲದೇ, ಧಾರ್ಮಿಕ ಉತ್ಸವದಲ್ಲಿ ಉಂಟಾಗುವ ಗಲಭೆಯಲ್ಲಿ ಆನೆಗಳಿಗೆ ತೀವ್ರವಾಗಿ ತೊಂದರೆಯಾಗುತ್ತಿದೆ ಎಂದು ಸಂಸ್ಥೆಗಳು ಆರೋಪಿಸಿದ್ದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


