ರಾಜ್ಯಸಭೆ ಸದಸ್ಯತ್ವ ತಿರಸ್ಕರಿಸಿದ ಗಾಯತ್ರಿ ಪರಿವಾರ ಮುಖ್ಯಸ್ಥ ಪ್ರಣವ್ ಪಾಂಡ್ಯ
ಎರಡು ದಿನಗಳ ಹಿಂದಷ್ಟೆ ರಾಜ್ಯಸಭೆಗೆ ನಾಮ ನಿರ್ದೇಶನಗೊಂಡಿದ್ದ ಮುಂಬೈನ ವಿಶ್ವ ಗಾಯತ್ರಿ ಪರಿವಾರ ಸಂಘಟನೆಯ ಮುಖ್ಯಸ್ಥ ಪ್ರಣವ್ ಪಾಂಡ್ಯ ಅವರು...

ನವದೆಹಲಿ: ಎರಡು ದಿನಗಳ ಹಿಂದಷ್ಟೆ ರಾಜ್ಯಸಭೆಗೆ ನಾಮ ನಿರ್ದೇಶನಗೊಂಡಿದ್ದ ಮುಂಬೈನ ವಿಶ್ವ ಗಾಯತ್ರಿ ಪರಿವಾರ ಸಂಘಟನೆಯ ಮುಖ್ಯಸ್ಥ ಪ್ರಣವ್ ಪಾಂಡ್ಯ ಅವರು ಸದಸ್ಯತ್ವವನ್ನು ತಿರಸ್ಕರಿಸಿದ್ದಾರೆ.
ಸರ್ಕಾರದ ಶಿಫಾರಸಿನ ಮೇಲೆ ಮೇ 4 ರಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಪ್ರಣವ್ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದರು. ನಂತರ ತಮ್ಮ ಶಾಂತಿಕುಂಜ್ ಕಾರ್ಯಕಾರಿ ಮಂಡಳಿ ಸದಸ್ಯರ ಜತೆ ಚರ್ಚಿಸಿ ಈ ನಿರ್ಧಾರಕ್ಕೆ ಬಂದಿದ್ದೇನೆ, ನನ್ನ ನಿರ್ಧಾರಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ ಎಂದು ಹೇಳಿರುವ ಅವರು ನಾನು ರಾಜ್ಯಸಭೆ ಸದಸ್ಯತ್ವದ ರೇಸ್ ನಲ್ಲಿ ಇರಲಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಗಾಯತ್ರಿ ಪರಿವಾರ ಸುಮಾರು 12 ಕೋಟಿ ಸದಸ್ಯರನ್ನು ಹೊಂದಿದೆ. ನಾನು ರಾಜ್ಯ ಸಭೆ ಸದಸ್ಯತ್ವ ಪಡೆಯುವುದು ಅವರ ಮೇಲೆ ಪರಿಣಾಮ ಬೀರಬಹುದು. ನಾನು ಯಾವುತ್ತೂ ರಾಜ್ಯಸಭೆ ಸದಸ್ಯನಾಗಬೇಕು ಎಂದು ಬಯಸಿರಲಿಲ್ಲ ಎಂದು ಪ್ರಣವ್ ಪಾಂಡ್ಯ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


