ದೇಶ

ಪ್ರಧಾನಿ ಮೋದಿಯಿಂದ "ಏಕ ವ್ಯಕ್ತಿ ಅಧ್ಯಕ್ಷೀಯ ಸರ್ಕಾರ": ಅರುಣ್ ಶೌರಿ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಮೇಲೆ ನೇರ ವಾಗ್ದಾಳಿ ಮಾಡಿರುವ ಮಾಜಿ ಕೇಂದ್ರ ಸಚಿವ ಅರುಣ್ ಶೌರಿ ಅವರು ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಏಕ ವ್ಯಕ್ತಿ "ಅಧ್ಯಕ್ಷೀಯ ಸರ್ಕಾರ" ಎಂದು ಟೀಕಿಸಿದ್ದಾರೆ...

ಪ್ರಧಾನಿ ಮೋದಿಯಿಂದ "ಏಕ ವ್ಯಕ್ತಿ ಅಧ್ಯಕ್ಷೀಯ ಸರ್ಕಾರ": ಅರುಣ್ ಶೌರಿ
ಮಾಜಿ ಕೇಂದ್ರ ಸಚಿವ ಅರುಣ್ ಶೌರಿ (ಸಂಗ್ರಹ ಚಿತ್ರ)
Published On :

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಮೇಲೆ ನೇರ ವಾಗ್ದಾಳಿ ಮಾಡಿರುವ ಮಾಜಿ ಕೇಂದ್ರ ಸಚಿವ ಅರುಣ್ ಶೌರಿ ಅವರು ಪ್ರಧಾನಿ ನರೇಂದ್ರ ಮೋದಿ  ಸರ್ಕಾರವನ್ನು ಏಕ ವ್ಯಕ್ತಿ "ಅಧ್ಯಕ್ಷೀಯ ಸರ್ಕಾರ" ಎಂದು ಟೀಕಿಸಿದ್ದಾರೆ.

ಖಾಸಗಿ ಸುದ್ದಿವಾಹಿನಿಯ ಸಂದರ್ಶನದಲ್ಲಿ ಪಾಲ್ಗೊಂಡಿದ್ದ ಅರುಣ್ ಶೌರಿ ಅವರು, ಪ್ರಧಾನಿ ಮೋದಿ ಸ್ವಪ್ರಶಂಸೆ ಮಾಡಿಕೊಳ್ಳುವ ನಾರ್ಸಿಸಮ್ ಮನೋಭಾವದ ವ್ಯಕ್ತಿಯಾಗಿದ್ದು, ಅವರ ಅಧೀನದ  ಕೇಂದ್ರ ಸರ್ಕಾರ ಏಕವ್ಯಕ್ತಿಯ ಅಧ್ಯಕ್ಷೀಯ ಸರ್ಕಾರವಾಗಿದ್ದು, ಭವಿಷ್ಯದ ಭಾರತದ ಮೇಲೆ ಇದು ಗಂಭೀರ ಪರಿಣಾಮ ಬೀರಲಿದೆ ಎಂದು ಟೀಕಿಸಿದ್ದಾರೆ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಸಚಿವರಾಗಿದ್ದ ಶೌರಿ ಅವರು, ಆ ಬಳಿಕ ಬಿಜೆಪಿಯಿಂದ ದೂರ ಉಳಿದಿದ್ದರು. ಈ ಹಿಂದೆ ಸಾಕಷ್ಟು ಬಾರಿ ನರೇಂದ್ರ ಮೋದಿ ಅವರನ್ನು  ಟೀಕಿಸಿದ್ದ ಶೌರಿ ಇದೀಗ ಮತ್ತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. "ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ  ಪರಿಶೀಲನೆ ಮತ್ತು ಸಮತೋಲನಗಳಿಲ್ಲದ ಏಕ ವ್ಯಕ್ತಿಯ ಅಧ್ಯಕ್ಷೀಯ ಸರ್ಕಾರವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಿರ್ದೇಶನದಡಿಯಲ್ಲಿ ಕೇಂದ್ರ ಸರ್ಕಾರದ ದೂರದೃಷ್ಟಿ ಭಾರತಕ್ಕೆ  ಮಾರಕವಾಗಬಲ್ಲದು ಎಂದು ಶೌರಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ 2 ವರ್ಷ ತುಂಬುತ್ತಿರುವ ಹಿನ್ನಲೆಯಲ್ಲಿ ಮಾತನಾಡಿದ ಶೌರಿ, ಮುಂದಿನ 3 ವರ್ಷಗಳ ಕಾಲ ಮೋದಿ ಸರ್ಕಾರದಿಂದ ನಾಗರಿಕ  ಸ್ವಾತಂತ್ರ್ಯ ನಿಗ್ರಹಕ್ಕಾಗಿ ಹೆಚ್ಚು ವ್ಯವಸ್ಥಿತ ಪ್ರಯತ್ನಗಳು ನಡೆಯಬಹುದು. ಇದು ಸರ್ಕಾರದ ನಡೆಯನ್ನು ಎದುರಿಸುವ ಅಥವಾ ಸರ್ಕಾರದ ಅನಾನುಕೂಲ ಧ್ವನಿಗಳನ್ನು ನಿಗ್ರಹಿಸುವ ಅಥವಾ  ಬೆದರಿಕೆ ತಂತ್ರದ ಮೂಲಕ ತಣ್ಣಗೆ ಮಾಡುವ ಪ್ರಕ್ರಿಯೆಗಳು ಹೆಚ್ಚಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಹಿಂದೆಯೂ ಸಾಕಷ್ಟು ಬಾರಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ್ದ ಅರುಣ್ ಶೌರಿ ಅವರು, ನರೇಂದ್ರ ಮೋದಿ ಅವರ ಜನರೊಂದಿಗಿನ ವರ್ತನೆ ಯೂಸ್ ಅಂಡ್ ಥ್ರೋ ನ್ಯಾಪ್ಕಿನ್  ಗಳಂತ ಜನರನ್ನು ಬಳಕೆ ಮಾಡಿಕೊಂಡು ಬಳಿಕ ಮೂಲೆಗುಂಪು ಮಾಡುವಂತಿದೆ. ಜನರ ಬಗ್ಗೆ ಅವರಿಗೆ ಯಾವುದೇ ರೀತಿಯ ಕನಿಕರ ಇಲ್ಲ ಎಂದು ಶೌರಿ ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.