ದೇಶ

ಅನಗತ್ಯ ಡಿಗ್ರಿಗಳನ್ನು ನೀಡುವ ವಿದ್ಯಾಲಯಗಳ ಮೋಸದಾಟಕ್ಕೆ ಬಲಿಯಾಗಬೇಡಿ: ಆರ್‌ಬಿಐ ಗವರ್ನರ್

ಶೈಕ್ಷಣಿಕ ಸಾಲ ಪಡೆದುಕೊಳ್ಳುವ ಬಗ್ಗೆ ಎಚ್ಚರಿಕೆ ವಹಿಸುವಂತೆ ಹೇಳಿರುವ ಆರ್‌ಬಿಐ ಗವರ್ನರ್ ರಘುರಾಮ್ ರಾಜನ್, ಅತೀ ಹೆಚ್ಚು ಶುಲ್ಕ ತೆತ್ತು...

ಅನಗತ್ಯ ಡಿಗ್ರಿಗಳನ್ನು ನೀಡುವ ವಿದ್ಯಾಲಯಗಳ ಮೋಸದಾಟಕ್ಕೆ ಬಲಿಯಾಗಬೇಡಿ: ಆರ್‌ಬಿಐ ಗವರ್ನರ್
ರಘುರಾಮ್ ರಾಜನ್
Published On :
ನೋಯ್ಡಾ: ಶೈಕ್ಷಣಿಕ ಸಾಲ ಪಡೆದುಕೊಳ್ಳುವ ಬಗ್ಗೆ ಎಚ್ಚರಿಕೆ ವಹಿಸುವಂತೆ ಹೇಳಿರುವ ಆರ್‌ಬಿಐ ಗವರ್ನರ್ ರಘುರಾಮ್ ರಾಜನ್, ಅತೀ ಹೆಚ್ಚು ಶುಲ್ಕ ತೆತ್ತು ಅನಗತ್ಯ ಡಿಗ್ರಿಗಳನ್ನು ನೀಡುವ ವಿದ್ಯಾಲಯಗಳ ಮೋಸದಾಟಕ್ಕೆ ಬಲಿಯಾಗಬೇಡಿ ಎಂದಿದ್ದಾರೆ. 
ಹೆಚ್ಚಿನ ಗುಣಮಟ್ಟದ ವಿಶ್ವವಿದ್ಯಾನಿಲಯಗಳಲ್ಲಿ ಶಿಕ್ಷಣ ಪಡೆಯುವುದಕ್ಕೆ ಹೆಚ್ಚಿನ ದುಡ್ಡು ಅತ್ಯಗತ್ಯ. ಹೀಗಿರುವಾಗ ಸೂಕ್ತ ವಿದ್ಯಾರ್ಥಿಗಳಿಗೆ ಇಂಥಾ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡಬೇಕು.
ಶೈಕ್ಷಣಿಕ ಸಾಲವನ್ನು ಪಡೆದುಕೊಂಡವರು ಅದನ್ನು ಪಾವತಿಸಲು ಸಾಧ್ಯವಾಗುವಂತೆ ಕೆಲಸ ಗಿಟ್ಟಿಸುವ ಮಟ್ಟಕ್ಕೆ ಬೆಳೆಯಬೇಕು ಎಂದು ರಘುರಾಮ್ ರಾಜನ್ ಹೇಳಿದ್ದಾರೆ.
ಶಿವ್ ನಾಡಾರ್ ವಿವಿಯಲ್ಲಿ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ರಾಜನ್, ವಿದ್ಯಾರ್ಥಿಗಳನ್ನು ಸಾಲದಲ್ಲಿ ಮುಳುಗಿಸಿ ಅವರಿಗೆ ಅನಗತ್ಯ ಡಿಗ್ರಿಗಳನ್ನು ಕೊಡಮಾಡುವ ವಿದ್ಯಾಲಯಗಳ ಬಗ್ಗೆ ನಾವು ಜಾಗ್ರತೆ ವಹಿಸಬೇಕೆಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.