ತಮಿಳ್ನಾಡು ರಾಜಕೀಯದಲ್ಲಿ ಹುಯಿಲೆಬ್ಬಿಸಿದ ರಜನಿಕಾಂತ್‌ರ ಕಬಾಲಿ 'ವ್ಯಂಗ್ಯ' ವೀಡಿಯೋ
ಅಂತರ್ಜಾಲದಲ್ಲಿ ಈಗಾಗಲೇ ಹಿಟ್ ಆಗಿರುವ ಸೂಪರ್ ಸ್ಟಾರ್ ರಜನೀಕಾಂತ್ ಅವರ ನೂತನ ಚಿತ್ರ ಕಬಾಲಿ ಟೀಸರ್ ರಾಜಕೀಯ ರಂಗದಲ್ಲೂ...

Published On :
ಚೆನ್ನೈ: ಅಂತರ್ಜಾಲದಲ್ಲಿ ಈಗಾಗಲೇ ಹಿಟ್ ಆಗಿರುವ ಸೂಪರ್ ಸ್ಟಾರ್ ರಜನೀಕಾಂತ್ ಅವರ ನೂತನ ಚಿತ್ರ ಕಬಾಲಿ ಟೀಸರ್ ರಾಜಕೀಯ ರಂಗದಲ್ಲೂ ಸುದ್ದಿಯಾಗುತ್ತಿದೆ.
ಟೀಸರ್ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಯೂಟ್ಯೂಬ್‌ನಲ್ಲಿ ಮಿಲಿಯನ್ ಹಿಟ್ ಗಳಿಸಿರುವ ಕಬಾಲಿ ಟೀಸರ್‌ನ 'ವ್ಯಂಗ್ಯ' ವೀಡಿಯೋವೊಂದು ಕೆಲವು ದಿನಗಳ ಹಿಂದೆ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು.
ಈ ವ್ಯಂಗ್ಯ ವೀಡಿಯೋದಲ್ಲಿ ತಮಿಳ್ನಾಡು ಮುಖ್ಯಮಂತ್ರಿ ಜೆ ಜಯಲಲಿತಾ ಅವರ ನೇತೃತ್ವದ ಎಐಎಡಿಎಂಕೆಯನ್ನು ಟಾರ್ಗೆಟ್ ಮಾಡಲಾಗಿತ್ತು.
ಈ ವ್ಯಂಗ್ಯ ವೀಡಿಯೋದಲ್ಲಿ ಎಐಎಡಿಎಂಕೆಯನ್ನು ವಿಲನ್ ಪಾತ್ರದಲ್ಲಿ ತೋರಿಸಿ, ಯಾರು ಡಿಎಂಕೆ? ಎಂಬ ಪ್ರಶ್ನೆ ಕೇಳಲಾಗುತ್ತದೆ. ಈ ವೀಡಿಯೋದಲ್ಲಿ ರಜನಿಕಾಂತ್ ಜಯಲಲಿತಾ ಸರ್ಕಾರ ಚೆನ್ನೈಪ್ರವಾಹದ ವೇಳೆ ತೆಗೆದುಕೊಂಡ ಕ್ರಮಗಳನ್ನು ಟೀಕಿಸುವ ಡೈಲಾಗ್‌ಗಳಿವೆ. ಇಷ್ಟೇ ಅಲ್ಲದೆ ರಜನಿಕಾಂತ್ ಡಿಎಂಕೆ ನಾಯಕರಾದ ಕರುಣಾನಿಧಿ ಮತ್ತು ಎಂಕೆ ಸ್ಟಾಲಿನ್ ಅವರೊಂದಿಗಿರುವ ಹಳೇ ಚಿತ್ರವನ್ನೂ ತೋರಿಸಲಾಗಿದೆ.
ಈ ವ್ಯಂಗ್ಯ ವೀಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ರಾಜಕೀಯ ಬಿಸಿಯಿಂದಾಗಿ ವಿಡಿಯೋವನ್ನು ಬ್ಲಾಕ್ ಮಾಡಲಾಯಿತು. ಆದಾಗ್ಯೂ, ಈ ಬಗ್ಗೆ ಡಿಎಂಕೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


