ಆರ್ಎಸ್ಎಸ್ ಹಿರಿಯ ನಾಯಕ ಬಲರಾಜ್ ಮಧೋಕ್ ವಿಧಿವಶ
ಅನಾರೋಗ್ಯದಿಂದ ಬಳಲುತ್ತಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್)ದ ಹಿರಿಯ ನಾಯಕ ಮತ್ತು ಭಾರತೀಯ ಜನ ಸಂಘ (ಬಿಜೆಎಸ್)...

ನವದೆಹಲಿ: ಅನಾರೋಗ್ಯದಿಂದ ಬಳಲುತ್ತಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್)ದ ಹಿರಿಯ ನಾಯಕ ಮತ್ತು ಭಾರತೀಯ ಜನ ಸಂಘ (ಬಿಜೆಎಸ್)ದ ಮಾಜಿ ಅಧ್ಯಕ್ಷ ಬಲರಾಜ್ ಮಧೋಕ್ ನಿಧನರಾಗಿದ್ದಾರೆ.
96 ವರ್ಷದ ಬಲರಾಜ್ ಮಧೋಕ್ ಅವರು ಬೆಳಗ್ಗೆ 9 ಗಂಟೆಗೆ ದೆಹಲಿಯ ನ್ಯೂ ರಾಜೇಂದ್ರ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಆರ್‌ಎಸ್‌ಎಸ್ ವಕ್ತಾರರು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಸ್ಕರ್ದು ಪ್ರಾಂತ್ರ್ಯದಲ್ಲಿ ಬಲರಾಜ್ ಅವರು 1920 ಫೆಬ್ರವರಿ 25 ರಂದು ಜನಿಸಿದ್ದರು. ಆರ್ಎಸ್ಎಸ್ನ ಸಕ್ರಿಯ ಕಾರ್ಯಕರ್ತರಾಗಿದ್ದ ಬಲರಾಜ್ ಅವರು 1951ರಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸಂಘಟನೆಯನ್ನು ಪ್ರಾರಂಭಿಸಿದ್ದರು.
ರಾಷ್ಟ್ರ ಮತ್ತು ಸಮಾಜ ಉದ್ಧಾರಕ್ಕೆ ಶ್ರಮಿಸಿದ ಧೀಮಂತ ವ್ಯಕ್ತಿ: ಪ್ರಧಾನಿ ಮೋದಿ
ಆರ್ಎಸ್ಎಸ್ ಹಿರಿಯ ನಾಯಕ ಬಾಲರಾಜ್ ಮುಧೋಕ್ ಉತ್ತಮ ಆದರ್ಶವಾದಿ. ರಾಷ್ಟ್ರ ಮತ್ತು ಸಮಾಜ ಉದ್ಧಾರಕ್ಕಾಗಿ ಶ್ರಮಿಸಿದ ಧೀಮಂತ ವ್ಯಕ್ತಿ. ಸೈದ್ಧಾಂತಿಕ ಬದ್ಥತೆಯ ಬಲವಾದ ಚಿಂತನೆಯನ್ನು ಹೊಂದಿದ್ದರು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


