ದೇಶ

ಕೇಳದೆ ನೀರು ಕುಡಿದಿದ್ದಕ್ಕೆ ಯುವಕನಿಗೆ ಅಮಾನವೀಯ ಶಿಕ್ಷೆ: ಎಎಸ್ಐ, ಪೇದೆ ಅಮಾನತು

ಕೇಳದೆ ನೀರು ಕುಡಿದಿದ್ದಾನೆಂಬ ಕಾರಣಕ್ಕೆ ಯುವಕನೊಬ್ಬನಿಗೆ ಚಲಿಸುವ ರೈಲಿನಲ್ಲಿ ಅಮಾನವೀಯವಾಗಿ ಶಿಕ್ಷೆ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಇಬ್ಬರು ಎಎಸ್ಐಗಳು...

ಕೇಳದೆ ನೀರು ಕುಡಿದಿದ್ದಕ್ಕೆ ಯುವಕನಿಗೆ ಅಮಾನವೀಯ ಶಿಕ್ಷೆ: ಎಎಸ್ಐ, ಪೇದೆ ಅಮಾನತು
ಕೇಳದೆ ನೀರು ಕುಡಿದಿದ್ದಕ್ಕೆ ಯುವಕನಿಗೆ ಅಮಾನವೀಯ ಶಿಕ್ಷೆ
Published On :

ಭೋಪಾಲ್: ಕೇಳದೆ ನೀರು ಕುಡಿದಿದ್ದಾನೆಂಬ ಕಾರಣಕ್ಕೆ ಯುವಕನೊಬ್ಬನಿಗೆ ಚಲಿಸುವ ರೈಲಿನಲ್ಲಿ ಅಮಾನವೀಯವಾಗಿ ಶಿಕ್ಷೆ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಇಬ್ಬರು ಎಎಸ್ಐಗಳು ಹಾಗೂ ಪೇದೆಯನ್ನು ಅಧಿಕಾರಿಗಳು ಅಮಾನತು ಮಾಡಿರುವುದಾಗಿ ಗುರುವಾರ ತಿಳಿದುಬಂದಿದೆ.
ಸರ್ಕಾರಿ ರೈಲ್ವೆ ಸಹಾಯಕ ಉಪ ನಿರೀಕ್ಷಕರಾಗಿ ಕೆಲಸ ಮಾಡುತ್ತಿದ್ದ ಕೆ.ಎಸ್. ಜಾಧೋನ್, ರೈಲ್ವೆ ರಕ್ಷಣಾ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅನಿಲ್ ರಾಯ್ ಹಾಗೂ ಪೇದೆ ಮಧುಸೂದನ್ ಎಂಬುವವರನ್ನು ಅಧಿಕಾರಿಗಳು ಅಮಾನತು ಮಾಡಿದ್ದಾರೆಂದು ಹೇಳಲಾಗುತ್ತಿದೆ.

ಮಾರ್ಚ್ 25 ರಂದು ಈ ಅಮಾನವೀಯ ಘಟನೆ ನಡೆದಿತ್ತು. ತಮ್ಮ ಅನುಮತಿ ಇಲ್ಲದೆ ನೀರಿನ ಬಾಟಲ್ ತೆಗೆದುಕೊಂಡು ನೀರು ಕುಡಿದಿದ್ದ ಎಂಬ ಕ್ಷುಲ್ಲಕ ಕಾರಣಕ್ಕೆ ಯುವಕರ ಗುಂಪೊಂದು ಸುಮಿತ್ ಎಂಬ ಯುವಕನನ್ನು ಚಲಿಸುತ್ತಿದ್ದ ರೈಲಿನ ಕಿಟಕಿಗೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದ್ದರು.

ರೈಲಿನ ಕಿಟಕಿಗೆ ಸುಮತ್ ನನ್ನು ಕಟ್ಟಿದ್ದರೂ ಕೂಡ ಇದು ಚಾಲಕನ ಗಮನಕ್ಕೆ ಬಂದಿರಲಿಲ್ಲ. ರೈಲು ತಡೆ ರಹಿತವಾಗಿ ಸುಮಾರು ನಾಲ್ಕು ಗಂಟೆಗಳ ಕಾಲ ಓಡಿತ್ತು. ನಂತರ ರೈಲು ಇಟಾರ್ಸಿ ನಿಲ್ದಾಣಕ್ಕೆ ಬಂದು ನಿಂತಾಗ ರೈಲು ಹತ್ತಲು ನಿಂತಿದ್ದ ಪ್ರಯಾಣಿಕರು ಸುಮಿತ್ ನನ್ನು ನೋಡಿ ಗಾಬರಿಗೊಂಡು ಆತನನ್ನು ರಕ್ಷಿಸಿದ್ದರು, ಇಷ್ಟಾದರೂ ಸುಮಿತ್ ಗೆ ಶಿಕ್ಷೆ ನೀಡಿದ್ದ ಗುಂಪು ಮತ್ತೆ ಸುಮಿತ್ ನನ್ನು ಹೊಡೆಯಲು ಆರಂಭಿಸಿದ್ದರು. ನಂತರ ಸ್ಥಳೀಯರೇ ಆತನನ್ನು ರಕ್ಷಿಸಿದ್ದರು.

ಪ್ರಕರಣ ಸಂಬಂಧ ರೈಲ್ವೇ ರಕ್ಷಣಾ ದಳ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಪ್ರಕಾರ ಸೆಕ್ಷನ್ 307, 153 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಂಡಿತ್ತು. ಇದೀಗ ಪ್ರಕರಣ ಸಂಬಂಧ ಕ್ರಮ ಕೈಗೊಂಡಿರುವ ಅಧಿಕಾರಿಗಳು  ಕರ್ತವ್ಯ ನಿರತ ಇಬ್ಬರು ಎಎಸ್ಐ ಗಳು ಹಾಗೂ ಓರ್ವ ಪೇದೆಯನ್ನು ಅಮಾನತು ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.