ಜಲ್ಲಿಕಟ್ಟು ಕ್ರೀಡೆಗೆ ವಿರೋಧ: ಪ್ರಾಣಿ ದಯಾ ಮಂಡಳಿಗೆ ಕೇಂದ್ರ ಸರ್ಕಾರ ನೊಟೀಸು
ಪೊಂಗಲ್ ಸಂದರ್ಭದಲ್ಲಿ ಜಲ್ಲಿಕಟ್ಟು ಪಂದ್ಯ ಆಡುವುದಕ್ಕೆ ಅವಕಾಶ ನೀಡಿ ಜನವರಿ 7ರಂದು ನೀಡಿದ್ದ ಆದೇಶಕ್ಕೆ...

ನವದೆಹಲಿ: ಪೊಂಗಲ್ ಸಂದರ್ಭದಲ್ಲಿ ಜಲ್ಲಿಕಟ್ಟು ಪಂದ್ಯ ಆಡುವುದಕ್ಕೆ ಅವಕಾಶ ನೀಡಿ ಜನವರಿ 7ರಂದು ನೀಡಿದ್ದ ಆದೇಶಕ್ಕೆ ವಿರುದ್ಧವಾಗಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ ಭಾರತೀಯ ಪ್ರಾಣಿ ದಯಾ ಮಂಡಳಿಗೆ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಷೋಕಾಸು ನೊಟೀಸು ಕಳುಹಿಸಿದೆ.
ಜಲ್ಲಿಕಟ್ಟು ಕ್ರೀಡೆಗೆ ನಿಷೇಧ ಹೇರಿ ಆದೇಶ ನೀಡಿದ ಮೂರು ತಿಂಗಳ ನಂತರ ಪ್ರಾಣಿ ದಯಾ ಮಂಡಳಿ ಅಧ್ಯಕ್ಷ ಮೇಜರ್ ಜನರಲ್(ನಿವೃತ್ತ) ಆರ್. ಎಂ. ಅವರಿಗೆ ಮೊನ್ನೆ ಸೋಮವಾರ ಷೋಕಾಸು ನೊಟೀಸನ್ನು ಕೇಂದ್ರ ಸಚಿವಾಲಯ ಕಳುಹಿಸಿದೆ. ಸಚಿವಾಲಯದಿಂದ ಮೊದಲೇ ಪೂರ್ವಾನುಮತಿ ತೆಗೆದುಕೊಳ್ಳದೆ ಯಾವುದೇ ಕೋರ್ಟ್ ಗೆ ಅರ್ಜಿ ಸಲ್ಲಿಸುವ ಅಧಿಕಾರ ಪ್ರಾಣಿ ದಯಾ ಮಂಡಳಿಗೆ ಇಲ್ಲ ಎಂದು ಸಚಿವಾಲಯ ಹೇಳಿದೆ.
ಜಲ್ಲಿಕಟ್ಟು ಕ್ರೀಡೆಗೆ ಸಂಬಂಧಪಟ್ಟಂತೆ ಹೊರಡಿಸಲಾದ ಅಧಿಸೂಚನೆಗೆ ವಿರುದ್ಧವಾಗಿ ಭಾರತೀಯ ಪ್ರಾಣಿ ದಯಾ ಮಂಡಳಿ ಸುಪ್ರೀಂ ಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದೆ. ಆದರೆ ಕೇಂದ್ರ ಪರಿಸರ ಸಚಿವಾಲಯದ ಪೂರ್ವಾನುಮತಿ ಇಲ್ಲದೆ ಯಾವುದೇ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸುವಂತಿಲ್ಲ. ಹಾಗಾಗಿ ಮಂಡಳಿ ವಿರುದ್ಧ ಯಾಕೆ ಕ್ರಮ ಕೈಗೊಳ್ಳಬಾರದು ಎಂದು ಸಚಿವಾಲಯ ನ್ಯಾಯಾಲಯವನ್ನು ಕೇಳಿದೆ.
ಆದರೆ ಸಚಿವಾಲಯದ ಷೋಕಾಸು ನೊಟೀಸ್ ಗೆ ಪ್ರತಿಕ್ರಿಯೆ ನೀಡಿರುವ ಮಂಡಳಿ, ರಾಜಕೀಯ ಪ್ರೇರಿತ ಎಂದು ಆರೋಪಿಸಿದೆ. '' ಇದರ ಹಿಂದೆ ರಾಜಕೀಯ ಉದ್ದೇಶವಿದೆ. ತಮಿಳುನಾಡಿನಲ್ಲಿ ಮುಂದಿನ ತಿಂಗಳು ಚುನಾವಣೆ ನಡೆಯಲಿರುವುದರಿಂದ ಬಿಜೆಪಿ ಈ ರೀತಿ ನೊಟೀಸು ಕಳುಹಿಸಿದೆ. ಎಂದು ಪ್ರಾಣಿ ದಯಾ ಮಂಡಳಿಗೆ ಸದಸ್ಯರಲ್ಲೊಬ್ಬರಾದ ಎನ್.ಜಿ.ಜಯಸಿಂಹ ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


