ದೇಶ

ಪಾಕ್ ತನಿಖಾ ತಂಡದಲ್ಲಿ ಐಎಸ್ಐ ಸದಸ್ಯ ಏಕೆ?: ಕಾಂಗ್ರೆಸ್

ಪಠಾಣ್ ಕೋಟ್ ದಾಳಿ ಪ್ರಕರಣದ ತನಿಖೆಗಾಗಿ ಭಾರತಕ್ಕೆ ಆಗಮಿಸಿರುವ ಪಾಕಿಸ್ತಾನ ಜಂಟಿ ತನಿಖಾ ಸಮಿತಿಯಲ್ಲಿ ಐಎಸ್ಐ...

ಪಾಕ್ ತನಿಖಾ ತಂಡದಲ್ಲಿ ಐಎಸ್ಐ ಸದಸ್ಯ ಏಕೆ?: ಕಾಂಗ್ರೆಸ್
ರಂದೀಪ್ ಸುರ್ಜವಾಲಾ
Published On :
ನವದೆಹಲಿ: ಪಠಾಣ್ ಕೋಟ್ ದಾಳಿ ಪ್ರಕರಣದ ತನಿಖೆಗಾಗಿ ಭಾರತಕ್ಕೆ ಆಗಮಿಸಿರುವ ಪಾಕಿಸ್ತಾನ ಜಂಟಿ ತನಿಖಾ ಸಮಿತಿಯಲ್ಲಿ ಐಎಸ್ಐ ಅಧಿಕಾರಿ ಇರುವುದನ್ನು ಸೋಮವಾರ ಕಾಂಗ್ರೆಸ್ ಪ್ರಶ್ಮಿಸಿದೆ.
ಪಾಕಿಸ್ತಾನ ತನಿಖೆಗಾಗಿ ಭಾರತಕ್ಕೆ ಆಗಮಿಸುವ ಬಗ್ಗೆ ಯಾವುದೇ ಅಧಿಕೃತ ಪತ್ರ ನೀಡಿಲ್ಲ. ಹೀಗಾಗಿ ಅದು ಕಾನೂನು ಕ್ರಮ ಕೈಗೊಳ್ಳುತ್ತೆ ಅಂತ ಏನು ಗ್ಯಾರಂಟಿ? ಅವರು ಯಾವ ರೀತಿ ತನಿಖೆ ನಡೆಸುತ್ತಾರೆ ಎಂಬುದು ಅಚ್ಚರಿ ಮೂಡಿಸಿದೆ ಎಂದು ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜವಾಲಾ ಅವರು ಹೇಳಿದ್ದಾರೆ.
ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆ ಕೈವಾಡ ಇರುವ ಉಗ್ರ ದಾಳಿಯ ಬಗ್ಗೆ ತನಿಖೆ ನಡೆಸುತ್ತಿರುವ ಪಾಕ್ ಜಂಟಿ ತನಿಖಾ ಸಮಿತಿಯಲ್ಲಿ ಉಗ್ರರಿಗೆ ಬೆಂಬಲ ನೀಡುತ್ತಿರುವ ಐಎಸ್ಐ ಇರುವುದು ಏಕೆ? ಎಂದು ಪ್ರಶ್ನಿಸಿರುವ ಸುರ್ಜವಾಲಾ, ಐಎಸ್ಐ ಅಧಿಕಾರ ಒಳಗೊಂಡ ಪಾಕ್ ತನಿಖಾ ತಂಡಕ್ಕೆ ಭಾರತ ಸರ್ಕಾರ ಕೆಂಪು ಹಾಸಿನ ಸ್ವಾಗತ ನೀಡಿದೆ ಎಂದಿದ್ದಾರೆ.
ಜ.2 ರಂದು ಪಂಜಾಬ್ ನ ಪಠಾಣ್ ಕೋಟ್ ವಾಯು ನೆಲೆಯಲ್ಲಿ  ದಾಳಿ ನಡೆಸಿದ್ದ ಭಯೋತ್ಪಾದಕರಿಗೂ ಪಾಕಿಸ್ತಾನದ ಜೈಶ್-ಇ- ಮೊಹಮ್ಮದ್ ಉಗ್ರ ಸಂಘಟನೆಗೂ ನಂಟಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಸರ್ಕಾರ ರಚನೆ ಮಾಡಿರುವ ಜಂಟಿ ತನಿಖಾ ತಂಡ ಭಾರತಕ್ಕೆ ಆಗಮಿಸಿ ತನಿಖೆ ನಡೆಸುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.