ವಿಶ್ವವಿದ್ಯಾನಿಲಯಗಳ ಮೇಲೆ ಆಕ್ರಮಣ ನಡೆಸಲಾಗುತ್ತಿದೆ: ಕನ್ಹಯ್ಯ ಕುಮಾರ್
ವಿಶ್ವವಿದ್ಯಾನಿಲಯಗಳನ್ನು ಗಂಭೀರ ಚಿಂತನೆಗಳನ್ನು ಉತ್ತೇಜಿಸುವ ಕೇಂದ್ರಗಳೆಂದು ಹೇಳಿರುವ ಜೆಎನ್ ಯು ವಿವಿ ವಿದ್ಯಾರ್ಥಿ ಮುಖಂಡ ಕನ್ಹಯ್ಯ ಕುಮಾರ್...

ಹೈದರಾಬಾದ್: ವಿಶ್ವವಿದ್ಯಾನಿಲಯಗಳನ್ನು ಗಂಭೀರ ಚಿಂತನೆಗಳನ್ನು ಉತ್ತೇಜಿಸುವ ಕೇಂದ್ರಗಳೆಂದು ಹೇಳಿರುವ ಜೆಎನ್ ಯು ವಿವಿ ವಿದ್ಯಾರ್ಥಿ ಮುಖಂಡ ಕನ್ಹಯ್ಯ ಕುಮಾರ್, ವಿಶ್ವವಿದ್ಯಾನಿಲಯಗಳು ಆಕ್ರಮಣಕ್ಕೆ ಗುರಿಯಾಗುತ್ತಿವೆ ಎಂದು ಆರೋಪಿಸಿದ್ದಾನೆ.
ಹೈದರಾಬಾದ್ ಗೆ ಭೇಟಿ ನೀಡಿ ಮಾತನಾಡಿರುವ ಕನ್ಹಯ್ಯ ಕುಮಾರ್" ನಾವು ರಾಜಕೀಯ ಮಾಡುತ್ತಿದ್ದೇವೆಂಬ ಆರೋಪ ಕೇಳಿಬಂದಿದೆ. ರಾಜಕೀಯ ಮಾಡುತ್ತಿರುವುದು ನಾವೋ ಅಥವಾ ಸರ್ಕಾರವೋ ಎಂದು ಕನ್ಹಯ್ಯ ಕುಮಾರ್ ಪ್ರಶ್ನಿಸಿದ್ದು, ವಿಶ್ವವಿದ್ಯಾನಿಲಯಗಳ ಸ್ವಾಯತ್ತತೆಯನ್ನು ನಾಶ ಮಾಡಲು ಸರ್ಕಾರ ಯೋಜನೆ ರೂಪಿಸಿದೆ ಎಂದು ಹೇಳಿದ್ದಾನೆ.
ಬುದ್ಧಿಜೀವಿಗಳ ಹಾಗೂ ವಿಶ್ವವಿದ್ಯಾನಿಲಯಗಳ ಕೆಲಸ ಗಂಭೀರ ಚಿಂತನೆಯನ್ನು ಉತ್ತೇಜಿಸುವುದು, ಹೈದರಾಬಾದ್ ವಿಶ್ವವಿದ್ಯಾನಿಲಯ ಹಾಗೂ ಜೆಎನ್ ಯು ನಡುವೆ ಸಾಮ್ಯತೆ ಇದೆ ಎರಡೂ ವಿವಿಗಳನ್ನು ದಾಳಿಗೆ ಗುರಿಮಾಡಲಾಗುತ್ತಿದೆ ಎಂದು ಕನ್ಹಯ್ಯ ಕುಮಾರ್ ಆರೋಪಿಸಿದ್ದಾನೆ. ಭಾಷಣದ ವೇಳೆ ವ್ಯಕ್ತಿಯೊಬ್ಬ ಕನ್ಹಯ್ಯ ಕುಮಾರ್ ಮೇಲೆ ಶೂ ಎಸೆದಿರುವ ಘಟನೆಯು ವರದಿಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


