ಗೋವಾದಲ್ಲಿ ಬ್ರಿಕ್ಸ್ 8 ನೇ ಶೃಂಗಸಭೆ: ಸುಷ್ಮಾ ಸ್ವರಾಜ್
ಬ್ರಿಕ್ಸ್ ರಾಷ್ಟ್ರಗಳ 8 ನೇ ಶೃಂಗಸಭೆ ಅಕ್ಟೋಬರ್ 15 -16 ಕ್ಕೆ ನಿಗದಿಯಾಗಿದ್ದು ಗೋವಾದಲ್ಲಿ ನಡೆಯಲಿದೆ ಎಂದು ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.

Published On :
ನವದೆಹಲಿ: ಬ್ರಿಕ್ಸ್ ರಾಷ್ಟ್ರಗಳ 8 ನೇ ಶೃಂಗಸಭೆ ಅಕ್ಟೋಬರ್ 15 -16 ಕ್ಕೆ ನಿಗದಿಯಾಗಿದ್ದು ಗೋವಾದಲ್ಲಿ ನಡೆಯಲಿದೆ ಎಂದು ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ಬ್ರಿಕ್ಸ್ ಗೆ ಭಾರತದ ಅಧ್ಯಕ್ಷತೆಯ ಲೋಗೋ ಹಾಗೂ ವೆಬ್ ಸೈಟ್ ನ್ನು ಲೋಕಾರ್ಪಣೆಗೊಳಿಸಿದ ವೇಳೆ ಸುಷ್ಮಾ ಸ್ವರಾಜ್ ಬ್ರಿಕ್ಸ್ ರಾಷ್ಟ್ರಗಳ 8 ನೇ ಶೃಂಗಸಭೆ ಬಗ್ಗೆ ಮಾಹಿತಿ ನೀಡಿದ್ದಾರೆ.
2015 ರ ಫೆಬ್ರವರಿಯಲ್ಲಿ ಭಾರತ ಬ್ರಿಕ್ಸ್ ಮೈತ್ರಿಕೂಟದ ಅಧ್ಯಕ್ಷತೆ ವಹಿಸಿಕೊಂಡಿತ್ತು. ಬ್ರಿಕ್ಸ್(ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ) ಕಳೆದ ವರ್ಷ ರಾಷ್ಟ್ರಗಳ 7 ನೇ ಶೃಂಗಸಭೆ ರಷ್ಯಾದಲ್ಲಿ ನಡೆದಿತ್ತು. ಈ ಶೃಂಗಸಭೆಯಲ್ಲಿ ಇಂಧನ ಕ್ಷೇತ್ರ, ಹಣಕಾಸು ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ಯೋಜನೆಗಳು, ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಬ್ರಿಕ್ಸ್ ರಾಷ್ಟ್ರಗಳು ನಿರ್ಣಯ ಕೈಗೊಂಡಿದ್ದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


