ಜಮ್ಮುವಿನಲ್ಲಿ ಭಾರೀ ಹಿಮಪಾತ: ಓರ್ವ ಯೋಧ ಕಣ್ಮರೆ
ಜಮ್ಮ ಕಾಶ್ಮೀರದ ಕಾರ್ಗಿಲ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಮತ್ತೆ ಭಾರೀ ಹಿಮಪಾತ ಸಂಭವಿಸಿದ್ದು, ಹಿಮಪಾತದಲ್ಲಿ ಓರ್ವ ಯೋಧ ಕಣ್ಮರೆಯಾಗಿರುವುದಾಗಿ ವರದಿಗಳು ತಿಳಿಸಿವೆ...

ನವದೆಹಲಿ: ಜಮ್ಮ ಕಾಶ್ಮೀರದ ಕಾರ್ಗಿಲ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಮತ್ತೆ ಭಾರೀ ಹಿಮಪಾತ ಸಂಭವಿಸಿದ್ದು, ಹಿಮಪಾತದಲ್ಲಿ ಓರ್ವ ಯೋಧ ಕಣ್ಮರೆಯಾಗಿರುವುದಾಗಿ ವರದಿಗಳು ತಿಳಿಸಿವೆ.
ಕೆಲವು ದಿನಗಳ ಹಿಂದಷ್ಟೇ ಸಿಯಾಚಿನ್ ಗಡಿಯಲ್ಲಿ ಭೀಕರ ಹಿಮಪಾತ ಸಂಭವಿಸಿತ್ತು. ಹಿಮಪಾತದಲ್ಲಿ ಕರ್ನಾಟಕ ಮೂಲದ ಹನುಮಂತಪ್ಪ ಸೇರಿ 10 ಮಂದಿ ಹುತಾತ್ಮರಾಗಿದ್ದರು.
ಇದೀಗ ಮತ್ತೆ ಇಂತಹದ್ದೇ ಘಟನೆ ಸಂಭವಿಸಿದ್ದು, ಹಿಮಪಾತದಲ್ಲಿ ಇಬ್ಬರು ಯೋಧರು ಕಣ್ಮರೆಯಾಗಿದ್ದರು. ಕಾರ್ಯಾಚರಣೆ ನಡೆಸಿದ್ದ ಸಿಬ್ಬಂದಿಗಳು ಓರ್ವ ಯೋಧನನ್ನು ಸಂರಕ್ಷಣೆ ಮಾಡಿದ್ದಾರೆ. ಇದೀಗ ಮತ್ತೊಬ್ಬ ಯೋಧನಿಗಾಗಿ ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆಂದು ತಿಳಿದುಬಂದಿದೆ.
ಮಾರ್ಚ್ 17 ರಂದು ಕಾಶ್ಮೀರದ ಕಾರ್ಗಿಲ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ 17,500 ಅಡಿ ಎತ್ತರದಲ್ಲಿ ಇಬ್ಬರು ಯೋಧರು ಗಡಿ ಕಾಯುತ್ತಿದ್ದರು ಈ ವೇಳೆ ಹಿಮಪಾತ ಸಂಭವಿಸಿದೆ. ಹಿಮಪಾತದಲ್ಲಿ ಇಬ್ಬರೂ ಯೋಧರು ಕಣ್ಮರೆಯಾಗಿದ್ದರು. ಇದೀಗ ಓರ್ವ ಯೋಧನನ್ನು ಸಂರಕ್ಷಣೆ ಮಾಡಲಾಗಿದ್ದು, ಮತ್ತೊಬ್ಬ ಯೋಧನಿಗಾಗಿ ಕಾರ್ಯಾಚರಣೆಯನ್ನು ಮುಂದುವರೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


