ಅರ್ಥ್ ಅವರ್: ತಾಪಮಾನ ಬದಲಾವಣೆಗೆ ರಾತ್ರಿ 8.30ಕ್ಕೆ ವಿದ್ಯುತ್ ದೀಪ ಆರಿಸಿ
ವಿಶ್ವ ವನ್ಯಜೀವಿ ನಿಧಿ (ಡಬ್ಲ್ಯೂಡಬ್ಲ್ಯೂಎಫ್) ಆಯೋಜಿಸುವ 'ಅರ್ಥ್ ಅವರ್'ನಲ್ಲಿ ನಾಗರಿಕರು ಪಾಲ್ಗೊಂಡು ಇಂದು ರಾತ್ರಿ ವಿಶ್ವಾದ್ಯಂತ ಸ್ಥಳೀಯ ಕಾಲಮಾನ 8.30ರಿಂದ...

ನವದೆಹಲಿ: ವಿಶ್ವ ವನ್ಯಜೀವಿ ನಿಧಿ (ಡಬ್ಲ್ಯೂಡಬ್ಲ್ಯೂಎಫ್) ಆಯೋಜಿಸುವ 'ಅರ್ಥ್ ಅವರ್'ನಲ್ಲಿ ನಾಗರಿಕರು ಪಾಲ್ಗೊಂಡು ಇಂದು ರಾತ್ರಿ ವಿಶ್ವಾದ್ಯಂತ ಸ್ಥಳೀಯ ಕಾಲಮಾನ 8.30ರಿಂದ 9.30ರವರೆಗೆ ಸಾರ್ವಜನಿಕರು ಸ್ವ ಇಚ್ಛೆಯಿಂದ ವಿದ್ಯುತ್ ದೀಪ ಆರಿಸಬೇಕಿದೆ.
ಅರ್ಥ್ ಅವರ್ಪರಿಸರ ಸಂರಕ್ಷಣಾ ಕಾರ್ಯಕ್ರಮ ಎನಿಸಿಕೊಂಡಿದೆ. ಬಹಳಷ್ಟು ಜನ ತಿಳಿದುಕೊಂಡಿರುವ ಹಾಗೆ ವಿದ್ಯುತ್ ದೀಪ ಸ್ವಿಚ್ಆಫ್ ಮಾಡುವ ಮೂಲಕ ಅರ್ಥ್ ಅವರ್ ಆಚರಣೆ ಮಾಡುವುದು ವಿದ್ಯುತ್ ಉಳಿತಾಯ ಮಾಡುವುದಕ್ಕಲ್ಲ. ವಿದ್ಯುತ್ ದೀಪ ಉರಿಸುವುದರಿಂದ ಪರಿಸರದಲ್ಲಿ ಇಂಗಾಲದ ಪ್ರಮಾಣ ಹೆಚ್ಚಳವಾಗುತ್ತದೆ. ಈ ಮೂಲಕ ಪರೋಕ್ಷವಾಗಿ ಭೂಮಿಯ ತಾಪಮಾನ ಹೆಚ್ಚಳವಾಗುತ್ತದೆ. ಇದನ್ನು ತಡೆಗಟ್ಟಿ ಭೂಮಿಯನ್ನು ಸಂರಕ್ಷಿಸಬೇಕು ಎಂಬ ಸಂದೇಶವೇ ಅರ್ಥ್ ಅವರ್ ಆಚರಣೆಯಲ್ಲಿ ಅಡಗಿದೆ.
ಕಳೆದ ಬಾರಿ ಅರ್ಥ್ ಅವರ್ ಆಚರಣೆಯಲ್ಲಿ 172 ರಾಷ್ಟ್ರಗಳ 10.4 ದಶಲಕ್ಷ ಜನ ಭಾಗಿಯಾಗಿದ್ದರು. ಪ್ಯಾರಿಸ್ನ ಐಫೆಲ್ ಟವರ್, ದುಬೈನ ಬುರ್ಜ್ ಖಲೀಫಾ, ಹಾಂಕಾಂಗ್ನ ಸ್ಕೈಲೈನ್ ಸೇರಿ ಜಗತ್ತಿನ ಐತಿಹಾಸಿಕ ಕಟ್ಟಡಗಳಲ್ಲಿ ವಿದ್ಯುತ್ ದೀಪಗಳನ್ನು ಆರಿಸಲಾಗಿತ್ತು. ಈ ಬಾರಿ 174 ರಾಷ್ಟ್ರಗಳ ಜನ ಅರ್ಥ್ ಅವರ್ನಲ್ಲಿ ಭಾಗಿಯಾಗಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


