ತಿರುಪುರ್ ದೇವಾಲಯ ಪ್ರವೇಶಕ್ಕೆ ದಲಿತರಿಗೆ ನಿಷೇಧ
ತಮಿಳುನಾಡಿನ ತಿರುಪುರ್ ಜಿಲ್ಲೆಯಲ್ಲಿರುವ ಉತ್ತಮಪಾಳ್ಯಯಂ ಮಾರಿಯಮ್ಮನ ದೇವಸ್ಥಾನ ಪ್ರವೇಶ...

Published On :
ತಿರುಪುರ್: ತಮಿಳುನಾಡಿನ ತಿರುಪುರ್ ಜಿಲ್ಲೆಯಲ್ಲಿರುವ ಉತ್ತಮಪಾಳ್ಯಯಂ ಮಾರಿಯಮ್ಮನ ದೇವಸ್ಥಾನ ಪ್ರವೇಶಕ್ಕೆ ದಲಿತರಿಗೆ ನಿಷೇಧವೇರಲಾಗಿದೆ.
ಅಷ್ಟೇ ಅಲ್ಲದೇ, 1964ರಲ್ಲಿ ನಿರ್ಮಾಣಗೊಂಡಿದ್ದ ಮಾರಿಯಮ್ಮನ ದೇವಸ್ಥಾನಕ್ಕೆ 2010ರಲ್ಲಿ ದಲಿತನೊಬ್ಬ ಪ್ರವೇಶಿದ್ದರಿಂದ ಆ ದೇವಸ್ಥಾನದ ಪಾವಿತ್ರ್ಯತೆ ಹಾಳಾಗಿದೆಯೆಂದು ಹೊಸದಾಗಿ ಮಾರಿಯಮ್ಮನ ದೇವಸ್ಥಾನವನ್ನು ನಿರ್ಮಿಸಿದ್ದಾರೆ.
ದೇವಾಲಯಕ್ಕೆ ದಲಿತರು ಪ್ರವೇಶಿಸಿದರೆ ದೇವಸ್ಥಾನದ ಪಾವಿತ್ರ್ಯತೆ ಹಾಳಾಗುತ್ತದೆ ಎಂದು (ಹಿಂದೂ ಧಾರ್ಮಿಕ ಹಾಗೂ ಧರ್ಮಾದಾಯ ದಾನಗಳನ್ನು) ಇಲಾಖೆ ಸರ್ಮರ್ಥಿಸಿಕೊಂಡಿದೆ. 2010ರಲ್ಲಿ ದಲಿತರೊಬ್ಬರು ಮಾರಿಯಮ್ಮನ ದೇವಾಲಯಕ್ಕೆ ಪ್ರವೇಶಿಸಿದ್ದರಿಂದ, ದೇವಾಲಯದ ಪಾವಿತ್ರ್ಯತೆ ಕಳೆದುಕೊಂಡಿದೆ ಎಂದು ಇಲಾಖೆ ಹೇಳಿದೆ.
ಈ ಹಿನ್ನಲೆಯಲ್ಲಿ ಆ ಊರಿನ ಮೇಲಿನ ವರ್ಗದ ಜನಾಂಗದವರು ಹೊಸದಾಗಿ ಮಾರಿಯಮ್ಮನ ದೇವಸ್ಥಾನ ಕಟ್ಟಿದ್ದಾರೆ. ಮಾರಿಯಮ್ಮನ ದೇವಸ್ಥಾನವನ್ನು ನೋಡಿಕೊಳ್ಳುತ್ತಿದ್ದ ಮಾರಿಯಮ್ಮನ ಕೋವಿಲ್ ಟ್ರಸ್ಟ್ ನ ಹೆಸರನ್ನು ಕೂಡ ಬದಲಾಯಿಸಲಾಗಿದೆ. ಹೊಸದಾಗಿ ದೇವಾಲಯ ನಿರ್ಮಾಣ ಮಾಡಿದ ಹಿನ್ನಲೆಯಲ್ಲಿ ಟ್ರಸ್ಟ್ ನ ಹೆಸರು ಬದಲಾಗಿದೆ. ಪುದು ಮಾರಿಯಮ್ಮನ ಕೋಯಿಲ್ ಟ್ರಸ್ಟ್ ಎಂದು ಕರೆಯಲಾಗುತ್ತದೆ. 11 ಸದಸ್ಯರನ್ನೊಳಗೊಂಡ ಈ ದೇವಾಲಯದಲ್ಲಿ ಒಬ್ಬನೂ ದಲಿತನಿಲ್ಲ.
ಹೊಸ ದೇವಾಲಯದ ಪ್ರತಿಷ್ಠಾಪನೆ ಸಮಾರಂಭದಲ್ಲಿ ದಲಿತರು ಭಾಗವಹಿಸಲು ತೆರಳಿದ್ದಾಗ ಅವರ ಮೇಲೆ ಹಲ್ಲೆ ಮಾಡಲಾಗಿದೆ. ದಾಳಿ ಮಾಡಿದ ಜನರ ಮೇಲೆ ಎಸ್ /ಎಸ್ ಟಿ ಕಾಯ್ದೆ ಅಡಿ ಪ್ರಕರಣ ದಾಖಲಿಸಿ, ದಂಡ ವಿಧಿಸಲಾಗಿದೆ. 149 ದಲಿತರಿಗೆ ಪರಿಹಾರ ನೀಡುವಂತೆ ಸೂಚಿಸಲಾಗಿತ್ತು. ಆದರೆ, ಕೇವಲ ಓರ್ವ ದಲಿತನಿಗೆ 1 ಲಕ್ಷ ನೀಡಲಾಗಿದ್ದು, ಇನ್ನುಳಿದ ದಲಿತರಿಗೆ ರು.12,500 ಕೊಡಲಾಗಿದೆ. ಧರಪುರಂ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


