ದೇಶ

ಜರ್ಮನ್‌ ಬೇಕರಿ ಸ್ಫೋಟ ಪ್ರಕರಣದ ಅಪರಾಧಿ ಹಿಮಾಯತ್‌ ಬೇಗ್ ಗಲ್ಲು ಶಿಕ್ಷೆಯಿಂದ ಪಾರು

ಪುಣೆಯ ಜರ್ಮನ್‌ ಬೇಕರಿ ಸ್ಫೋಟ ಪ್ರಕರಣದ ಅಪರಾಧಿ ಹಿಮಾಯತ್‌ ಬೇಗ್‌ ಗಲ್ಲು ಶಿಕ್ಷೆಯಿಂದ ಪಾರಾಗಿದ್ದಾರೆ.

ಜರ್ಮನ್‌ ಬೇಕರಿ ಸ್ಫೋಟ ಪ್ರಕರಣದ ಅಪರಾಧಿ ಹಿಮಾಯತ್‌ ಬೇಗ್ ಗಲ್ಲು ಶಿಕ್ಷೆಯಿಂದ ಪಾರು
ಸ್ಫೋಟ ನಡೆದ ಸ್ಥಳ
Published On :
ಮುಂಬೈ: ಪುಣೆಯ ಜರ್ಮನ್‌ ಬೇಕರಿ ಸ್ಫೋಟ ಪ್ರಕರಣದ ಅಪರಾಧಿ ಹಿಮಾಯತ್‌ ಬೇಗ್‌ ಗಲ್ಲು ಶಿಕ್ಷೆಯಿಂದ ಪಾರಾಗಿದ್ದಾರೆ. ಬೇಗ್ ಗಲ್ಲು ಶಿಕ್ಷೆಯನ್ನು ಬಾಂಬೆ ಹೈಕೋರ್ಟ್‌ ಗುರುವಾರ ಜೀವಾವಧಿ ಶಿಕ್ಷೆಗೆ ಇಳಿಸಿ ತೀರ್ಪು ನೀಡಿದೆ. ನ್ಯಾಯಾಲಯದ ಈ ತೀರ್ಪಿನಿಂದಾಗಿ ಪೊಲೀಸರಿಗೆ ಭಾರೀ ಹಿನ್ನಡೆಯಾಗಿದೆ.
ಹಿಮಾಯತ್ ಬೇಗ್‌ ವಿರುದ್ಧದ ಹತ್ತು ದೋಷಾರೋಪಗಳ ಪೈಕಿ ಒಂದರಲ್ಲಿ ನೀಡಲ್ಪಟ್ಟಿದ್ದ ಗಲ್ಲು ಶಿಕ್ಷೆಯನ್ನು ಬಾಂಬೆ ಹೈಕೋರ್ಟ್‌ ಇಂದು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿದ್ದು, ಉಳಿದ 9 ಆರೋಪಗಳನ್ನು ಖುಲಾಸೆ ಮಾಡಿದೆ.
ಮಹಾರಾಷ್ಟ್ರ ಸರ್ಕಾರ ಬೇಗ್‌ ಗಲ್ಲು ಶಿಕ್ಷೆ ತೀರ್ಪಿನ ದೃಢೀಕರಣಕ್ಕೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಆದರೆ ಬೇಗ್ ತನ್ನ ಅಪರಾಧಿತ್ವ ಮತ್ತು ತನಗೆ ನೀಡಲಾಗಿದ್ದ ಗಲ್ಲು ಶಿಕ್ಷೆಯ ತೀರ್ಪನ್ನು ಪ್ರಶ್ನಿಸಿ ಬೇಗ್‌ ಮೇಲ್ಮನವಿ ಸಲ್ಲಿಸಿದ್ದ. ವಿಚಾರಣೆ ನಡೆಸಿದ ಹೈಕೋರ್ಟ್‌ ಈ ಮೊದಲಿನ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿ ತೀರ್ಪ ನೀಡಿದೆ. 
ಪೊಲೀಸರ ಪ್ರಕಾರ ಬೇಗ್‌ ಇಂಡಿಯನ್‌ ಮುಜಾಹಿದೀನ್‌ ಉಗ್ರ ಸಂಘಟನೆಯ ಓರ್ವ ಸದಸ್ಯನಾಗಿದ್ದು ಆತನನ್ನು ಪುಣೆಯ ಕೋರೆಗಾಂವ್‌ ಪಾರ್ಕ್‌ ಪ್ರದೇಶದಲ್ಲಿನ ಜರ್ಮನ್‌ ಬೇಕರಿ ಬ್ಲಾಸ್‌ ಕೇಸ್‌ ಗೆ ಸಂಬಂಧಿಸಿ 2010ರ ಸೆಪ್ಟಂಬರ್‌ನಲ್ಲಿ ಬಂಧಿಸಿದ್ದರು.  ಜರ್ಮನ್‌ ಬೇಕರಿ ಸ್ಫೋಟ ಪ್ರಕರಣದಲ್ಲಿ 17 ಮಂದಿ ಮಡಿದು ಇತರ 58 ಮಂದಿ ಗಾಯಗೊಂಡಿದ್ದರು. ಇವರಲ್ಲಿ ಕೆಲವರು ವಿದೇಶೀಯರೂ ಸೇರಿದ್ದರು. 
2013ರಲ್ಲಿ ಪುಣೆಯ ಸೆಶನ್ಸ್‌ ಕೋರ್ಟ್‌, ಬೇಗ್‌ಗೆ ಮರಣ ದಂಡನೆಯ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.