ದೇಶ

ದಲಿತನ ಮರ್ಯಾದಾ ಹತ್ಯೆ: ಯುವತಿಯ ತಂದೆ ಪೊಲೀಸರಿಗೆ ಶರಣು

ದಲಿತನೋರ್ವ ತಮ್ಮ ಜಾತಿಯ ಹುಡುಗಿಯನ್ನು ವಿವಾಹವಾಗಿದ್ದಾನೆಂಬ ಕಾರಣಕ್ಕೆ ಯುವಕನನ್ನು ನಡುರಸ್ತೆಯಲ್ಲೇ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಯುವತಿಯ...

ದಲಿತನ ಮರ್ಯಾದಾ ಹತ್ಯೆ: ಯುವತಿಯ ತಂದೆ ಪೊಲೀಸರಿಗೆ ಶರಣು
ಹತ್ಯೆಯಾದ ದಲಿತ ಯುವಕ ಹಾಗೂ ಆತನ ಪತ್ನಿ
Published On :

ತಮಿಳುನಾಡು: ದಲಿತನೋರ್ವ ತಮ್ಮ ಜಾತಿಯ ಹುಡುಗಿಯನ್ನು ವಿವಾಹವಾಗಿದ್ದಾನೆಂಬ ಕಾರಣಕ್ಕೆ ಯುವಕನನ್ನು ನಡುರಸ್ತೆಯಲ್ಲೇ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಯುವತಿಯ ತಂದೆ ಪೊಲೀಸರಿಗೆ ಶರಣಾಗಿದ್ದಾರೆಂದು ತಿಳಿದುಬಂದಿದೆ.

ನಿನ್ನೆಯಷ್ಟೇ ದಲಿತ ಯುವಕನ ಮೇಲೆ ಹಲ್ಲೆ ನಡೆಸುತ್ತಿರುವ ಸಿಸಿಟಿವಿಯ ದೃಶ್ಯವೊಂದು ಸಾಕಷ್ಟು ಸುದ್ದಿ ಮಾಡಿತ್ತು.

ತಮಿಳುನಾಡಿದ ತಿರುಪ್ಪೊರಿನ ಉದುಮಲೈಪೆಟ್ಟೈಯಲ್ಲಿ ಘಟನೆ ನಡೆದಿತ್ತು. ತನ್ನ ಮಡದಿಯೊಂದಿಗೆ ರಸ್ತೆ ದಾಟುವ ವೇಳೆ ವಾಹನದಲ್ಲಿ ಬಂದಿರುವ ವ್ಯಕ್ತಿಗಳು ನಡುರಸ್ತೆಯಲ್ಲೇ ಅಟ್ಟಾಡಿಸಿಕೊಂಡು ಹಲ್ಲೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ನಂತರ ಯುವಕನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿತ್ತಾದರೂ ಯುವಕ ಸಾವನ್ನಪ್ಪಿದ್ದ

ಶಂಕರ್ ಹತ್ಯೆಯಾಗಿದ್ದ ಯುವಕನಾಗಿದ್ದು, ಪೊಲ್ಲಾಚಿಯಲ್ಲಿ ಮೊದಲೇ ವರ್ಷದ ಎಂಜಿನಿಯರಿಂಗ ಓದುತ್ತಿದ್ದ. ಕೌಸಲ್ಯ ಉದಾಮಲ್ ಪೇಟೆಯಲ್ಲ ಬಿಎಸ್ ಸಿ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಯಾಗಿದ್ದಳು. ಕೌಸಲ್ಯ ಮೇಲ್ಜಾತಿಯ ಯುವತಿಯಾಗಿದ್ದು ಅವರ ಕುಟುಂಬಕ್ಕ ಇವರಿಬ್ಬರ ಮದುವೆಗೆ ವಿರೋಧ ವ್ಯಕ್ತಪಡಿಸಿತ್ತು. ಇದರ ನಡುವೆಯೂ ಶಂಕರ್ ಕೌಸಲ್ಯಳನ್ನು ವಿವಾಹವಾಗಿದ್ದ.

ಈ ಹಿನ್ನೆಲೆಯಲ್ಲಿ ಕೌಸಲ್ಯ ಸಂಬಂಧಿಕರು ಶಂಕರ್ ಮೇಲೆ ದಾಳಿ ಮಾಡಿದ್ದಾರೆನ್ನಲಾಗಿದೆ. ಇದೀಗ ಯುವತಿಯ ತಂದೆ ಪೊಲೀಸರ ಬಳಿ ಶರಣಾಗಿದ್ದು, ಹತ್ಯೆ ಹಿಂದೆ ತಮ್ಮ ಪಾತ್ರವಿಲ್ಲ ಎಂದು ಹೇಳಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.