ಜಾರ್ಖಾಂಡ್‌ನಲ್ಲಿ ಅಲ್‌ಖೈದಾ ತರಬೇತಿ ಶಿಬಿರ: ದೆಹಲಿ ಪೊಲೀಸರಿಂದ ಬಹಿರಂಗ
ಭಾರತದ ಮೇಲೆ ದಾಳಿಗೆ ಮುಂದಾಗಿರುವ ಅಲ್‌ಖೈದಾ ಉಗ್ರ ಸಂಘಟನೆ ಜಾರ್ಖಾಂಡ್ ನ ಯಾವುದೋ ಭಾಗದಲ್ಲಿ ಉಗ್ರ ತರಬೇತಿ ಶಿಬಿರವನ್ನು ನಡೆಸುತ್ತಿದ್ದಾರೆಂಬ...

ನವದೆಹಲಿ: ಭಾರತದ ಮೇಲೆ ದಾಳಿಗೆ ಮುಂದಾಗಿರುವ ಅಲ್‌ಖೈದಾ ಉಗ್ರ ಸಂಘಟನೆ ಜಾರ್ಖಾಂಡ್ ನ ಯಾವುದೋ ಭಾಗದಲ್ಲಿ ಉಗ್ರ ತರಬೇತಿ ಶಿಬಿರವನ್ನು ನಡೆಸುತ್ತಿದ್ದಾರೆಂಬ ಆಘಾತಕಾರಿ ಸುದ್ದಿಯನ್ನು ದೆಹಲಿ ಪೊಲೀಸರು ಬಹಿರಂಗಪಡಿಸಿದ್ದಾರೆ.
ಉಗ್ರ ಮಹಮ್ಮದ್ ಆಸೀಫ್ ಬಗ್ಗೆ ಚಾರ್ಜ್‌ಶೀಟ್ ಸಲ್ಲಿಕೆಗೆ ಸಮಯಾವಕಾಶ ನೀಡುವಂತೆ ಕೋರಿ ದೆಹಲಿ ನ್ಯಾಯಾಲಯಕ್ಕೆ ಕಳೆದ ವಾರ ಸಲ್ಲಿಸಿದ್ದ ಅರ್ಜಿಯಲ್ಲಿ ದೆಹಲಿ ಪೊಲೀಸ್ ಇಲಾಖೆ ಈ ಸ್ಫೋಟಕ ಮಾಹಿತಿಯನ್ನು ನೀಡಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ.
ಜಾರ್ಖಾಂಡ್ ಮೂಲದ ಅಲ್‌ಖೈದಾ ಉಗ್ರ ಅಬು ಸುಫಿಯಾನ್‌ಗಾಗಿ ನಾವು ಹುಡುಕಾಟ ನಡೆಸುತ್ತಿದ್ದೇವೆ, ಈತ ಪಾಕ್‌ಗೆ ತೆರಳಿ ಅಲ್‌ಖೈದಾ ಮತ್ತು ಲಷ್ಕರ್ ಸಂಘಟನೆ ನಡೆಸುತ್ತಿರುವ ಉಗ್ರ ತರಬೇತಿ ಪಡೆದಿದ್ದಾನೆ ಎನ್ನಲಾಗಿದೆ. ಪೊಲೀಸರ ಈ ಮಾಹಿತಿ ಜಾರ್ಖಾಂಡ್‌ನಲ್ಲಿ ಭದ್ರತೆಯನ್ನು ಬಿಗಿಗೊಳ್ಳುವಂತೆ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


