ಹೋಂವರ್ಕ್ ಮಾಡಿಲ್ಲವೆಂದು ಮಕ್ಕಳನ್ನು ಬೆತ್ತಲೆ ಮಾಡಿದ ಶಿಕ್ಷಕರು
ಹೋಂವರ್ಕ್ ಮಾಡಿಲ್ಲ ಎಂಬ ಕಾರಣಕ್ಕೆ ಮಕ್ಕಳನ್ನು ಬೆತ್ತಲೆ ಮಾಡಿ ಶಿಕ್ಷೆ ನೀಡಿರುವ ಘಟನೆಯೊಂದು ಮಲ್ವಾನಿಯ ಗೇಟ್ ನಂ.5ರಲ್ಲಿ ನಡೆದಿದೆ...

ಮುಂಬೈ: ಹೋಂವರ್ಕ್ ಮಾಡಿಲ್ಲ ಎಂಬ ಕಾರಣಕ್ಕೆ ಮಕ್ಕಳನ್ನು ಬೆತ್ತಲೆ ಮಾಡಿ ಶಿಕ್ಷೆ ನೀಡಿರುವ ಘಟನೆಯೊಂದು ಮಲ್ವಾನಿಯ ಗೇಟ್ ನಂ.5ರಲ್ಲಿ ನಡೆದಿದೆ.
ಮಕ್ಕಳಿಗೆ ಬೆತ್ತಲೆ ಶಿಕ್ಷೆ ನೀಡಿರುವ ವಿಡಿಯೋ ವಾಟ್ಸ್ ಅಪ್ ಗಳಲ್ಲಿ ಓಡಾಡುತ್ತಿತ್ತು. ಈ ವಿಡಿಯೋವನ್ನು ನೋಡಿದ ಮುಂಬೈ ಪೊಲೀಸ್ ಆಯುಕ್ತ ದತ್ತ ಫಡ್ಸಲ್ಗಿಕರ್ ಅವರು, ಇದೀಗ ಪ್ರಕರಣ ಸಂಬಂಧ ಶಿಕ್ಷಕರ ವಿರುದ್ಧ ಎಫ್ ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಪ್ರಸ್ತುತ ವಾಟ್ಸ್ ಅಪ್ ಗಳಲ್ಲಿ ಓಡಾಡುತ್ತಿರುವ ವಿಡಿಯೋ ಪ್ರಕಾರ, ಟ್ಯುಟೋರಿಯಲ್ ತರಗತಿಗೆ ಹೋಗುತ್ತಿದ್ದ 2 ಹಾಗೂ 3ನೇ ತರಗತಿಯ ಇಬ್ಬರು ಮಕ್ಕಳು ಅಲ್ಲಿ ಶಿಕ್ಷಕರು ನೀಡಿದ್ದ ಹೋಂವರ್ಕ್ ಮಾಡಿಲ್ಲ. ಹೀಗಾಗಿ ಇದಕ್ಕೆ ಕೋಪಗೊಂಡಿರುವ ಶಿಕ್ಷಕರು ಮಕ್ಕಳಿಗೆ ಬೆತ್ತಲಾಗಿ ಹೊರಗೆ ನಿಲ್ಲುವಂತೆ ಹೇಳಿದ್ದಾರೆ. ಇದರಂತೆ ಮಕ್ಕಳು ಬೆತ್ತಲಾಗಿ ನಿಂತು ಶಿಕ್ಷೆ ಅನುಭವಿಸಿದ್ದಾರೆ. ಈ ವಿಡಿಯೋವೀಗ ಮುಂಬೈ ಪೊಲೀಸರಿಗೆ ಸಿಕ್ಕಿದ್ದು, ಪ್ರಕರಣವನ್ನು ಪೊಲೀಸ್ ಆಯುಕ್ತರು ಗಂಭೀರವಾಗಿ ಪರಿಗಣಿಸಿ, ತನಿಖೆಗೆ ಆದೇಶಿಸಿದ್ದಾರೆ. ಈವರೆಗೂ ಯಾರೊಬ್ಬರನ್ನು ಬಂಧನಕ್ಕೊಳಪಡಿಸಿಲ್ಲ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


