ಹುಲಿ ರಕ್ಷಣೆಗೆ ಭಾರತ-ನೇಪಾಳ ಜಂಟಿ ಕಾರ್ಯತಂತ್ರ
ಹುಲಿ ಸಂರಕ್ಷಣೆ ಕುರಿತು ಜಂಟಿ ಕಾರ್ಯತಂತ್ರ ರೂಪಿಸಲು ಭಾರತ- ನೇಪಾಳ ಅಧಿಕಾರಿಗಳು ಮಾ.14 ರಂದು ಸಭೆ ನಡೆಸಲಿದ್ದಾರೆ.

ನವದೆಹಲಿ: ಹುಲಿ ಸಂರಕ್ಷಣೆ ಕುರಿತು ಜಂಟಿ ಕಾರ್ಯತಂತ್ರ ರೂಪಿಸಲು ಭಾರತ- ನೇಪಾಳ ಅಧಿಕಾರಿಗಳು ಮಾ.14 ರಂದು ಸಭೆ ನಡೆಸಲಿದ್ದಾರೆ.
ನೇಪಾಳ ಗಡಿ ಪ್ರದೇಶದಲ್ಲಿ ಕಳೆದ ವರ್ಷ 14 ಹುಲಿಗಳನ್ನು ಬೇಟೆಯಾಡಲಾಗಿದ್ದು, ಹುಲಿ ಸಂತತಿ ಕ್ಷೀಣಿಸದಂತೆ ಎಚ್ಚರ ವಹಿಸುವ ಬಗ್ಗೆ ಭಾರತ-ನೇಪಾಳದ ಹಿರಿಯ ಅರಣ್ಯ ಅಧಿಕಾರಿಗಳು ಸಭೆಯಲ್ಲಿ ಚರ್ಚಿಸಲಿದ್ದಾರೆ. ಎರಡು ದಿನಗಳ ಕಾಲ ಈ ಸಭೆ ನಡೆಯಲಿದ್ದು, ಹುಲಿ ಬೇಟೆ ತಡೆಗೆ ಜಂಟಿ ಕಾರ್ಯತಂತ್ರ ರೂಪಿಸುವುದು ಸಭೆಯ ಪ್ರಮುಖ ಉದ್ದೇಶವಾಗಿದೆ ಎಂದು ನೇಪಾಳ ನಿಯೋಗದ ಮುಖ್ಯಸ್ಥ ಅಖಿಲೇಶ್ವರ್ ಕರ್ಣ ಹೇಳಿದ್ದಾರೆ.
ಜನವರಿ 2015 -ಫೆ.2016 ರ ವರೆಗೆ ಗಡಿ ಪ್ರದೇಶದಲ್ಲಿ 14 ಹುಲಿಗಳನ್ನು ಕೊಲ್ಲಲಾಗಿದೆ. ಇದರಿಂದಾಗಿ 2020 ರ ವೇಳೆಗೆ ಹುಲಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ಯೋಜನೆಗೆ ಅಡ್ಡಿ ಉಂಟಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


